ETV Bharat / state

ವಿಶ್ವ ಶಾಂತಿಗಾಗಿ ಜೈನಮುನಿಗಳ ನೇತೃತ್ವದಲ್ಲಿ ನಡೆಯಿತು ಉಪವಾಸ...! - ಆಚಾರ್ಯ ಶ್ರೀ ಆನಂದ್ ರಿಷಿಜಿ ಅವರ 120ನೇ ಜನ್ಮ ದಿನ

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಚಾರ್ಯ ಶ್ರೀ ಆನಂದ್ ರಿಷಿಜಿ ಅವರ 120ನೇ ಜನ್ಮ ದಿನದ ಅಂಗವಾಗಿ ದೇಶದ ವಿವಿಧ ಭಾಗಗಳ 500ಕ್ಕೂ ಹೆಚ್ಚು ಜನರು ಕಳೆದ ಎಂಟು ದಿನಗಳಿಂದ (192 ಘಂಟೆಗಳು) ವಿಶ್ವ ಶಾಂತಿಗಾಗಿ ಉಪವಾಸ ಹಮ್ಮಿಕೊಂಡಿದ್ದು, ಇದೀಗ ಅಂತ್ಯಗೊಳಿಸಲಾಗಿದೆ.

ವಿಶ್ವ ಶಾಂತಿಗಾಗಿ ಜೈನಮುನಿಗಳಿಂದ ನಡೆಯಿತು ಉಪವಾಸ
author img

By

Published : Aug 2, 2019, 8:42 AM IST

ಬೆಂಗಳೂರು: ಆಚಾರ್ಯ ಶ್ರೀ ಆನಂದ್ ರಿಷಿಜಿ ಅವರ 120ನೇ ಜನ್ಮ ದಿನದ ಅಂಗವಾಗಿ ದೇಶದ ವಿವಿಧ ಭಾಗಗಳ 500ಕ್ಕೂ ಹೆಚ್ಚು ಜನರು ಕಳೆದ ಎಂಟು ದಿನಗಳಿಂದ (192 ಘಂಟೆಗಳು) ವಿಶ್ವ ಶಾಂತಿಗಾಗಿ ಉಪವಾಸ ಹಮ್ಮಿಕೊಂಡಿದ್ದು, ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಾಯ್ ಶ್ರೀ ಪ್ರವೀಣ್ ರಿಷಿಜಿ ಹಾಗೂ ಶ್ರೀ ತೀರ್ಥಶ್ರೀ ರಿಷಿಜಿ ಅವರ ಸಮ್ಮುಖದಲ್ಲಿ ಉಪವಾಸವನ್ನು ಅಂತ್ಯಗೊಳಿಸಲಾಯಿತು.

ವಿಶ್ವ ಶಾಂತಿಗಾಗಿ ಜೈನಮುನಿಗಳಿಂದ ನಡೆಯಿತು ಉಪವಾಸ

ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಚಾರದ ಹಿನ್ನೆಲೆಯಲ್ಲಿ ಗುರುದೇವ್ ಪ್ರವೀಣ್ ರಿಷಿಜಿ ಅವರು ದೇಶಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಇವರು ಪ್ರತಿ ವರ್ಷ ಸುಮಾರು 3000 ಕಿ.ಮೀ ಪ್ರಯಾಣಿಸುತ್ತಾರೆ. ಒಂದು ಸ್ಥಳದಲ್ಲಿ 4 ತಿಂಗಳಿಗಿಂತ ಜಾಸ್ತಿ ತಂಗುವುದಿಲ್ಲ. ಇವರ ನೇತೃತ್ವದಲ್ಲಿ ದೇಶಾದ್ಯಂತದ ಜನರು ಕಳೆದ ಒಂದು ವಾರದಿಂದ ವಿಶ್ವಶಾಂತಿಗಾಗಿ ಉಪವಾಸ ಕೈಗೊಂಡಿದ್ದಾರೆ. ಇದು ಅತ್ಯಂತ ಕಠಿಣ ಉಪವಾಸವಾಗಿದ್ದು, ಜನರು ದಿನದ ಸಂಜೆಯವರೆಗೆ ಬಿಸಿ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸುವುದಿಲ್ಲ.

ಗುರು ಆನಂದ ಚಾತುರ್ಮಾಸ ಸಮಿತಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಉಪವಾಸ ನಿರತರೆಲ್ಲರೂ ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗುರುದೇವ್ ಪ್ರವೀಣ್ ಜಿ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಈ ವಿಶೇಷ ಸಂದರ್ಭದಲ್ಲಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

Intro:Body:ಜೈನ ಮುನಿಗಳ ನೇತೃತ್ವದಲ್ಲಿ ವಿಶ್ವ ಶಾಂತಿಗಾಗಿ ಉಪವಾಸ*

ವಿಶ್ವ ಶಾಂತಿಗಾಗಿ 500 ಜನರಿಂದ ಸತತ 8 ದಿನಗಳ ಕಾಲ ಉಪವಾಸ, ಇಂದು ಸಮಾರೋಪ
ಉಪಾಧ್ಯಾಯ್ ಶ್ರ ಪ್ರವೀಣ್ ರಿಷಿಜಿ ಉಪಸ್ಥಿತಿ
ಬೆಂಗಳೂರು :ಆಚಾರ್ಯ ಶ್ರೀ ಆನಂದ್ ರಿಷಿಜಿ ಅವರ 120ನೇ ಜನ್ಮ ದಿನದ ಅಂಗವಾಗಿ ದೇಶದ ವಿವಿಧ ಭಾಗಗಳ 500ಕ್ಕೂ ಹೆಚ್ಚು ಜನರು ಕಳೆದ ಎಂಟು ದಿನಗಳಿಂದ (192 ಗಂಟೆಗಳು) ವಿಶ್ವ ಶಾಂತಿಗಾಗಿ ಉಪವಾಸ ಹಮ್ಮಿಕೊಂಡಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಾಯ್ ಶ್ರೀ ಪ್ರವೀಣ್ ರಿಷಿಜಿ ಹಾಗೂ ಶ್ರೀ ತೀರ್ಥಶ್ರೀ ರಿಷಿಜಿ ಅವರ ಸಮ್ಮುಖದಲ್ಲಿ ಉಪವಾಸವನ್ನು ಅಂತ್ಯಗೊಳಿಸಲಾಯಿತು.

ಧಾರ್ಮಿಕ ಹಾಗೂ ಸಾಂಸ್ಕøತಿಕ ಪ್ರಚಾರದ ಹಿನ್ನೆಲೆಯಲ್ಲಿ ಗುರುದೇವ್ ಪ್ರವೀಣ್ ರಿಷಿಜಿ ಅವರು ದೇಶಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಇವರು ಪ್ರತಿ ವರ್ಷ ಸುಮಾರು 3000 ಕಿ.ಮೀ ಪ್ರಯಾಣಿಸುತ್ತಾರೆ. ಒಂದು ಸ್ಥಳದಲ್ಲಿ 4 ತಿಂಗಳಿಗಿಂತ ಜಾಸ್ತಿ ತಂಗುವುದಿಲ್ಲ. ಇವರ ನೇತೃತ್ವದಲ್ಲಿ ದೇಶಾದ್ಯಂತದ ಜನರು ಕಳೆದ ಒಂದು ವಾರದಿಂದ ವಿಶ್ವಶಾಂತಿಗಾಗಿ ಉಪವಾಸ ಕೈಗೊಂಡಿದ್ದಾರೆ. ಇದು ಅತ್ಯಂತ ಕಠಿಣ ಉಪವಾಸವಾಗಿದ್ದು, ಜನರು ದಿನದ ಸಂಜೆಯವರೆಗೆ ಬಿಸಿ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸುವುದಿಲ್ಲ.

ಗುರು ಆನಂದ ಚಾತುರ್ಮಾಸ ಸಮಿತಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಉಪವಾಸ ನಿರತರೆಲ್ಲರೂ ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗುರುದೇವ್ ಪ್ರವೀಣ್ ಜಿ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಈ ವಿಶೇಷ ಸಂದರ್ಭದಲ್ಲಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.