ETV Bharat / state

ಬಿಜೆಪಿ ನಾಯಕರಿಗೆ ನನ್ನ ಬಗ್ಗೆ ಭಯವಿದೆ: ಕೇಸರಿ ಪಡೆಗೆ ಹೆಚ್​​ಡಿಕೆ ಟಾಂಗ್​​

ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ. ಆದರೆ ನನ್ನ ಬಗ್ಗೆ ಅವರಿಗೆ ಭಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ

JDS Convention held at the Palace grounds
ಹೆಚ್.ಡಿ. ಕುಮಾರಸ್ವಾಮಿ
author img

By

Published : Jan 23, 2020, 9:26 PM IST

ಬೆಂಗಳೂರು: ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ. ಆದರೆ ನನ್ನ ಬಗ್ಗೆ ಅವರಿಗೆ ಭಯವಿದೆ ಎಂದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್​​ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ನಾನು ಬಲಿಕೊಡುವುದಿಲ್ಲ. ನಮ್ಮ ತಂದೆಯವರು ರಾಜಕೀಯಕ್ಕೆ ಬಂದ ದಿನದಿಂದ ಇವತ್ತಿನವರೆಗೂ ಅಧಿಕಾರಕ್ಕಾಗಿ ನಮ್ಮ ಕುಟುಂಬದವರು ಬೇರೆ ಪಕ್ಷದವರ ಮನೆಗೆ ಬಾಗಿಲಿಗೆ ಹೋಗಿಲ್ಲ ಎಂದು ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್​​ ಸಮಾವೇಶ

ನಮ್ಮ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. 1987ರಲ್ಲಿ ದೇವೇಗೌಡರು ಕನಕಪುರ ಮತ್ತು ಹೊಳೆನರಸೀಪುರದ ಎರಡು ಕಡೆ ಸೋತಿದ್ದರು. ಅಂದು ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ ಎರಡು ಸೀಟುಗಳು. ಆದರೆ ದೇವೇಗೌಡರು ತಮ್ಮ ನಿರಂತರ ಹೋರಾಟದಿಂದ ಪಕ್ಷವನ್ನು ಅಧಿಕಾರಕ್ಕೆ ತಂದರು. ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನ ತುಂಬಿದರು.

ಇನ್ನು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಆಸ್ತಿ, ನಿಮ್ಮ ಪರಿಶ್ರಮದಿಂದ ಪಕ್ಷ ಬೆಳೆಯಬೇಕು ಎಂದು ಕರೆ ನೀಡಿದರು. ಪಕ್ಷ ಕರೆದಾಗ ಬಂದು ನೀವು ಸಂಘಟಿಸಬೇಕು. ಅಂದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯ ಎಂದೂ ಮನವಿ ಮಾಡಿದರು.

ಬೆಂಗಳೂರು: ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ. ಆದರೆ ನನ್ನ ಬಗ್ಗೆ ಅವರಿಗೆ ಭಯವಿದೆ ಎಂದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್​​ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ನಾನು ಬಲಿಕೊಡುವುದಿಲ್ಲ. ನಮ್ಮ ತಂದೆಯವರು ರಾಜಕೀಯಕ್ಕೆ ಬಂದ ದಿನದಿಂದ ಇವತ್ತಿನವರೆಗೂ ಅಧಿಕಾರಕ್ಕಾಗಿ ನಮ್ಮ ಕುಟುಂಬದವರು ಬೇರೆ ಪಕ್ಷದವರ ಮನೆಗೆ ಬಾಗಿಲಿಗೆ ಹೋಗಿಲ್ಲ ಎಂದು ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್​​ ಸಮಾವೇಶ

ನಮ್ಮ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. 1987ರಲ್ಲಿ ದೇವೇಗೌಡರು ಕನಕಪುರ ಮತ್ತು ಹೊಳೆನರಸೀಪುರದ ಎರಡು ಕಡೆ ಸೋತಿದ್ದರು. ಅಂದು ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ ಎರಡು ಸೀಟುಗಳು. ಆದರೆ ದೇವೇಗೌಡರು ತಮ್ಮ ನಿರಂತರ ಹೋರಾಟದಿಂದ ಪಕ್ಷವನ್ನು ಅಧಿಕಾರಕ್ಕೆ ತಂದರು. ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನ ತುಂಬಿದರು.

ಇನ್ನು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಆಸ್ತಿ, ನಿಮ್ಮ ಪರಿಶ್ರಮದಿಂದ ಪಕ್ಷ ಬೆಳೆಯಬೇಕು ಎಂದು ಕರೆ ನೀಡಿದರು. ಪಕ್ಷ ಕರೆದಾಗ ಬಂದು ನೀವು ಸಂಘಟಿಸಬೇಕು. ಅಂದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯ ಎಂದೂ ಮನವಿ ಮಾಡಿದರು.

Intro:ಬೆಂಗಳೂರು : ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ. ನನ್ನ ಬಗ್ಗೆ ಬಿಜೆಪಿ ನಾಯಕರಿಗೆ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.Body:ಪಕ್ಷಕ್ಕೆಹೊಸ ಚೈತನ್ಯ ತುಂಬುವ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತು ಮಹಾನ್ ನಾಯಕಿ ಶೋಭ ಕರಂದ್ಲಾಜೆ ಒಂದು ಟ್ವೀಟ್ ಮಾಡಿದ್ದಾರೆ. ಆ ಮಹಾತಾಯಿಗೆ ನೆನಪಿಸೋಕೆ ಇಷ್ಟಪಡ್ತೀನಿ. ವಿಧಾನಸಭೆಯಲ್ಲಿ ಕೊನೆಯ ಸಾಲಿನಲ್ಲಿ ಕೂತಿದ್ದವನಿಗೆ ಚೀಟಿ ಕಳಿಸಿದ್ದು ಯಾರು?. ಯಡಿಯೂರಪ್ಪನವರಿಗೆ ಮಂತ್ರಿ ಸ್ಥಾನ ಕೊಡಿ ಬಿಜೆಪಿಗೆ ರಾಜೀನಾಮೆ ಕೊಟ್ಟು ಬರುತ್ತಾರೆ ಎಂದು ಹೇಳಿದ್ದರು. ನಂತರ ಹೆಚ್.ಡಿ. ರೇವಣ್ಣರ ಸರ್ಕಾರಿ ಮನೆಯಲ್ಲಿ ಶೋಭ ಕರಂದ್ಲಾಜೆ, ರಾಮಚಂದ್ರೇಗೌಡರು ಬಂದಿರಲಿಲ್ಲವೇ?. ಸಿದ್ದಗಂಗಾಸ್ವಾಮಿಜಿಯವರನ್ನು ನೆನಪಿಸಿಕೊಂಡು ಬಿ.ಎಸ್. ಯಡಿಯೂರಪ್ಪ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರೆ ಇಂದು ಬಿಎಸ್ ವೈ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಶೋಭ ಕರಂದ್ಲಾಜೆ ನನ್ನ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಗರಂ ಆದರು.
ನಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ನಾನು ಬಲಿಕೊಡುವುದಿಲ್ಲ ನಮ್ಮ ತಂದೆಯವರು ರಾಜಕೀಯಕ್ಕೆ ಬಂದ ದಿನದಿಂದ ಇವತ್ತಿನವರೆಗೂ ಅಧಿಕಾರಕ್ಕಾಗಿ ನಮ್ಮ ಕುಟುಂಬದವರು ಬೇರೆ ಪಕ್ಷದವರ ಮನೆಗೆ ಬಾಗಿಲಿಗೆ ಹೋಗಿಲ್ಲ ಎಂದು ಹೇಳಿದರು.
ನಮ್ಮ ಪಕ್ಷದ ಕಾರ್ಯಕರ್ತರ ಎದೆಗುಂದಬೇಕಾಗಿಲ್ಲ. ಹಿಂದೆ 1987ರಲ್ಲಿ ದೇವೇಗೌಡರು ಕನಕಪುರ ಮತ್ತು ಹೊಳೆನರಸೀಪುರ ಎರಡು ಕಡೆ ಸೋತ್ತಿದ್ದರು. 2004 ರಲ್ಲಿ ಪಕ್ಷ ಸುಮಾರು 70 ಸ್ಥಾನ ಗೆದಿದೆ. ಹಾಗಾಗಿ ಪಕ್ಷ ಕಟ್ಟಿ ನಿಮ್ಮ ಜೊತೆಗೆ ನಾವು ಇದ್ದೇವೆ. ನಮ್ಮ ಜೊತೆಗೆ ನೀವು ಬನ್ನಿ. ಅಂದು ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ ಎರಡು ಸೀಟುಗಳು. ಆದರೆ ದೇವೇಗೌಡರು ತಮ್ಮ ನಿರಂತರ ಹೋರಾಟದಿಂದ ಪಕ್ಷವನ್ನು ಅಧಿಕಾರಕ್ಕೆ ತಂದರು. ರಾಜ್ಯದ ಮುಖ್ಯಮಂತ್ರಿಯಾಗಿ ದೇಶದ ಪ್ರಧಾನಿಯಾಗಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆ ಇದೆ ಎಂದು ಕಾರ್ಯಕರ್ತರಲ್ಲಿ ಕುಮಾರಸ್ವಾಮಿ ಆತ್ಮವಿಶ್ವಾಸ ಮೂಡಿಸಿದರು.
ಮುಂದಿನ ಚುನಾವಣೆ ಯಾವಾಗ ಬೇಕಾದರೂ ಬರಲಿ, ನಿಮ್ಮ ಜೊತೆ ಪ್ರತಿ ಹಳ್ಳಿಗೆ ಹೋಗುವುದಕ್ಕೂ ನಾನು ಸಿದ್ದನಿದ್ದೇನೆ ಎಂದು ಹೇಳಿದರು.
ಲಿಂಗಾಯತರ ಸಮಾಜ ನನ್ನನ್ನ ಕೈಬಿಡ್ತೀರಾ ಎಂದು ಕೇಳ್ತೀರಾ ಯಡಿಯೂರಪ್ಪನವರೇ. ನಿಮ್ಮ ಯೋಗ್ಯತೆಗೆ ರೈತರ ಸಾಲ ವಾಪಸ್ ತಗೊಳಿ ಅಂತಾ ಆದೇಶ ಹೊರಡಿಸುತ್ತಿರಾ. ಇವತ್ತು ಹಳ್ಳಿ ಹಳ್ಳಿಗೆ ಹೋಗಿ ಕೇಳಿ, ನಿಮ್ಮ ಬಗ್ಗೆ ಏನು ಹೇಳ್ತಾರೆ ಕೇಳಿ ನೋಡಿ. ಸಾಲ ಮನ್ನಾ ಮಾಡಿದ್ದೇನೆ, ಆದರೆ ಜನರು ಕೈ ಹಿಡಿದಿಲ್ಲ. ನಾನು ಬಂದಾಗ ನಮ್ಮದು ಸಾಲ ಮನ್ನಾ ಆಗಿದೆ, ಈ ಸಲ ಕೈ ಹಿಡಿತೀವಿ ಅಂದರು. ಆದರೆ ಈ ರೀತಿ ಮಾಡಿರೋದನ್ನು ಬಸವಣ್ಣ ಮೆಚ್ಚುತ್ತಾನಾ? ಇದೆಲ್ಲವನ್ನೂ ಹೇಳೋಣ, ಮತ್ತೆ ಹೋರಾಡೋಕೆ ನಾನು ಸಿದ್ದನಿದ್ದೇನೆ. ರಾಜಕೀಯದಿಂದ ದೂರ ಉಳಿಯಲ್ಲ. ಹೋರಾಟ ಮಾಡೋಣ. ಪಕ್ಷದಲ್ಲಿ ಉಂಡು, ತಿಂದು ಹೋದವರು ಪಕ್ಷದ ಬಗ್ಗೆ ಲಘುವಾಗಿ‌ ಮಾತನಾಡಬೇಡಿ ಎಂದು ಸಲಹೆ ಮಾಡಿದರು.
ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ದೇಶದಲ್ಲಿ ಹೋರಾಟ ನಡೆಯುತ್ತಿದೆ. ದೇಶ ಮತ್ತು ರಾಜ್ಯದಲ್ಲಿ ಇವತ್ತು ಹಲವು ರೀತಿಯ ಸಮಸ್ಯೆ ಕಾಣುತ್ತಿದ್ದೇವೆ. ಇಂದಿನ ಸಮಾವೇಶದಲ್ಲಿ ಪಕ್ಷ 3 ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದರು.
ನೆಹರು ಅವರ ಬಗ್ಗೆ ಅಮಿತ್ ಶಾ ಚರ್ಚೆ ಮಾಡುತ್ತಿದ್ದಾರೆ. ಸ್ವತಂತ್ರ್ಯ ಪೂರ್ವ ಮತ್ತು ನಂತರ ತೆಗೆದುಕೊಂಡ ನಿರ್ಣಯ ಕೇವಲ ನೆಹರು ಅವರ ನಿರ್ಣಯ ಅಲ್ಲ. ನೆಹರು ಆಡಳಿತ ಮಾಡುತ್ತಿದ್ದಾಗ ಅಮಿತ್ ಶಾ ಹುಟ್ಟೆ ಇರಲಿಲ್ಲ. ನೆಹರು ನಿಧನರಾದ ನಂತರ ಅಮಿತ್ ಶಾ ಹುಟ್ಟಿರುವುದು. ಅಮಿತ್ ಶಾ ನಮ್ಮ ರಾಜ್ಯಕ್ಕೆ ಬಂದಾಗ ನೆರೆ ಬಗ್ಗೆ ಮಾತನಾಡಲಿಲ್ಲ. ನಿರುದ್ಯೋಗ ಹಾಗೂ ರೈತರ ಸಮಸ್ಯೆ ಬಗ್ಗೆ ಏನನ್ನು ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾರ್ಖಾನೆ ಮಾಲೀಕರು ರೈತರು ಬೆಳೆದ ಕಬ್ಬು ಕಟಾವು ಮಾಡುತ್ತಿಲ್ಲ. ಅನೇಕ ಕಬ್ಬು ಬೆಳೆಗಾರರು ಆತಂಕದಲ್ಲಿದ್ದಾರೆ. ಯಡಿಯೂರಪ್ಪನವರೇ ಸಾಲ ಮನ್ನಾ ಅಂತೂ ಮಾಡಲಿಲ್ಲ. ಆದರೆ ನಿಮ್ಮ ಯೋಗ್ಯತೆಗೆ ಸಾಲ ವಸೂಲಿ ಮಾಡುವಂತೆ ಆದೇಶ ಬೇರೆ ಮಾಡ್ತಿರಾ?. ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆಯ ಪರಿಣಾಮ ಬಾಂಗ್ಲಾದೇಶದ ವಾಸಿಗಳನ್ನು ಹೊರದಬ್ಬುತ್ತೇವೆ ಅಂತಾ ಹೇಳಿ, ಕೆ.ಆರ್.ಪುರಂ ಸೇರಿದಂತೆ ಬೆಂಗಳೂರಿನ ಅನೇಕ ಭಾಗದ ಗುಡಿಸಲನ್ನೂ ಧ್ವಂಸಗೊಳಿಸಿರುವ ಪರಿಣಾಮ ಇಂದು ಎರಡು ಹೊತ್ತು ಊಟಕ್ಕೆ ಗತಿ ಇಲ್ಲದಂತೆ ಆ ಕುಟುಂಬಗಳು ಬೀದಿಗೆ ಬಿದ್ದಿವೆ. ನಮ್ಮ ಪಕ್ಷದ ಕಾರ್ಯರ್ತರು ಮುಖಂಡರಲ್ಲಿ ಮನವಿ ಮಾಡ್ತಿನಿ. ಹೋಗಿ ಬೀದಿಗೆ ಬಿದ್ದಿರುವ ಕುಟುಂಬಗಳ ಪರವಾಗಿ ಹೋರಾಟ ಮಾಡಿ. ಪ್ರತಿಭಟನೆ ಮಾಡಿ ಎಂದು ಕರೆ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಅಷ್ಟೇ ಅಲ್ಲ. ಹಿಂದು ಧರ್ಮದವರಿಗೂ ಸಮಸ್ಯೆ ಆಗಲಿದೆ. ಹಕ್ಕ-ಬುಕ್ಕರ (ಮೋದಿ-ಅಮಿತ್ ಶಾ) ಟಾರ್ಗೆಟ್ ಕೇವಲ ಮುಸ್ಲಿಮರಲ್ಲ. ಹಿಂದೂಗಳು ಇದ್ದಾರೆ ಎಂದು ದೂರಿದರು.
ಕುಮಾರಸ್ವಾಮಿಗೂ, ಮಂಗಳೂರಿಗೂ ಏನು ಸಂಬಂಧ ಅಂತಾ ಕೇಳುತ್ತಾರೆ. ಹಾಗಾದರೆ ಕನಕಪುರಕ್ಕೂ, ಕಲ್ಲಡ್ಕ ಪ್ರಭಕರ್ ಭಟ್ಟರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕರಾವಳಿ ಉಪ್ಪಿನಂಗಡಿ ಸುತ್ತಾಮುತ್ತಾ ಇದ್ದವರು, ಈಗ ಕನಕಪುರದಲ್ಲೂ ಅವರೇ, ಚಿಕ್ಕಬಳ್ಳಾಪುರದಲ್ಲೂ ಅವರೇ, ಇವರಿಂದ ನೀವು ತುಂಬಾ ಹುಷಾರಾಗಿರಿ. ಯಡಿಯೂರಪ್ಪನವರಿಗೆ ಒಂದೇ ಒಂದು ಇಂಟರ್ವ್ಯೂ ಸಿಗಲ್ಲ ಎಂದು ವ್ಯಂಗ್ಯವಾಡಿದರು.

ವೀರಶೈವ ಲಿಂಗಾಯಿತರ ಗಮನಕ್ಕೆ ತರೋಕೆ ಇಷ್ಟ ಬರ್ತಿನಿ. ಯಡಿಯೂರಪ್ಪನವರನ್ನು ಬಿಜೆಪಿ ನಾಯಕರು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಇದೊಂದು ಮುಖ್ಯಮಂತ್ರಿ ಪದವಿ ನಾ.. ಒಬ್ಬ ಮುಖ್ಯಮಂತ್ರಿಯನ್ನು ಈ ರೀತಿ ನಡೆಸಿಕೊಳ್ಳೋದಾ?. ರಾಜಭವನಕ್ಕೆ ಹೋದರೆ ಮುಖ್ಯಮಂತ್ರಿಗೆ ಪ್ರವೇಶವೇ ಇಲ್ಲ. ಅವರನ್ನು ಐಡಿ ಕಾರ್ಡ್ ಕೇಳ್ತಾರೆ. ಬಿಎಸ್‌ವೈ ಭೇಟಿಗೆ ಅವಕಾಶ ನೀಡದೇ ನಡೆದುಕೊಳ್ತಾರೆ ಮೋದಿ. ಇನ್ನು ಹುಬ್ಬಳ್ಳಿಗೆ ಹೋದಾಗ ಯಡಿಯೂರಪ್ಪನರನ್ನು ಬೈ ಎಂದು ಹೇಳಿ, ದಾವೂಸ್‌ಗೆ ಹೋಗು ಅಂತಾ ಕಳಿಸಿದ್ರು. ಈ ರೀತಿ ಪರಿಸ್ಥಿತಿ ಯಾಕ್ ಬೇಕು. ಮಾಧ್ಯಮಗಳು ಪಾಪ ಅವರನ್ನು ರಾಜಾಹುಲಿ, ರಾಜಾಹುಲಿ ಅಂತಾರೆ. ಆದರೆ ಅವರ ಪರಿಸ್ಥಿತಿ ಹೇಗಿದೆ ಎಂದು ಟೀಕಿಸಿದರು.
ಮಂಗಳೂರು ಪ್ರಕರಣನ್ನು ನಾನು ಈಗಲೂ ಬಾಂಬ್ ಪ್ರಕರಣ ಅನ್ನಲ್ಲ. ಇವತ್ತು ಕೂಡ ನಾನು ಪಟಾಕಿ ಪ್ರಕರಣ ಅಂತಾನೇ ಹೇಳೋದು. ಸಾಯಂಕಾಲದವರೆಗೂ ಸಿರಿಯಲ್ ಮಾಡಿದ್ರು. ಮಾಧ್ಯಮಗಳು ಹಾಗೂ ಜನರನ್ನು ದಾರಿತಪ್ಪಿಸಿದ್ದಾರೆ. ಆ ಬ್ಯಾಗ್ ಸಿಕ್ಕಿದಾಗ ಮೊದಲು ನೋಡಿದಾಗ ಏನು ಇಲ್ಲ ಅನ್ನೋದು ಅವರಿಗೂ ಗೊತ್ತಾಗಿದೆ. ಆದರೂ ಸುಮ್ಮನೆ ಎಲ್ಲರನ್ನೂ ದಿಕ್ಕು ತಪ್ಪಿಸಿ, ಭಯಬೀತ ಗೊಳಿಸಿದ್ರು. ಮುಸ್ಲಿಮರರು ಇಟ್ರು, ಅದು, ಇದು ಅಂತಾ ಹೇಳಿದ್ದೇ ಹೇಳಿದ್ದು. ಆದರೆ ಈಗ ನಿಮ್ಮ ಬುಡಕ್ಕೆ (ಬಿಜೆಪಿ) ನೀವೇ ಪಟಾಕಿ ಇಟ್ಕೊಂಡಿದ್ದೀರಲ್ಲ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಪಾಕಿಸ್ಥಾನ ಪ್ರೇಮಿ ಅಂತೀರಾ ?. ನೀವ್ಯಾಕೆ ಪ್ರತಿದಿನ ಪಾಕಿಸ್ಥಾನ ಭಜನೆ ಮಾಡ್ತೀರಾ?. ಪಾಕಿಸ್ಥಾನ ಕಟ್ಕೊಂಡು ನಾನೇನು ಮಾಡಲಿ. ಇಲ್ಲಿನ ಜನರ ಸಮಸ್ಯೆ ನನಗೆ ಮುಖ್ಯ ಎಂದರು.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.