ETV Bharat / state

ಒಂಟಿ ಮಹಿಳೆಯರ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನ - ಜೆಬಿ ನಗರ ಪೊಲೀಸ್​ ಠಾಣೆ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಫೋನ್, ಹಣ ಹಾಗೂ ಮನೆಯ ಕೀ ಇಟ್ಟಿದ್ದ ಒಂದು ಹ್ಯಾಂಡ್ ಬ್ಯಾಗ್‌ ಅನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಲಿಗೆ ಮಾಡಿದ್ದರು‌. ಈ ಬಗ್ಗೆ ತನಿಖೆ ನಡೆಸಿದ ಜೆ.ಬಿ ನಗರ ಠಾಣಾ ಪೊಲೀಸರು ಇಬ್ಬರು ಖದೀಮರನ್ನು ಬಂಧಿಸಿದ್ದಾರೆ.

bengaluru
ಖತರ್ನಾಕ್ ಖದೀಮರು ಅಂದರ್
author img

By

Published : Jul 7, 2021, 2:55 PM IST

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಸುಮ್ಮನಿದ್ದ ಖತರ್ನಾಕ್ ಕಳ್ಳರು, ಅನ್​ಲಾಕ್​ ಆಗುತ್ತಿದ್ದಂತೆ ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದಾರೆ. ಜೆ.ಬಿ ನಗರದಲ್ಲಿ ಮೊಬೈಲ್, ಹ್ಯಾಂಡ್ ಬ್ಯಾಗ್ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಜೆ.ಬಿ ನಗರ ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಫೋನ್, ಹಣ ಹಾಗೂ ಮನೆಯ ಕೀ ಇಟ್ಟಿದ್ದ ಒಂದು ಹ್ಯಾಂಡ್ ಬ್ಯಾಗ್‌ ಅನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಲಿಗೆ ಮಾಡಿದ್ದರು‌. ಈ ಸಂಬಂಧ ಜೆ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಬಳಿಕ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ ಮತ್ತು ವಾಹನದ ಆಕಾರ, ಅದರ ಮೇಲೆ ಅಂಟಿಸಿದ್ದ ಸ್ಟಿಕರ್‌ಗಳ ಮಾಹಿತಿ ಪಡೆದುಕೊಂಡ ಪೋಲಿಸರು ತನಿಖೆ ನಡೆಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

bengaluru
ಕಳ್ಳರ ಬಂಧನ

ಇನ್ನು ವಿಚಾರಣೆ ವೇಳೆ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಸುಲಿಗೆ ನಡೆಸಿರುವ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು ಮೊಬೈಲ್‌ ಫೋನ್, ಹ್ಯಾಂಡ್ ಬ್ಯಾಗ್ ಹಾಗೂ ಒಂದು ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.