ETV Bharat / state

ರಾಜ್ಯಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಬೆಂಬಲ ಪಡೆಯುವ ಚರ್ಚೆ ನಡೆದಿರುವುದು ಸತ್ಯ- ಹೊರಟ್ಟಿ - ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ

ದೇವೇಗೌಡರ ಸ್ಪರ್ಧೆಗೆ ಜಿ.ಟಿ.ದೇವೇಗೌಡರ ವಿರೋಧ ಇರಬಹುದು. ಆದರೆ ನಮ್ಮ ಸ್ಪರ್ಧೆಗೆ ಬೇರೆಯವರ ಸಾಥ್‌ ಬೇಕು. ಕಾಂಗ್ರೆಸ್ ಬೆಂಬಲ ಪಡೆಯುವ ಮಾತು ಬಂದಿದೆ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.

JDS leader Basavaraj Horatti
ಬಸವರಾಜ ಹೊರಟ್ಟಿ
author img

By

Published : Jun 4, 2020, 4:43 PM IST

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಬೇಕೋ ಅಥವಾ ಬಿಜೆಪಿ ಬೆಂಬಲ ಪಡೆಯಬೇಕೋ ಎಂದು ಚರ್ಚೆ ನಡೆಯುತ್ತಿರುವುದು ನಿಜ. ನಾಳೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯ ಒಂದು ಸ್ಥಾನಕ್ಕೆ ಸ್ಪರ್ಧಿಸಲು ನಮಗೆ ಮತಗಳ ಕೊರತೆ ಇದೆ. ಕಾಂಗ್ರೆಸ್ ಇಲ್ಲವೇ ಬಿಜೆಪಿ ಯಾವುದಾದರೂ ಒಂದು ಪಕ್ಷದ ಬೆಂಬಲ ಬೇಕಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸ್ಪರ್ಧೆಗೆ ಎಲ್ಲರ ಒಲವಿದೆ. ಕಾಂಗ್ರೆಸ್ ಹಾಗು ಬಿಜೆಪಿ ಕೂಡ ಗೌಡರ ಸ್ಪರ್ಧೆಗೆ ವಿರೋಧಿಸಲ್ಲ. ಆದರೆ ದೇವೇಗೌಡರೇ ವಯಸ್ಸಿನ ಕಾರಣ ಮುಂದಿಟ್ಟು ನಿರಾಕರಿಸುತ್ತಿದ್ದಾರೆ. ಹಾಗಾಗಿ, ಸದ್ಯ ಯಾರ ಸ್ಪರ್ಧೆ ಎನ್ನುವ ಕುರಿತು ನಿರ್ಧಾರವಾಗಿಲ್ಲ. ಆದರೂ ಕೆಲವರು ಬಿಜೆಪಿ ಬೆಂಬಲ, ಕಾಂಗ್ರೆಸ್ ಬೆಂಬಲ ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ದೇವೇಗೌಡರು ಹಾಗು ಕುಮಾರಸ್ವಾಮಿ ಅವರಿಗೆ ಯಾವುದೇ ಗೊಂದಲ ಇಲ್ಲ ಎಂದರು.

ನಾಳೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಇದೆ. ಈ ಸಭೆಯಲ್ಲಿ ಅಭ್ಯರ್ಥಿ ಹಾಗು ಯಾವ ಪಕ್ಷದ ಬೆಂಬಲ ಪಡೆಯಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ದೇವೇಗೌಡರ ವಿವೇಚನೆಗೆ ಬಿಡುವ ನಿರ್ಧಾರವೇ ಆಗಲಿದೆ ಹೊರಟ್ಟಿ ತಿಳಿಸಿದರು.

ದೇವೇಗೌಡರ ಸ್ಪರ್ಧೆಗೆ ಜಿ.ಟಿ. ದೇವೇಗೌಡರ ವಿರೋಧ ಇರಬಹುದು. ಆದರೆ ನಮ್ಮ ಸ್ಪರ್ಧೆಗೆ ಬೇರೆಯವರ ಸಾಥ್ ಬೇಕು, ಕಾಂಗ್ರೆಸ್ ಬೆಂಬಲ ಒಡೆಯುವ ಮಾತು ನಡೆದಿದೆ. ಕಾಂಗ್ರೆಸ್ ಬೆಂಬಲ ಕೊಟ್ಟರೆ ಒಬ್ಬಿಬ್ಬರು ಕೈಕೊಟ್ಟರೂ ತೊಂದರೆಯಿಲ್ಲ. ಎಲ್ಲವೂ ಜೆಡಿಎಲ್​ಪಿ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದರು.

ದೇವೇಗೌಡರಿಗೆ ಅವಕಾಶ ಕೊಟ್ಟರೆ ಒಳ್ಳೆಯದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ಆರು ವರ್ಷ ಎನ್ನುವುದು ಗೌಡರ ನಿರಾಸಕ್ತಿಗೆ ಕಾರಣವಾಗಿದೆ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.