ETV Bharat / state

ಮಾದಕ ವಸ್ತು ಮಾರಾಟ: ಬೆಂಗಳೂರಿನಲ್ಲಿ ಐವರಿ ಕೋಸ್ಟ್​ ಪ್ರಜೆ ಸಿಸಿಬಿ ಬಲೆಗೆ - ಹೆಣ್ಣೂರು ಪೊಲೀಸ್ ಠಾಣೆ

ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

dsddf
ಮಾದಕ ವಸ್ತು ಮಾರಾಟ: ಬೆಂಗಳೂರಿನಲ್ಲಿ ಐವರಿಯನ್ ಪ್ರಜೆ ಸಿಸಿಬಿ ಬಲೆಗೆ
author img

By

Published : May 22, 2020, 11:52 AM IST

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಐವರಿ ಕೋಸ್ಟ್​ ಗಣತಂತ್ರ ದೇಶದ ಪ್ರಜೆಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಸ್ಸಿ ಅಯಾ ಬಸ್ಸಿಲ್ ಬಂಧಿತ ಆರೋಪಿ. ಈತ ಐವರಿ ಕೋಸ್ಟ್​​ನಿಂದ ಉದ್ಯಮ ವೀಸಾದಲ್ಲಿ ಭಾರತಕ್ಕೆ ಬಂದಿದ್ದವೀಸಾ ಅವಧಿ ಮುಗಿದಿದ್ದರೂ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದ. ಲಾಕ್​ ಡೌನ್ ಆಗಿದ್ದರಿಂದ ಮನೆಯಲ್ಲಿಯೇ ಮಾದಕ ವಸ್ತು, ಕೋಕೆನ್ ಸಂಗ್ರಹಿಸಿಟ್ಟುಕೊಂಡು ತನ್ನದೇ ಗ್ಯಾಂಗ್ ಸೃಷ್ಟಿ ಮಾಡಿ‌ ಮಾದಕ ವಸ್ತು ಮಾರಟ ಮಾಡಿಕೊಂಡಿದ್ದ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ಅಧಿಕಾರಿಗಳು 50 ಗ್ರಾಂ ಕೊಕೇನ್​, ಎಂಡಿಎಂಎ ಹಾಗೂ ಒಂದು ಮೊಬೈಲ್, ಒಂದು ತೂಕದ ಯಂತ್ರ ಒಟ್ಟು 4 ಲಕ್ಷ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತನ ವಿರುದ್ಧ ಐಪಿಸಿ 21(ಬಿ),22(ಬಿ) ಎನ್ .ಡಿ.ಪಿ.ಎಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.