ETV Bharat / state

ಮುರುಘಾ ಶ್ರೀ ಬಂಧನ: ಚಿತ್ರದುರ್ಗ ಮಠಕ್ಕೆ ಬಸವ ಶ್ರೀ ಪ್ರಶಸ್ತಿ ವಾಪಸ್​ಗೆ ಪಿ ಸಾಯಿನಾಥ್ ನಿರ್ಧಾರ - journalist P sainath on murugha mutt case

ಪೋಕ್ಸೋ ಆರೋಪದ ಹಿನ್ನೆಲೆ ಮುರುಘಾ ಶ್ರೀ ಬಂಧನದ ಬೆನ್ನಲ್ಲೇ ಚಿತ್ರದುರ್ಗ ಮಠದಿಂದ ಪಡೆದಿದ್ದ ಬಸವಶ್ರೀ ಪ್ರಶಸ್ತಿಯನ್ನ ವಾಪಸ್ ಮಾಡುವುದಾಗಿ ಪತ್ರಕರ್ತ ಪಿ ಸಾಯಿನಾಥ್ ಪ್ರಕಟಿಸಿದ್ದಾರೆ.

ಪತ್ರಕರ್ತ ಪಿ ಸಾಯಿನಾಥ್
ಪತ್ರಕರ್ತ ಪಿ ಸಾಯಿನಾಥ್
author img

By

Published : Sep 2, 2022, 8:38 PM IST

ಬೆಂಗಳೂರು: ಪೋಕ್ಸೋ ಆರೋಪಕ್ಕೆ ಸಿಲುಕಿ ಮುರುಘಾ ಶರಣರು ಬಂಧನಕ್ಕೊಳಗಾದ ಬೆನ್ನಲ್ಲೇ ಚಿತ್ರದುರ್ಗ ಮಠದಿಂದ ಪಡೆದಿದ್ದ ಬಸವ ಶ್ರೀ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಪಿ ಸಾಯಿನಾಥ್ ವಾಪಸ್ ಮಾಡಲು ನಿರ್ಧರಿಸಿದ್ದಾರೆ. 2017 ರಲ್ಲಿ ಮಠದಿಂದ ನೀಡಿದ್ದ ಬಸವಶ್ರೀ ಪ್ರಶಸ್ತಿ ಮತ್ತು ಅದರೊಂದಿಗೆ ಬಂದ 5 ಲಕ್ಷ ರೂ. ಬಹುಮಾನದ ಮೊತ್ತವನ್ನು ಚೆಕ್ ಮೂಲಕ ಹಿಂದಿರುಗಿಸುತ್ತೇನೆ ಎಂದು ಪತ್ರಕರ್ತ ಹಾಗೂ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ, ಸಂಪಾದಕ ಪಿ ಸಾಯಿನಾಥ್ ಪತ್ರ ಬರೆದಿದ್ದಾರೆ.

ಚಿತ್ರದುರ್ಗ ಮಠಕ್ಕೆ ಬಸವ ಶ್ರೀ ಪ್ರಶಸ್ತಿ ವಾಪಸ್ ಮಾಡಿದ ಪತ್ರಕರ್ತ ಪಿ ಸಾಯಿನಾಥ್: ಚಿತ್ರದುರ್ಗ ಮುರುಘಾ ಮಠದ ಮಠಾಧೀಶರಾದ ಡಾ.ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿದ್ದಾರೆ ಎನ್ನಲಾದ ಆರೋಪ ಪ್ರಕರಣದ ಬೆಳವಣಿಗೆಗಳನ್ನು ಮಾಧ್ಯಮ ವರದಿಗಳಿಂದ ತಿಳಿದು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂದು ನಾನು 2017ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು (ಮತ್ತು ಅದರೊಂದಿಗೆ ಬಂದ 5 ಲಕ್ಷ ರೂ. ಬಹುಮಾನದ ಮೊತ್ತವನ್ನು ಚೆಕ್ ಮೂಲಕ) ಹಿಂದಿರುಗಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.

ಇಂತಹ ಘಟನೆಗಳನ್ನು ಬೆಳಕಿಗೆ ತರಲು ಮೈಸೂರು ಮೂಲದ 'ಒಡನಾಡಿ' ಎನ್‌ಜಿಒ ನಡೆಸುತ್ತಿರುವ ಪ್ರಯತ್ನಗಳು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳ ಕಾಲದ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಗರಣದ ತನಿಖೆಯನ್ನು ತೀವ್ರವಾಗಿ ಕೈಗೆತ್ತಿಕೊಂಡು, ಯಾವುದೇ ರೀತಿಯ ರಾಜೀ ಮಾಡಿಕೊಳ್ಳಲು ಅವಕಾಶ ನೀಡದಂತೆ ಕ್ರಮ ವಹಿಸಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಅವರು ಮನವಿ ಮಾಡಿದ್ದಾರೆ.

ಪೋಕ್ಸೋ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಸೆಪ್ಟಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗ ನ್ಯಾಯಾಲಯ ಆದೇಶಿಸಿದೆ.

(ಇದನ್ನೂ ಓದಿ: ಕೋರ್ಟ್​​ಗೆ ಮುರುಘಾ ಶ್ರೀ ಹಾಜರು: ಸೆ.5ರವರೆಗೆ ಪೊಲೀಸ್​ ಕಸ್ಟಡಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.