ETV Bharat / state

ಡಿಕೆಶಿ ಭೇಟಿಯಾದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ.. 'ತೆನೆ'ಬೇನೆಯಾದ್ರೇ 'ಕೈ'ನಿಂದಲೇ ಉಪಶಮನ

ಅವಕಾಶ ಕೊಟ್ಟರೆ ಜೆಡಿಎಸ್​​ನ ಸಾಕಷ್ಟು ಶಾಸಕರು ಹಾಗೂ ಮಾಜಿ ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಶ್ರೀನಿವಾಸಗೌಡ ಹಾಗೂ ಜಿ ಟಿ ದೇವೇಗೌಡ ಹೆಸರು ಮೇಲ್ಪಂಕ್ತಿಯಲ್ಲಿದೆ..

ಡಿಕೆಶಿ ಭೇಟಿಯಾದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ

author img

By

Published : Sep 15, 2021, 3:04 PM IST

ಬೆಂಗಳೂರು : ಕೋಲಾರ ಜೆಡಿಎಸ್ ಶಾಸಕ ಕೆ ಶ್ರೀನಿವಾಸಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವ​ರನ್ನ ಸದಾಶಿವನಗರದ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಈಗಾಗಲೇ ಜೆಡಿಎಸ್ ತೊರೆಯಲು ಕೆ. ಶ್ರೀನಿವಾಸಗೌಡ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತವನ್ನು ಈ ಭೇಟಿಯ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಈಗಾಗಲೇ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ತಾವು ಕಾಂಗ್ರೆಸ್ ಸೇರಲು ಬಯಸಿದ್ದು, ತಮಗೆ ಹಾಗೂ ತಮ್ಮ ಪುತ್ರನಿಗೆ ಕಾಂಗ್ರೆಸ್ ಪಕ್ಷದಿಂದ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.

ಇದಕ್ಕೆ ಸಿದ್ದರಾಮಯ್ಯ ಕೂಡ ಸಮ್ಮತಿ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ಶ್ರೀನಿವಾಸಗೌಡ ಸಹ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಪಕ್ಷ ಸೇರ್ಪಡೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಆಪರೇಷನ್ ಜೆಡಿಎಸ್ ಆರಂಭಿಸಿದೆ ಎಂಬ ಮಾತು ಕೇಳಿ ಬರುತ್ತಿವೆ.

ಈ ಬಗ್ಗೆ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಶ್ರೀನಿವಾಸಗೌಡ ಮಾತುಕತೆ ನಡೆಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಜಿ ಟಿ ದೇವೇಗೌಡ ತಮ್ಮನ್ನ ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಪಕ್ಷ ಸಹ ಶ್ರೀನಿವಾಸಗೌಡ ಹಾಗೂ ಜಿ ಟಿ ದೇವೇಗೌಡ ವಿರುದ್ಧ ಕ್ರಮಕೈಗೊಳ್ಳಲು ತೀರ್ಮಾನಿಸಿದ್ದಾಗಿ ಹೇಳಿದೆ.

ವಿವಿಧ ನಿಯೋಗ ಭೇಟಿ
ವಿವಿಧ ನಿಯೋಗ ಭೇಟಿ

ಅವಕಾಶ ಕೊಟ್ಟರೆ ಜೆಡಿಎಸ್​​ನ ಸಾಕಷ್ಟು ಶಾಸಕರು ಹಾಗೂ ಮಾಜಿ ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಶ್ರೀನಿವಾಸಗೌಡ ಹಾಗೂ ಜಿ ಟಿ ದೇವೇಗೌಡ ಹೆಸರು ಮೇಲ್ಪಂಕ್ತಿಯಲ್ಲಿದೆ.

ವಿವಿಧ ನಿಯೋಗ ಭೇಟಿ : ಲಕ್ಷದ್ವೀಪ ಕಾಂಗ್ರೆಸ್ ನಿಯೋಗದಿಂದ ಡಿ ಕೆ ಶಿವಕುಮಾರ್ ಭೇಟಿ ಮಾಡಿ, ಹಸುಗೂಸಿನ ಚಿಕಿತ್ಸೆಗೆ ನೆರವಾಗಲು ಮನವಿ ಮಾಡಿತು. ಲಕ್ಷದ್ವೀಪ ಕಾಂಗ್ರೆಸ್ ಸಮಿತಿ (ಎಲ್ಟಿಸಿಸಿ) ಅಧ್ಯಕ್ಷ ಹಾಗೂ ಮಾಜಿ ಸಂಸದ ಎಂ ಹಮ್ದುಲ್ಲ ಸಯೀದ್ ನೇತೃತ್ವದ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿತು. ಮೂಲತಃ ಲಕ್ಷದ್ವೀಪದವರಾದ ನಜರ್ ಎಂಬುವರು ಈಗ ಕರ್ನಾಟಕದಲ್ಲಿ ನೆಲೆಸಿದಾರೆ. ಅವರ ಎರಡು ತಿಂಗಳ ಹಸುಗೂಸುವಿನ ಚಿಕಿತ್ಸೆಗೆ ನೆರವಾಗುವಂತೆ ಡಿಕೆಶಿ ಅವರಲ್ಲಿ ಮನವಿ ಮಾಡಲಾಯಿತು.

ವಿವಿಧ ನಿಯೋಗ ಭೇಟಿ
ವಿವಿಧ ನಿಯೋಗ ಭೇಟಿ

ನಜರ್ ಅವರ ಪುತ್ರಿ ಇಶಾಲ್ ಮರ್ಯಮ್ ಮಾರಣಾಂತಿಕ ಸ್ಪೈನಲ್ ಮಸ್ಕುಲರ್ ಅಟ್ರೋಪಿ ಕಾಯಿಲೆಯಿಂದ ಬಳಲುತ್ತಿದೆ. ಇದರ ಚಿಕಿತ್ಸೆಗೆ ಅಗತ್ಯವಿರುವ ಇಂಜಕ್ಷನ್ ಅನ್ನು ಅಮೆರಿಕದಿಂದ ತರಿಸಬೇಕಿದೆ.

ಅದಕ್ಕೆ 16 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡ ಯುಸಿಕೆ ತಂಗಳ್, ಎಲ್ಟಿಸಿಸಿ ಉಪಾಧ್ಯಕ್ಷ ಬಿ ಹಸನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲೀಂ, ಸಾಹುಲ್ ಹಮೀದ್, ಅಜಾಸ್ ಅಕ್ಬರ್ ನಿಯೋಗದಲ್ಲಿದ್ದರು.

ಮಾಜಿ ಶಾಸಕ ಅನಿಲ್ ಲಾಡ್ ಕೂಡ ಡಿಕೆಶಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಇದಾದ ಬಳಿಕ ಮಾಜಿ ಸಚಿವ, ಶಾಸಕ ಕೃಷ್ಣಬೈರೇಗೌಡ, ಶಾಸಕರಾದ ಬೈರತಿ ಸುರೇಶ್, ಹ್ಯಾರಿಸ್, ಬ್ಯಾಟರಾಯನಪುರ ಮುಖಂಡರಾದ ಜೈಗೋಪಾಲ್ ಗೌಡ, ಶ್ರೀನಿವಾಸಯ್ಯ, ಹನುಮಂತೇಗೌಡ, ಚಂದ್ರಪ್ಪ, ಟಿ ಕೆ ಗೋಪಾಲಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.