ಬೆಂಗಳೂರು: ನಗರದ ಬಿಜು ಜೋಸೆಫ್ ಹಾಗೂ ಡಿಂಪಲ್ ಬಿಜು ಅವರ ಮಗ ಜೆಫಿನ್ ಬಿಜು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 12ನೇ ತರಗತಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ನಡೆಸಿದ ಜೆಫಿನ್ ಶಾಲಾ ಶಿಕ್ಷಕರು ಹಾಗೂ ಪೋಷಕರ ಬೆಂಬಲದಿಂದ ಓದಿ, ಸಿಬಿಎಸ್ಸಿ 12ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 98.6 ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ.
ಜೆಫಿನ್ ಅವರ ಸಹೋದರ ಕೂಡಾ ಮದ್ರಾಸಿನ ಐಐಟಿಯಲ್ಲಿ ಓದುತಿದ್ದು, ಅಣ್ಣ ಕಾಲೇಜ್ ಟಾಪರ್ ಆಗಿದ್ದರು. ಹೀಗಾಗಿ ತನ್ನ ಸಾಧನೆಗೆ ಅಣ್ಣನೇ ಸ್ಪೂರ್ತಿ ಎನ್ನುತ್ತಾರೆ ಜೆಫಿನ್. ಅಲ್ಲದೆ ತಾಯಿ ಡಿಂಪಲ್ ಬಿಜು ಅವರೂ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾಗಿದ್ದು, ಸ್ವಯಂ ನಿವೃತ್ತಿ ಪಡೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿದ್ದಾರೆ.
ಜೆಇಇ ಮೈನ್ ಎಕ್ಸಾಂನಲ್ಲೂ 335ನೇ ಆಲ್ ಇಂಡಿಯಾ ರ‍್ಯಾಂಕ್ ಪಡೆದಿರುವ ಜೆಫಿನ್ ಇದೇ ತಿಂಗಳಲ್ಲಿ ನಡೆಯಲಿರುವ ಜೆಇಇ ಅಡ್ವಾನ್ಸ್, ಹಾಗೂ ಮದ್ರಾಸಿನ ಐಐಟಿ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿನಿತ್ಯ ಎಂಟರಿಂದ ಹತ್ತು ಗಂಟೆಗಳ ಕಾಲ ಓದಿ, ಶ್ರಮ ಪಟ್ಟಿದ್ದರಿಂದ ಸಿಬಿಎಸ್ಸಿ ಎಕ್ಸಾಂನಲ್ಲಿ ರಾಜ್ಯಕ್ಕೇ ಪ್ರಥಮ ರ‍್ಯಾಂಕ್ ಬರಲು ಸಾಧ್ಯವಾಯಿತು. ಮುಂದೆ ಮದ್ರಾಸಿನ ಐಐಟಿಯಲ್ಲಿ ಶಿಕ್ಷಣ ಪಡೆಯುವ ಗುರಿಯನ್ನು ಹೊಂದಿದ್ದಾರೆ ಜೆಫಿಮ್ ಬಿಜು.