ETV Bharat / state

ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಹಚ್ಚಿರುವುದು ನೋವು ತಂದಿದೆ: ಸರ್ಫರಾಜ್ ಖಾನ್

author img

By

Published : May 5, 2021, 11:12 AM IST

ಯಾವುದೇ ಕೋಮು ಭಾವನೆ ಇಲ್ಲದೆ, ಎಲ್ಲಾ ಸಮುದಾಯದ ಜನರಿಗೂ ಬೆಡ್ ಒದಗಿಸಲು, ಆಕ್ಸಿಜನ್ ನೀಡಲು ರಾತ್ರಿ ಹಗಲು ದುಡಿದಿದ್ದೇನೆ. ವಾರ್ ರೂಂ ದಂಧೆಯಲ್ಲಿ ನನ್ನ ಹೆಸರು ಸೇರಿಸಿಕೊಂಡಿರುವುದು ಅಪಾರ ನೋವು ತಂದಿದೆ ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ.

ಬಿಬಿಎಂಪಿ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್
ಬಿಬಿಎಂಪಿ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಪ್ರಕರಣದಲ್ಲಿ ಎಲ್ಲಾ ಹದಿನಾರು ಗುತ್ತಿಗೆ ನೌಕರರನ್ನು ಪಾಲಿಕೆಗೆ ಸೇರಿಸಿಕೊಳ್ಳುವಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಪಾತ್ರವೂ ಇದೆ. ಮೊದಲು ಅವರನ್ನು ಹೊಣೆ ಮಾಡಬೇಕು ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಫರಾಜ್ ಖಾನ್, ಯಾವುದೇ ಕೋಮು ಭಾವನೆ ಇಲ್ಲದೆ, ಎಲ್ಲಾ ಸಮುದಾಯದ ಜನರಿಗೂ ಬೆಡ್ ಒದಗಿಸಲು, ಆಕ್ಸಿಜನ್ ನೀಡಲು ರಾತ್ರಿ ಹಗಲು ದುಡಿದಿದ್ದೇನೆ. ವಾರ್ ರೂಂ ದಂಧೆಯಲ್ಲಿ ನನ್ನ ಹೆಸರು ಸೇರಿಸಿಕೊಂಡಿರುವುದು ಅಪಾರ ನೋವು ತಂದಿದೆ. ನನ್ನ ಕೆಲಸ ಏನಿದ್ದರೂ ಕೋವಿಡ್ ಕೇರ್ ಸೆಂಟರ್​​ಗಳ ಉಸ್ತುವಾರಿ ಮತ್ತು ಘನತ್ಯಾಜ್ಯ ನಿರ್ವಹಣೆ ಅಷ್ಟೇ. ಆದರೆ ವಾರ್ ರೂಂಗೆ ಬೇಕಾದ ವೈದ್ಯರು, ಸಿಬ್ಬಂದಿ ನೇಮಕ ಆರೋಗ್ಯ ಇಲಾಖೆ ಹಾಗೂ ಆಯಾ ಬಿಬಿಎಂಪಿ ವಲಯಗಳ ಕೆಲಸ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಈಟವಿ ಭಾರತಕ್ಕೂ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಹಜ್ ಭವನಕ್ಕೆ ತಮ್ಮದೇ ಕೋಮಿನ ಅಧಿಕಾರಿಯನ್ನು ಬೇರೆ ವಾರ್ಡ್​ನಿಂದ ತಂದು ನೇಮಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಇದಕ್ಕೆ ಉತ್ತರಿಸಿದ ಅವರು, ಈಗಾಗಲೇ ಚಿತ್ರಾ ಎನ್ನುವವರು ನೋಡಲ್ ಅಧಿಕಾರಿಯಾಗಿದ್ದಾರೆ. ಅವರ ಸಹಾಯಕ್ಕೆ ಇವರನ್ನೂ ಸಹ ನೇಮಿಸಲಾಗಿದೆ ಅಷ್ಟೇ ಎಂದರು. ಹಿರಿಯ ಆರೋಗ್ಯ ಪರಿವೀಕ್ಷಕರಾದ ಅನೀಸ್‌ ಫಾತಿಮಾ ಅವರನ್ನು ಹೆಚ್ಚುವರಿ ನೋಡಲ್ ಅಧಿಕಾರಿಯಾಗಿ ಹಜ್ ಭವನಕ್ಕೆ ನೇಮಿಸಲಾಗಿದೆ.

ಇದನ್ನೂ ಓದಿ : ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ: 17 ಮಂದಿ ಗುತ್ತಿಗೆ ಸಿಬ್ಬಂದಿ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.