ETV Bharat / state

ಹಳೆ ಬೆಂಗಳೂರು ನೆನಪಿಸಿದ ಜನತಾ ಕರ್ಫ್ಯೂ... 1960-70ರ ದೃಶ್ಯ ಕಂಡು ಬಂತು - ಉದ್ಯಾನ ನಗರಿಯಲ್ಲಿ‌‌ ಬೆರಳೆಣಿಕೆ ವಾಹನಗಳು

ಒಂದು ಕೋಟಿಗಿಂತ ಹೆಚ್ಚು ಜನರಿರುವ ಹಾಗೂ 70 ಲಕ್ಷಕ್ಕೂ ಅಧಿಕ ವಾಹನಗಳಿರುವ ಉದ್ಯಾನ ನಗರಿಯಲ್ಲಿ‌‌ ಬೆರಳೆಣಿಕೆ ಕಡೆಗಳಲ್ಲಿ ಹೊರತುಪಡಿಸಿದರೆ ನಗರ ಸಂಪೂರ್ಣವಾಗಿ ಸ್ಥಗಿತವಾಗಿತ್ತು.

ಬೆಂಗಳೂರು
ಬೆಂಗಳೂರು
author img

By

Published : Mar 22, 2020, 8:47 PM IST

ಬೆಂಗಳೂರು: ಕೊರೊನಾ ಸೋಂಕು ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂಗೆ ಇಂದು ಕರ್ನಾಟಕ ಸ್ತಬ್ಧವಾಗಿದೆ. ರಾಜ್ಯದ ರಾಜಧಾನಿ ಇದಕ್ಕೆ ಹೊರತಾಗಿಲ್ಲ. ಇಂದಿನ ಬೆಂಗಳೂರಿನ ವಾತಾವರಣ ನೋಡಿದಾಗ 1960-70 ದಶಕದ ಪರಿಸ್ಥಿತಿ ನೆನಪಿಗೆ ಬರುವುದರಲ್ಲಿ ಸಂದೇಹವೇ ಬೇಡ.

ಜನರ ಜೀವನಾಡಿಯಾಗಿರುವ ಬೆಂಗಳೂರು ಸದಾ ಕಾಲ ಒಂದಲ್ಲ ಒಂದು ಕಾರಣಕ್ಕೆ ಜಗಮಗಿಸುತ್ತಲೇ ಇರುತ್ತದೆ. ಒಂದು ಕೋಟಿಗಿಂತ ಹೆಚ್ಚು ಜನರಿರುವ ಹಾಗೂ 70 ಲಕ್ಷಕ್ಕೂ ಅಧಿಕ ವಾಹನಗಳಿರುವ ಉದ್ಯಾನ ನಗರಿಯಲ್ಲಿ‌‌ ಬೆರಳೆಣಿಕೆ ಕಡೆಗಳಲ್ಲಿ ಹೊರತುಪಡಿಸಿದರೆ ನಗರ ಸಂಪೂರ್ಣವಾಗಿ ಸ್ಥಗಿತವಾಗಿತ್ತು.

ಸದಾ ವಾಹನಗಳಿಂದ ಗಿಜುಗುಡುತ್ತಿದ್ದ ಟಿನ್ ಫ್ಯಾಕ್ಟರಿ, ಸಿಲ್ಕ್ ಬೋರ್ಡ್, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆ ಹಾಗೂ ಪ್ರಮುಖ ಜಂಕ್ಷನ್​ಗಳಲ್ಲಿ ವಾಹನಗಳು ರಸ್ತೆಯಲ್ಲಿ‌‌ ಇಲ್ಲದಿರುವುದು ಕಂಡುಬಂತು. ಈ ಪರಿಸ್ಥಿತಿ ನೋಡಿದವರಿಗೆ 1960-70 ದಶಕದ ಬೆಂಗಳೂರು ನೆನಪಿಗೆ ಬರುತ್ತಿದೆ. ಇನ್ನೂ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ‌ ಸ್ವಯಂಪ್ರೇರಿತವಾಗಿ ನಗರದ ನಾಗರಿಕರು ಮನೆಯಲ್ಲಿ‌ ಉಳಿದುಕೊಂಡಿದ್ದರಿಂದ ಅಷ್ಟಾಗಿ ಸಂಚಾರ ಸಮಸ್ಯೆ ಎದುರಾಗದಿರುವುದು ಕಂಡುಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.