ಬೆಂಗಳೂರು: ಬೆಂಗಳೂರು ಪೂರ್ವಭಾಗದಲ್ಲಿರುವ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್ ಡಿಸೆಂಬರ್ 16 ರವರೆಗೂ ಜಾಕೀರ್ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ಸದ್ಯ ಜಾಕೀರ್ ಹುಸೇನ್ ಅವರನ್ನು ಸಿಸಿಬಿ ಪೊಲೀಸರು ಸಂಪೂರ್ಣವಾಗಿ ಡ್ರಿಲ್ ಮಾಡ್ತಿದ್ದಾರೆ. ತಡರಾತ್ರಿ ಬಂಧಿಸಿದ ಕಾರಣ ಮೊದಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಲಾಯಿತು. ಬಳಿಕ ವಿಡಿಯೋ ಕಾನ್ಪರೆನ್ಸ್ ಮುಖಾಂತರ ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ಡಿಸೆಂಬರ್ 16 ರವರೆಗೂ ಜಾಕೀರ್ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಮಾಜಿ ಕಾರ್ಪೋರೇಟರ್ ಸಂಪತ್ ರಾಜ್ ಜೊತೆ ಸೆರಿಕೊಂಡು ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚುವಲ್ಲಿ ಜಾಕೀರ್ ಹುಸೇನ್ ಪಾತ್ರ ಬಹಳ ಪ್ರಮುಖವಾಗಿತ್ತು. ಹೀಗಾಗಿ ಅವರ ಮೊಬೈಲ್ ಡೇಟಾ ರಿಟ್ರಿವ್ ಆದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ತಾನು ಬಂಧನವಾಗುತ್ತೇನೆ ಎಂಬ ಕಾರಣಕ್ಕೆ ಸಹೋದರನ ಸಪೋರ್ಟ್ ತಗೊಂಡು ಎಸ್ಕೇಪ್ ಆಗಿದ್ದರು. ಸದ್ಯ ತಡರಾತ್ರಿ ಜಾಕೀರ್ ಹುಸೇನ್ ಅವರನ್ನು ಬಂಧಿಸಿದ್ದು, ಇನ್ನಿತರೆ ಆರೋಪಿಗಳಿಗೆ ಶೋಧ ಮುಂದುವರೆದಿದೆ.