ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ, ತಮ್ಮ ಮಗಳ ಮದುವೆಗೆ ಆಹ್ವಾನಿಸಿದ್ರು.
ಡಿ.ಕೆ.ಶಿವಕುಮಾರ್ಗೆ ಜಮೀರ್ ಅಹಮದ್ ಖಾನ್ ಅತ್ಯಂತ ವಿಶಿಷ್ಟವಾದ ಮದುವೆ ಆಮಂತ್ರಣ ನೀಡಿದ್ರು. ಅರಬ್ ಶೈಲಿಯಲ್ಲಿ ವಿನ್ಯಾಸ ಮಾಡಲಾದ ಆಮಂತ್ರಣ ಕಿಟ್ನಲ್ಲಿ ಡ್ರೈ ಫ್ರೂಟ್ಸ್ ಹಾಗೂ ಚಾಕಲೆಟ್ಗಳನ್ನು ಜೋಡಿಸಿಡಲಾಗಿದೆ. ಈ ಉಡುಗೊರೆಯ ಜೊತೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಬರುವಂತೆ ಡಿ.ಕೆ.ಶಿವಕುಮಾರ್ಗೆ ಆಹ್ವಾನಿಸಿದರು.
ಪುತ್ರಿ ಆರತಕ್ಷತೆಗೆ ಆಹ್ವಾನಿಸಿದ ರಮೇಶ್:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ನಟ ರಮೇಶ್ ಅರವಿಂದ್, ತಮ್ಮ ಮಗಳ ಮದುವೆ ಆರತಕ್ಷತೆಗೆ ಆಹ್ವಾನಿಸಿದರು.
ಕಳೆದ ವಾರ ಬೆಂಗಳೂರಿನ ಹೊರವಲಯದಲ್ಲಿ ರಮೇಶ್ ಅರವಿಂದ್ ಪುತ್ರಿ ವಿವಾಹ ಅದ್ಧೂರಿಯಾಗಿ ನೆರವೇರಿದ್ದು, ಇದೀಗ ಬೆರಳೆಣಿಕೆಯಷ್ಟು ಮಂದಿ ಆಹ್ವಾನಿತರ ಸಮ್ಮುಖದಲ್ಲಿ ಆರತಕ್ಷತೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದ್ದು, ಇವರಲ್ಲಿ ಡಿಕೆಶಿ ಕೂಡ ಒಬ್ಬರಾಗಿದ್ದಾರೆ.