ETV Bharat / state

ಮತಬೇಟೆ ವೇಳೆ ರಾಮನನ್ನು ಜಪಿಸಿದ ಜಗ್ಗೇಶ್​: ಹಿಂಜರಿಕೆ ಮಾತೇ ಇಲ್ಲವೆಂದ ನವರಸ ನಾಯಕ - ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭ

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ನಟ ಜಗ್ಗೇಶ್ ಪ್ರಚಾರ ಮಾಡಿದ್ರು. ಪ್ರಚಾರದ ವೇಳೆ ರಾಮ ಜನ್ಮ ಭೂಮಿ ವಿಚಾರವನ್ನು ಜಗ್ಗೇಶ್​​ ಪ್ರಸ್ತಾಪಿಸಿದ್ರು. ಅಲ್ಲದೆ, ರಾಮನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಎಂದರು.

ಮತಬೇಟೆ ವೇಳೆ ರಾಮನನ್ನು ಜಪಿಸಿದ ಜಗ್ಗೇಶ್
author img

By

Published : Nov 25, 2019, 3:12 PM IST

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಕ್ಕೆ ತಾರಾ ಮೆರುಗು ಬಂದಿದ್ದು, ನಟ ಜಗ್ಗೇಶ್ ಅವರು ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಮತಬೇಟೆ ನಡೆಸಿದ್ರು.

ಸತ್ಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅವರು, ಕಮಲಾ ನಗರ, ಬಸವೇಶ್ವರ ನಗರ ಸೇರಿದಂತೆ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದರು. ಗೋಪಾಲಯ್ಯ ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆ ಅಭಿಪ್ರಾಯ ಇದೆ. ಗೋಪಾಲಯ್ಯ ಎಂಬ ನದಿ ಬಿಜೆಪಿ ಎಂಬ ಅದ್ಭುತ ನದಿ ಜೊತೆ ಸಮ್ಮಿಲನವಾಗಿದೆ. ಗೋಪಾಲಯ್ಯ ಸೇರಿದಂತೆ ೧೫ ಜನ ನಮ್ಮ ಪಕ್ಷಕ್ಕೆ ಬಂದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿ ಎಂಬ ಅಲೆ ದೇಶದಲ್ಲಿದೆ ಎಂದರು.

ಮತಬೇಟೆ ವೇಳೆ ರಾಮನನ್ನು ಜಪಿಸಿದ ಜಗ್ಗೇಶ್

ಇನ್ನು, ಪ್ರಚಾರದಲ್ಲಿ ರಾಮ ಜನ್ಮಭೂಮಿ ವಿಚಾರ ಪ್ರಸ್ತಾಪಿಸಿದ ನವರಸ ನಾಯಕ, ಸುಮಾರು ದಶಕಗಳ ಕಾಲ ವಿವಾದಿಂದಾಗಿ ಶ್ರೀರಾಮನ ಹೆಸರೇಳುವುದು ಕಷ್ಟ ಎನಿಸುತ್ತಿತ್ತು. ಆದ್ರೀಗ ನಮಗೆ ಶ್ರೀರಾಮ ಸಿಕ್ಕಿದ್ದಾನೆ, ನಾವು ಸ್ವಾಭಿಮಾನಿಗಳಾಗಿದ್ದೇವೆ. ಶ್ರೀರಾಮನ ಹೆಸರನ್ನು ಹೇಳೋಕೆ ಹಿಂಜರಿಯೊಲ್ಲ. ಇಡೀ ದೇಶದಲ್ಲಿ ಎಲ್ಲ ಧರ್ಮಿಯರು ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸಿದ್ದಾರೆ ಎಂದರು.

ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಜಗ್ಗೇಶ್​ ಅವರು, ಕುಮಾರಸ್ವಾಮಿ ‌ಅವರಪ್ಪನಾಣೆ ಸಿ.ಎಂ ಆಗಲ್ಲ ಅಂತ ಅಂತಿದ್ರಿ. ಆದ್ರೆ ಅಂದು ಮುಖ್ಯಮಂತ್ರಿಯಾಗಿದ್ದ ನೀವೇ ಹೆಚ್​ಡಿಕೆ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು. ಬಹುಮತ ಇಲ್ಲದಿದ್ರೂ ಕೂಡಾ ಅಪವಿತ್ರ ಮೈತ್ರಿ ಸರ್ಕಾರ ರಚಿಸಿದ್ರಿ ಎಂದು ಕುಟುಕಿದ್ರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಲಿಲ್ಲ. ಪ್ರತಿದಿನ ಕಿತ್ತಾಟ, ಕೆಸರೆರಚಾಟವೇ ನಡೀತಿತ್ತು. ಅದ್ರಿಂದ ಬೇಸತ್ತು 17 ಜನ ಶಾಸಕರು ನಿಮ್ಮ ಪಕ್ಷಗಳಿಂದ ಆಚೆ ಬಂದಿದ್ದಾರೆ. ಅವರನ್ನ ಗೆಲ್ಲಿಸಿ ಯಡಿಯೂರಪ್ಪರನ್ನ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಬೇಕಿದೆ. 15 ಜನ ಶಾಸಕರನ್ನೂ ಸಚಿವರನ್ನಾಗಿ ಮಾಡಬೇಕಿದೆ ಎಂದು ಜಗ್ಗೇಶ್​ ಮತಯಾಚಿಸಿದ್ರು.

Intro:ಮತಪ್ರಚಾರದಲ್ಲಿ ರಾಮಜನ್ಮಭೂಮಿ ವಿವಾದ ಪ್ರಸ್ತಾಪ-
ರಾಮಮಂದಿರದ ಬಗ್ಗೆ ಹೆದರಿಕೊಂಡು ಮಾತನಾಡಬೇಕಿಲ್ಲ ಎಂದ ಜಗ್ಗೇಶ್

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಕ್ಕೆ ತಾರಾ ಮೆರುಗು ಬಂದಿದ್ದು, ನಟ ಜಗ್ಗೇಶ್ ಗೋಪಾಲಯ್ಯ ಪರ ಪ್ರಚಾರ ಮಾಡಿದರು. ಮಾಜಿ ಸಿ.ಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಜಗ್ಗೇಶ್, ಕುಮಾರಸ್ವಾಮಿ ‌ಅವರಪ್ಪನಾಣೆ ಸಿ.ಎಂ ಆಗಲ್ಲ ಅಂತ ಅಂತಿದ್ರು.
ಆದ್ರೆ ನೀವೆ ಮುಖ್ಯಮಂತ್ರಿಯಾಗಿ ಅಂತ ಅವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂತು. ಬಹುಮತ ಇಲ್ಲದಿದ್ರೂ ಕೂಡಾ ಅಪವಿತ್ರ ಮೈತ್ರಿ ಸರ್ಕಾರ ರಚಿಸಿದ್ರು.
ಆದ್ರೆ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಪ್ರತಿದಿನ ಕಿತ್ತಾಟ ಕೆಸರೆರಚಾಟವೇ ಆಗಿತ್ತು. ಅದ್ರಿಂದ ಬೇಸತ್ತು 17 ಜನ ಶಾಸಕರು ಪಕ್ಷದಿಂದ ಆಚೆ ಬಂದಿದ್ದಾರೆ. ಅವರನ್ನ ಗೆಲ್ಲಿಸಿ ಯಡಿಯೂರಪ್ಪ ರನ್ನ ಮುಖ್ಯಮಂತ್ರಿ ಯನ್ನಾಗಿ ಮುಂದುವರೆಸಿ. 17 ಜನ ಶಾಸಕರನ್ನೂ ಸಚಿವರನ್ನಾಗಿ ಮಾಡಬೇಕಿದೆ ಎಂದು ಮತಯಾಚನೆ ಮಾಡಿದರು.

ಸತ್ಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಕಮಲಾ ನಗರ, ಬಸ್ವೇಶ್ವರ ನಗರ ಸೇರಿದಂತೆ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದರು. ಗೋಪಾಲಯ್ಯ ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆ ಅಭಿಪ್ರಾಯ ಇದೆ. ಗೋಪಾಲಯ್ಯ ಎಂಬ ನದಿ ಬಿಜೆಪಿ ಎಂಬ ಅದ್ಭುತ ನದಿ ಜೊತೆ ಸಮ್ಮಿಲನ ವಾಗಿದೆ. ನದಿಯಲ್ಲಿ ಸ್ನಾನ ಮಾಡೋದು ಶ್ರೇಷ್ಠ ಅಂತಾರೆ. ನಾವು ಗೋಪಾಲಯ್ಯ ಸೇರಿದಂತೆ ೧೫ ಜನ ನಮ್ಮ ಪಕ್ಷಕ್ಕೆ ಬಂದವರಿಗೆ ಅಭಿನಂದನೆ ಸಲ್ಲಿಸುತ್ತೇನೆಮೋದಿ ಎಂಬ ಅಲೆ ದೇಶದಲ್ಲಿದೆ ಎಂದರು.
ಇನ್ನು ಪ್ರಚಾರದಲ್ಲಿ ರಾಮ ಜನ್ಮ ಭೂಮಿ ವಿಚಾರ ಪ್ರಸ್ತಾಪಿಸಿ, ಸುಮಾರು ೧೫೦ ವರ್ಷಗಳ ಕಾಲ ಶ್ರೀರಾಮನನ್ನು ದೂರ ಇಟ್ಟಿದ್ದರು. ಈಗ ೧೫೦ ವರ್ಷಗಳ ಬಳಿಕ ನಮಗೆ ಶ್ರೀರಾಮ ಸಿಕ್ಕಿದ್ದಾನೆ.. ನಾವು ಸ್ವಾಭಿಮಾನಿಗಳು ಅದನ್ನು ಮಾಡೇ ಮಾಡ್ತಿವಿ ಎಂದರು.

ಮಾಧ್ಯಮಗಳ ಜೊತೆ ಮಾತನಾಡಿ, ಇವತ್ತು ಗೋಪಾಲಯ್ಯ ಪರ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಗೋಪಾಲಯ್ಯ ಗೆಲ್ಲುತ್ತಾರೆ ಎಂಬ ಭರವಸೆ ಇದೆ. ಪ್ರಚಾರದ ವೇಳೆ ರಾಮ ಮಂದಿರ ನಿರ್ಮಾಣ ವಿಚಾರ ಪ್ರಸ್ತಾಪ ಹಿನ್ನೆಲೆ ಪ್ರತಿಕ್ರಿಯಿಸಿ, ನನಗೆ ರಾಮ ಮಂದಿರ ಕುರಿತು ಮಾತಾಡೋಕೆ ಯಾವುದೇ ಭಯ ಇಲ್ಲ. ರಾಮ ಮಂದಿರದ ಬಗ್ಗೆ ನಾನು ಹೆದರಿಕೊಂಡು ಮಾತಾಡಬೇಕಾದ ಅವಶ್ಯಕತೆ ಇಲ್ಲ. ರಾಮ ಈ ದೇಶದ ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ. ಅದರ ನಿರ್ಧಾರ ಬಂದ ಬಳಿಕ ಪ್ರತಿಯೊಬ್ಬರು ಅದನ್ನು ಒಪ್ಪಿಕೊಂಡಿದ್ದಾರೆ. ನಾನು ನಿತ್ಯ ರಾಮನ ಪೂಜೆ ಮಾಡ್ತೀನಿ.ಇದು ರಾಮ ಜನ್ಮ ಭೂಮಿ...ಇದು ನೆಗೆಟೀವ್ ಅಂತ ಯಾರಾದ್ರೂ ಅಂದುಕೊಂಡರೆ ಅಂತಹ ಪಾಪಿಗಳು ಈ ದೇಶದಲ್ಲಿ ಯಾರೂ ಇಲ್ಲ ಎಂದರು.

ಸೌಮ್ಯಶ್ರೀ
Kn_bng_02_Jaggesh_campaign_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.