ETV Bharat / state

ತಟ್ಟೆಯಲ್ಲಿ ನೊಣ ಸತ್ತುಬಿದ್ದಿದ್ದರೂ, ಅನ್ಯರ ತಟ್ಟೆ ನೋಡುವ ಚಟವೇಕೆ? : ಬಿಜೆಪಿಗೆ ಕುಟುಕಿದ ಜೆಡಿಎಸ್ - ಜೆಡಿಎಸ್

ನಿಮ್ಮ ಪಕ್ಷದಲ್ಲಿ ಒಂದೇ ಕುಟುಂಬದವರು ಅಧಿಕಾರದಲ್ಲಿಲ್ಲ ಎಂದು ಸಾಬೀತುಪಡಿಸಿ - ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ - ಸೋಲಿನ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ದುಂಬಾಲು ಬಿದ್ದಿರುವ ರಾಜ್ಯ ನಾಯಕರು.

jds-political-attack-bjp-on-twitter
ತಟ್ಟೆಯಲ್ಲಿ ನೊಣ ಸತ್ತುಬಿದ್ದಿದ್ದರೂ, ಅನ್ಯರ ತಟ್ಟೆ ನೋಡುವ ಚಟವೇಕೆ? : ಬಿಜೆಪಿಗೆ ಕುಟುಕಿದ ಜೆಡಿಎಸ್
author img

By

Published : Feb 15, 2023, 9:13 PM IST

ಬೆಂಗಳೂರು: ಕುಟುಂಬ ರಾಜಕಾರಣ ಎಂಬ ಹಳಸಲು ವಿಷಯವನ್ನು ಇನ್ನೂ ಎಷ್ಟು ದಿನ ಲಂಬಿಸುತ್ತಾ ಕಾಲಹರಣ ಮಾಡುತ್ತೀರಿ, ರಾಜ್ಯ ಬಿಜೆಪಿ ಯವರೆ? ಎಂದು ಜೆಡಿಎಸ್ ತಿರುಗೇಟು ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಕಾರ್ಯಕರ್ತರ ಒತ್ತಡದಿಂದಾಗಿಯೇ ದೇವೇಗೌಡರ ಕುಟುಂಬವು ರಾಜಕಾರಣದಲ್ಲಿ ಸಕ್ರಿಯವಾಗಿರುವುದು. ತಟ್ಟೆಯಲ್ಲಿ ನೊಣ ಸತ್ತುಬಿದ್ದಿದ್ದರೂ, ಅನ್ಯರ ತಟ್ಟೆ ನೋಡುವ ಚಟವೇಕೆ? ಎಂದು ಟ್ವಿಟರ್​ನಲ್ಲಿ ಟೀಕಾ ಪ್ರಹಾರ ಮಾಡಿದೆ.

ಕುಟುಂಬ ರಾಜಕಾರಣದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ನಿಮಗೆ ನೈತಿಕತೆ ಇದ್ದರೆ ನಿಮ್ಮ ಪಕ್ಷದಲ್ಲಿ ಒಂದೇ ಕುಟುಂಬದವರು ಅಧಿಕಾರದಲ್ಲಿಲ್ಲ ಎಂದು ಸಾಬೀತುಪಡಿಸಿ. ನಿಮ್ಮ ಧಮ್ಮು-ತಾಕತ್ತು ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ, ನಿಮ್ಮವರ ಮನಸ್ಥಿತಿ ಎಂದು ಕಿಡಿಕಾರಿದೆ. ಪಕ್ಷ ಕಟ್ಟಿ, ಹೋರಾಟ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಅವಮಾನಿಸಿದಿರಲ್ಲ! ಯಾರ 'ಸಂತೋಷ'ಕ್ಕೆ ಯಡಿಯೂರಪ್ಪ ಅವರನ್ನು ಬಳಸಿ ಬೀಸಾಡಿದ್ರಿ? ಅವರನ್ನು ಚುನಾವಣೆಗೆ, ಅಧಿಕಾರಕ್ಕಾಗಿ ಉಪಯೋಗಿಸಿ ನಂತರ ಬಲಿಕೊಟ್ಟಿದ್ದು ಏಕೆ ಎಂದು ಹೇಳುವಿರೆ? ಎಂದು ಪ್ರಶ್ನಿಸಿದೆ.

  • ಕುಟುಂಬ ರಾಜಕಾರಣ ಎಂಬ ಹಳಸಲು ವಿಷಯವನ್ನು ಇನ್ನೂ ಎಷ್ಟು ದಿನ ಲಂಬಿಸುತ್ತಾ ಕಾಲಹರಣ ಮಾಡುತ್ತೀರಿ, ರಾಜ್ಯ @BJP4Karnataka ಯವರೆ? ಕಾರ್ಯಕರ್ತರ ಒತ್ತಡದಿಂದಾಗಿಯೇ ದೇವೇಗೌಡರ ಕುಟುಂಬವು ರಾಜಕಾರಣದಲ್ಲಿ ಸಕ್ರಿಯವಾಗಿರುವುದು. ತಟ್ಟೆಯಲ್ಲಿ ನೊಣ ಸತ್ತುಬಿದ್ದಿದ್ದರೂ, ಅನ್ಯರ ತಟ್ಟೆ ನೋಡುವ ಚಟವೇಕೆ? 1/5 pic.twitter.com/sK3LoF4nN1

    — Janata Dal Secular (@JanataDal_S) February 15, 2023 " class="align-text-top noRightClick twitterSection" data=" ">

ದೀಪ ಆರುವಾಗ ಬಹಳ ಪ್ರಕಾಶಮಾನವಾಗಿ ಉರಿಯುತ್ತದಂತೆ. ನಿಮ್ಮದು ಅದೇ ಕತೆ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ಹಾಗೆ, ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿ ಬರುವ ಸೀಟುಗಳನ್ನು ಕಳೆದುಕೊಳ್ಳುತ್ತೀರಿ. ಸೋಲಿನ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ದುಂಬಾಲು ಬಿದ್ದಿರುವುದು ನೀವು. ಸೋಲು-ಗೆಲುವು ಯಾರಿಗೂ ಹೊರತಲ್ಲ. ಸೋತರೂ, ಗೆದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರಣಕ್ಕಾಗಿ ಜೆಡಿಎಸ್ ಇವತ್ತಿಗೂ ರಾಜ್ಯ ರಾಜಕಾರಣದಲ್ಲಿ ಪ್ರಸ್ತುತವಾಗಿರುವುದು. ಹಲಾಲು ಟೋಪಿ ಕೆಲಸ ಮಾಡುತ್ತಾ, ಸ್ವಾಭಿಮಾನ ಅಡ ಇಡುವ ಗುಲಾಮಗಿರಿ ನಮಗಿಲ್ಲ. ಅಂತಹ ನವರಂಗಿ ಆಟದಲ್ಲಿ ಪ್ರವೀಣರಲ್ಲವೇ ನೀವು? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಅಧಿಕಾರಿಗಳ ಕಳಪೆ ಕಾರ್ಯವೈಖರಿಗೆ ಛೀಮಾರಿ ಹಾಕಿದ ಹೈಕೋರ್ಟ್: "ನೊಂದವರ ನೋವ ನೋಯದವರೆತ್ತ ಬಲ್ಲರೋ?" ಎಂಬ ಅಕ್ಕ ಮಹಾದೇವಿಯವರ ಸಾಲಿನಂತೆ, ಸಂಪೂರ್ಣ ಕುಸಿದು ಕೊಳೆತು ಹೋಗಿರುವ ಆಡಳಿತಕ್ಕೆ ಹಿಡಿದ ಕನ್ನಡಿ ಈ ಸುದ್ದಿ. ರಾಜ್ಯದ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಬಗ್ಗೆ ಸರ್ಕಾರ, ಅಧಿಕಾರಿಗಳ ಕಳಪೆ ಕಾರ್ಯವೈಖರಿಗೆ ಹೈಕೋರ್ಟ್ ಮತ್ತೆ ಛೀಮಾರಿ ಹಾಕಿದೆ ಎಂದು ಜೆಡಿಎಸ್ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಜೆಡಿಎಸ್, ಇತ್ತೀಚೆಗಷ್ಟೆ ಶಾಲಾ ಸಮವಸ್ತ್ರ ವಿತರಣೆ ವಿಷಯದಲ್ಲಿ ಸರ್ಕಾರಿ ಶಾಲಾ ಮಕ್ಕಳೆಡೆಗೆ ದಿವ್ಯ ನಿರ್ಲಕ್ಷ ತೋರಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಸೂಕ್ತ ದಾಖಲೆ ಕೊಡಲು ಹೇಳಿತ್ತು. ರಾಜ್ಯ ಬಿಜೆಪಿ ಸರ್ಕಾರ ಮೂರು ಬಿಟ್ಟಿದ್ದು, ನ್ಯಾಯಾಲಯದ ದಾರಿ ತಪ್ಪಿಸಲು ಹೋಗಿ ಮತ್ತೆ ಸಿಕ್ಕಿಬಿದ್ದಿದೆ ಎಂದು ಹೇಳಿದೆ.

  • "ನೊಂದವರ ನೋವ ನೋಯದವರೆತ್ತ ಬಲ್ಲರೋ?" ಎಂಬ ಅಕ್ಕ ಮಹಾದೇವಿಯವರ ಸಾಲಿನಂತೆ, ಸಂಪೂರ್ಣ ಕುಸಿದು ಕೊಳೆತು ಹೋಗಿರುವ ಆಡಳಿತಕ್ಕೆ ಹಿಡಿದ ಕನ್ನಡಿ ಈ ಸುದ್ದಿ. ರಾಜ್ಯದ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಬಗ್ಗೆ ಸರ್ಕಾರ, ಅಧಿಕಾರಿಗಳ ಕಳಪೆ ಕಾರ್ಯವೈಖರಿಗೆ ಹೈಕೋರ್ಟ್ ಮತ್ತೆ ಛೀಮಾರಿ ಹಾಕಿದೆ. 1/5 pic.twitter.com/SMfBIsXn36

ಶಾಲಾ ಮಕ್ಕಳಿಗೆ ನೀಡಬೇಕಿರುವ ಸಮವಸ್ತ್ರ, ಶೂ ಮತ್ತು ಕಾಲುಚೀಲ ವಿತರಿಸಿರುವುದನ್ನು ಪುಷ್ಠೀಕರಿಸುವ ಯಾವ ದಾಖಲೆಯು ಇಲಾಖೆಯ ಅಧಿಕಾರಿಗಳು ನ್ಯಾಯಲಯಕ್ಕೆ ಸಲ್ಲಿಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೆ, ಇಂತಹ ಕನಿಷ್ಠ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಆಧಾರವಿಲ್ಲದೇ ಕಾಂಗ್ರೆಸ್ ಆರೋಪ ಮಾಡುತ್ತಿದೆ.. ಬರಿ ಗಾಳಿಯಲ್ಲಿ ಗುಂಡು: ಸಿ ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.