ETV Bharat / state

ಬಾಲಕನಿಗೆ ಓಪನ್ ಹಾರ್ಟ್ ಸರ್ಜರಿ ಮಾಡದೇ ಕವಾಟ ಬದಲಾಯಿಸಿದ ಜಯದೇವ ವೈದ್ಯರು - ಬಾಲಕನಿಗೆ ಓಪನ್ ಹಾರ್ಟ್ ಸರ್ಜರಿ ಮಾಡದೇ ಕವಾಟ ಬದಲಾವಣೆ

ಜಯದೇವ ಆಸ್ಪತ್ರೆಯಲ್ಲಿ 17 ವರ್ಷದ ಬಾಲಕನಿಗೆ ಓಪನ್​ ಹಾರ್ಟ್​ ಸರ್ಜರಿ ಮಾಡದೇ ಕವಾಟ ಬದಲಾವಣೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿ ಈ ವಿಧಾನದ ಮೂಲಕ ಯುವಕನ ಕವಾಟ ಬದಲಾವಣೆ ಮಾಡಲಾಗಿದೆ.

open heart surgery
ಬಾಲಕನಿಗೆ ಓಪನ್ ಹಾರ್ಟ್ ಸರ್ಜರಿ ಮಾಡದೇ ಕವಾಟ ಬದಲಾವಣೆ
author img

By

Published : Mar 11, 2022, 8:21 PM IST

ಬೆಂಗಳೂರು: ಜಯದೇವ ಆಸ್ಪತ್ರೆ ವೈದ್ಯರು ಹದಿನೇಳು ವರ್ಷದ ಬಾಲಕನಿಗೆ ಓಪನ್ ಹಾರ್ಟ್ ಸರ್ಜರಿ ಮಾಡದೆಯೇ ಕವಾಟ ಬದಲಾವಣೆಯನ್ನು ಮಾಡಿದ್ದಾರೆ. ಈ ಮೂಲಕ ಮತ್ತೊಂದು ದಾಖಲೆ ಮಾಡಿದೆ.

ಈ ಹಿಂದೆ ಮೂರು ಬಾರಿ ಕವಾಟದ ಸೋರಿಕೆಯಿಂದ ಜಯದೇವ ಆಸ್ಪತ್ರೆಗೆ ಆಗಮಿಸಿದ್ದರು. ಮತ್ತೆ ಈ ಸಮಸ್ಯೆ ಕಂಡು ಬಂದ ಕಾರಣ 19 ಮಿ.ಮಿ. ಗಾತ್ರದ ಅಂಗಾಂಶದ ಕವಾಟವನ್ನು ಬಳಸಿ ಬದಲಾವಣೆ ಮಾಡಲಾಯಿತು. ಚಿಕಿತ್ಸೆಯ ನಂತರ, ರೋಗಿಯ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾನೆ.

ಇಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ ಈ ಕಾರ್ಯವಿಧಾನ ಬಳಸಿ ಚಿಕಿತ್ಸೆ ನೀಡಿಲ್ಲ. ಮಕ್ಕಳ ಹೃದ್ರೋಗ ತಜ್ಞರಾದ ಡಾ. ಜಯರಂಗನಾಥ್ ಮತ್ತು ಡಾ. ಜಾನ್ ಜೋಸೆಫ್ ರವರ ನೇತೃತ್ವದ ತಂಡವು ಈ ಕಾರ್ಯ ವಿಧಾನವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಆರ್ಥಿಕ ಸಹಕಾರ: ರೋಗಿಯ ಕೌಟುಂಬಿಕ ಹಿನ್ನೆಲೆ ತಿಳಿದಿದ್ದ ಆಸ್ಪತ್ರೆಯ ವೈದ್ಯರು ಉಚಿತ ಚಿಕಿತ್ಸೆ ನೀಡಿದ್ದಾರೆ. ಈ ಚಿಕಿತ್ಸೆಗೆ 15 ಲಕ್ಷ ವೆಚ್ಚ ತಗುಲಿದ್ದು, ದಾನಿಗಳಿಂದ 6.5 ಲಕ್ಷ ಸಂಗ್ರಹಿಸಿ, ಬಾಕಿ ಮೊತ್ತವನ್ನು ಸಂಸ್ಥೆಯು ಮತ್ತು ಕವಾಟದ ಕಂಪನಿ ಭರಿಸಿದೆ.

ಇದನ್ನೂ ಓದಿ: ಕೊನೆಯ ಸಚಿವ ಸಂಪುಟ ಸಭೆ ನಡೆಸಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.