ETV Bharat / state

ಪಟ್ಟು ಸಡಿಲಿಸದ‌ ಜೆಡಿಎಸ್, ಬೇಡಿಕೆ ಒಪ್ಪದ ಸರ್ಕಾರ: ಕಲಾಪ ಮುಂದೂಡಿ ಸಂಧಾನ ಸಭೆ ನಡೆಸಿದ ಸಭಾಪತಿ - ಕಲಾಪ ಮುಂದೂಡಿಕೆ

ನರ್ಸಿಂಗ್ ಕಾಲೇಜು ಪರವಾನಗಿ ಅವ್ಯವಹಾರ ಆರೋಪ ಪ್ರಕರಣದ ತನಿಖೆಗೆ ಸದನ ಸಮಿತಿ‌ ರಚಿಸುವಂತೆ ಆಗ್ರಹಿಸಿ ಸದನದ ಬಾವಿಯಲ್ಲಿ ಜೆಡಿಎಸ್​ ಪ್ರತಿಭಟನೆ ನಡೆಸಿದೆ.

JJDS MLAs protest  during council session
ಪಟ್ಟು ಸಡಿಲಿಸದ‌ ಜೆಡಿಎಸ್
author img

By

Published : Mar 22, 2021, 12:51 PM IST

ಬೆಂಗಳೂರು: ನರ್ಸಿಂಗ್ ಕಾಲೇಜು ಪರವಾನಗಿ ಅವ್ಯವಹಾರ ಆರೋಪ ಪ್ರಕರಣದ ತನಿಖೆಗೆ ಸದನ ಸಮಿತಿ‌ ರಚಿಸುವಂತೆ ಪರಿಷತ್ ನಲ್ಲಿ ಜೆಡಿಎಸ್ ಪಟ್ಟು ಮುಂದುವರೆಸಿದೆ. ಅಷ್ಟೇ ಅಲ್ಲ ಸದನದ ಬಾವಿಯಲ್ಲಿ ಧರಣಿ ನಡೆಸುತ್ತಿದೆ. ಆಡಳಿತ ಪಕ್ಷ ಮತ್ತು ಜೆಡಿಎಸ್ ಪಟ್ಟು ಸಡಿಲಿಸದೇ ಇರುವ ಕಾರಣ ಕಲಾಪವನ್ನು‌ 10 ನಿಮಿಷ ಮುಂದೂಡಿಕೆ ಮಾಡಿದ ‌ಸಭಾಪತಿಗಳು ಸಂಧಾನ ಸಭೆ ನಡೆಸಿದರು.

ಪಟ್ಟು ಸಡಿಲಿಸದ‌ ಜೆಡಿಎಸ್
ಪರಿಷತ್ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ದುಡ್ಡಿನ ದಂಧೆ ನಡೆಸಿ ವಿದ್ಯಾರ್ಥಿಗಳ ಜೀವನ ಹಾಳು‌ ಮಾಡ್ತಾ ಇದ್ದಾರೆ. ಮನಸ್ಸಿಗೆ ಬಂದ ಹಾಗೆ ಮೂರು ಹಂತದಲ್ಲಿ ಸ್ಟ್ರೀಮ್ ಲೈನ್ ಮಾಡಲು ಬರುವುದಿಲ್ಲ. ಈ ಮಂತ್ರಿ ಎಷ್ಟು ಪಾರದರ್ಶಕ ಇದ್ದಾರೆ ಅಂತ ನಮಗೆ ಗೊತ್ತಿದೆ. ರಾಜ್ಯದ ಜನರ ಆರೋಗ್ಯ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದು, 6-7 ಜ‌‌ನ‌ ಸಿಂಡಿಕೇಟ್ ಸದಸ್ಯರು ಚಿಕ್ಕಬಳ್ಳಾಪುರದವರು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸದನ ಸಮಿತಿ ಮಾಡಿ‌ ನಿಮ್ಮ ಪಕ್ಷದವರನ್ನೇ ಅಧ್ಯಕ್ಷರನ್ನಾಗಿ ಮಾಡಿ ನಿವೃತ್ತ ಜಡ್ಜ್ ಅವರಿಂದ ತನಿಖೆ ಮಾಡಿದರೆ ಯಾವ ರೀತಿ ಉತ್ತರ ಬರುತ್ತದೆ ಅಂತ ಗೊತ್ತು. ಈ‌ ಸಚಿವರು ಆ ನಿವೃತ್ತ ನ್ಯಾಯಾಧೀಶರನ್ನೇ ದುಡ್ಡು ಕೊಟ್ಟು ಬುಕ್ ಮಾಡುತ್ತಾರೆ. ಇವರ ಚರಿತ್ರೆ ಏನು ಅಂತ ನಮಗೆ ಗೊತ್ತಿದೆ ಎಂದು ಸಚಿವ ಸುಧಾಕರ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ನಂತರ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಹೊರರಾಜ್ಯದವರಾಗಿದ್ದು, ಅವರು ಕಾಲೇಜಿಗೆ ಬರಲ್ಲ, ನೇರವಾಗಿ ಪರೀಕ್ಷೆಗೆ ಬರುತ್ತಾರೆ ಹಾಗಾಗಿ ಗುಣಮಟ್ಟ ಇರಲ್ಲ ಎನ್ನುವ ಆರೋಪಕ್ಕೆ ಸಚಿವರು ತನಿಖೆಯ ಭರವಸೆ ನೀಡಿದ್ದರು. ಅದಕ್ಕೆ ನಾನೂ ಒಪ್ಪಿದ್ದೆ, ಈಗ ಸಿಎಂ ಹೇಳಿಕೆಯಂತೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲಿ ಎಂದು ಸರ್ಕಾರದ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದರು.
ಆದರೆ ಇದಕ್ಕೆ ಜೆಡಿಎಸ್​​​ನ ಬೋಜೇಗೌಡ, ಆಕ್ಷೇಪ ವ್ಯಕ್ತಪಡಿಸಿದರು. ಇವರಿಗೆ ನಮ್ಮ ಮೇಲೆ ವಿಶ್ವಾಸ ಇಲ್ಲ, ಬೇರೆಯವರ ಮೇಲೆ ವಿಶ್ವಾಸವಿಡುತ್ತಿದ್ದಾರೆ ಎಂದು ಕಿಡಿಕಾರಿದರು. ಸದನ ಸಮಿತಿಯೇ ರಚನೆಯಾಗಬೇಕು ಎಂದು ಒತ್ತಾಯಿಸಿದರು. ಸದನ ಸಮಿತಿ ರಚನೆವರೆಗೂ ಧರಣಿ ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಸಭಾಪತಿ ಬಸವರಾಜ ಹೊರಟ್ಟಿ ಸದನ ನಡೆಸಲು ಸಹಕಾರ ನೀಡುವಂತೆ ಸದಸ್ಯರಿತೆ ಮನವಿ ಮಾಡಿದರು.
ಸರ್ಕಾರ ಸದನ ಸಮಿತಿ ಮಾಡುವುದಿಲ್ಲ ಎನ್ನುತ್ತಿದೆ ನೀವೆ ಧರಣಿ ನಿಲ್ಲಿಸಲ್ಲ ಎನ್ನುತ್ತೀರಿ ಹೀಗಾದರೆ ಸದನ ಹೇಗೆ ನಡೆಸಬೇಕು ಎಂದು ಪ್ರಶ್ನಿಸಿದರು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ತಮ್ಮ ತಮ್ಮ ನಿಲುವು ಬದಲಿಸದ ಕಾರಣ ಸದನವನ್ನು 10 ನಿಮಿಷ ಮುಂದೂಡಿಕೆ ಮಾಡಿ ಸಿಎಂ ಯಡಿಯೂರಪ್ಪ, ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸುಧಾಕರ್, ಉಭಯ ಪ್ರತಿಪಕ್ಷಗಳ ನಾಯಕರನ್ನು ಕರೆಸಿಕೊಂಡು ಸಂಧಾನ ಸಭೆ ನಡೆಸಿದರು.

ಇದನ್ನೂ ಓದಿ:ಕಾಬೂಲ್‌ನಲ್ಲಿ ಬಾಂಬ್​ ಸ್ಫೋಟ: 24 ಗಂಟೆಗಳಲ್ಲಿ 7 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.