ಬೆಂಗಳೂರು: ಪ್ರಧಾನಿ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊರೊನಾ ಸೋಂಕು ಹರಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿರುವ ಸಸ್ಯಕಾಶಿ ಪ್ರಸಿದ್ಧಿ ಲಾಲ್ ಬಾಗ್ ಬಂದ್ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ಬಳಿಕ ಇದೇ ಮೊದಲ ಬಾರಿಗೆ ಬಂದ್ ಮಾಡಲಾಗುತ್ತಿದ್ದು, ಇದರ ಜತೆಗೆ ಕಬ್ಬನ್ ಪಾರ್ಕ್ ಸಹ ಸ್ತಬ್ಧಗೊಳ್ಳಲಿದೆ.
ಮಾರ್ಚ್ 22 ರಂದು ಭಾಗಶಃ ಸಂಪೂರ್ಣ ಬಂದ್ ಆಗಲಿದ್ದು, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ತುರ್ತು ಪರಿಸ್ಥಿತಿ ವೇಳೆ ಲಾಲ್ಬಾಗ್ ಬಂದ್ ಮಾಡಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿ ತಾಣವಾಗಿರುವ ಸಸ್ಯಕಾಶಿ ಲಾಲ್ ಬಾಗ್ಗೆ ಪ್ರವೇಶ ನಿರಾಕರಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಇನ್ನು ದೇಶ-ವಿದೇಶಗಳಿಂದಲೇ ಹೆಚ್ಚು ಜನರು ಬರುವುದರಿಂದ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಹಚ್ಚಾಗಿರುವ ಕಾರಣ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಸರ್ಕಾರ ಕೊರೊನಾ ಬಗ್ಗೆ ಹೆಚ್ಚಿನ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಭಾನುವಾರ ಪಾರ್ಕ್ಗಳನ್ನು ಬಂದ್ ಮಾಡಲು ಮುಂದಾಗಿದೆ. ಇದರ ಜತೆಗೆ ಈಗಾಗಲೇ ಸಿನಿಮಾ ಮಂದಿರ, ಪಬ್,ಬಾರ್, ರೆಸ್ಟೋರೆಂಟ್ ಸೇರಿ ಅನೇಕ ಪ್ರಮುಖ ಸ್ಥಳ ಬಂದ್ ಮಾಡಲಾಗಿದೆ.