ಬೆಂಗಳೂರು: ಐಟಿಬಿಟಿ ಇಲಾಖೆ ರಾಜ್ಯದ ಎಲ್ಲಾ ಸ್ಟಾರ್ಟ್ ಅಪ್ ಸಂಸ್ಥೆಗಳ ಸಮಸ್ಯೆ, ಬೇಡಿಕೆಗಳನ್ನು ತಿಳಿದುಕೊಳ್ಳಲು ಸರ್ವೆ ಮಾಡಲು ಮುಂದಾಗಿದೆ. ಆನ್ಲೈನ್ ಮೂಲಕ ಸರ್ವೆ ಕಾರ್ಯ ನಡೆಸಲಿರುವ ಐಟಿಬಿಟಿ ಇಲಾಖೆ ರಾಜ್ಯದ ನೋಂದಾಯಿತ ಎಲ್ಲಾ ಸ್ಟಾರ್ಟ್ ಅಪ್ ಸಂಸ್ಥೆಗಳ ಅಹವಾಲು, ಸಮಸ್ಯೆ, ಬೇಡಿಕೆ, ಅಗತ್ಯಗಳನ್ನು ಆಲಿಸಲಿದೆ. ಈ ಸಂಬಂಧ ಐಟಿ ಹಾಗೂ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ತಮ್ಮ ಅಗತ್ಯತೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಐಟಿಬಿಟಿ ಇಲಾಖೆ ಸರ್ವೆಯನ್ನು ಕೈಗೊಳ್ಳುತ್ತಿದೆ. ಸರ್ವೆಯಲ್ಲಿ ಒಟ್ಟು ಗೂಡಿಸಿದ ಅಭಿಪ್ರಾಯಗಳ ಆಧಾರದಲ್ಲಿ ತಮಗೆ ತಕ್ಕಂತೆ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ರೂಪಿಸಲಿದ್ದೇವೆ. ಆ ಮೂಲಕ ರಾಜ್ಯದ ಸ್ಟಾರ್ಟ್ ಅಪ್ ಸಮುದಾಯಕ್ಕೆ ಪ್ರೋತ್ಸಾಹ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
-
📢 Attention to all state registered startups!@ITBTGoK is conducting a survey to understand your requirements. Based on the collected responses, we will design tailored programs and workshops to support the startup community in Karnataka.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 1, 2023 " class="align-text-top noRightClick twitterSection" data="
Selected sector-wise startups can…
">📢 Attention to all state registered startups!@ITBTGoK is conducting a survey to understand your requirements. Based on the collected responses, we will design tailored programs and workshops to support the startup community in Karnataka.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 1, 2023
Selected sector-wise startups can…📢 Attention to all state registered startups!@ITBTGoK is conducting a survey to understand your requirements. Based on the collected responses, we will design tailored programs and workshops to support the startup community in Karnataka.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 1, 2023
Selected sector-wise startups can…
ಆಯ್ದ ಕ್ಷೇತ್ರವಾರು ಸ್ಟಾರ್ಟ್ ಅಪ್ಗಳು ಸರ್ಕಾರದ ಮುಕ್ತ ಚರ್ಚಾ ವೇದಿಕೆಯಲ್ಲೂ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, docs.google.com/forms/d/e/1FAI ಸರ್ವೆ ಲಿಂಕ್ನ್ನು ಪೋಸ್ಟ್ ಮಾಡಿದ್ದಾರೆ. ಆಗಸ್ಟ್ 9 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಈ ಸರ್ವೆ ಲಿಂಕ್‌ನಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳ ಹೆಸರು, ವಿಳಾಸ, ನೋಂದಣಿ ಸಂಖ್ಯೆ, ಮೊಬೈಲ್ ನಂಬರ್, ಇ-ಮೇಲ್ ಐಡಿಯನ್ನು ನಮೂದಿಸಬೇಕು. ಸರ್ವೆ ಪೇಜ್ನಲ್ಲಿ ಸ್ಟಾರ್ಟ್ ಅಪ್ಗಳು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸದ್ಯ ಸಂಸ್ಥೆಯ ಪ್ರಗತಿ ಹಂತ 2022-23 ನಲ್ಲಿ ಆದಾಯ, ಬಂಡವಾಳ ಹೂಡಿಕೆಯಾಗಿದೆಯಾ ಎಂಬ ಬಗ್ಗೆ ಕೆಲ ಅಗತ್ಯ ಮಾಹಿತಿಗಳನ್ನು ಕೇಳಲಾಗಿದೆ.
ಸ್ಟಾರ್ಟ್ ಅಪ್ ಕಂಪನಿಗಳಿಗೆ ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ಆಕರ್ಷಣೀಯ ತಾಣವಾಗಿದೆ. ಬೆಂಗಳೂರು ಸ್ಟಾರ್ಟ್ ಅಪ್ಗಳ ರಾಜಧಾನಿ ಎಂಬ ಹೆಗ್ಗಳಿಕೆಯನ್ನೂಗಳಿಸಿದೆ. ಸ್ಟಾರ್ಟ್ ಅಪ್ ಕಂಪನಿಗಳಿಗೆ ರಾಜ್ಯದಲ್ಲಿ ಇನ್ನಷ್ಟು ಪೂರಕ ವಾತಾವರಣ, ಸುಗಮ ಉದ್ಯಮ ಸ್ನೇಹಿ ಪರಿಸರ ಸೃಷ್ಟಿಸಲು ಐಟಿಬಿಟಿ ಇಲಾಖೆ ಮುಂದಾಗಿದೆ.
ಡಿಸೆಂಬರ್ನಲ್ಲಿ ಸ್ಟಾರ್ಟ್ ಅಪ್ ನೀತಿಗೆ ಅನುಮೋದನೆ : ರಾಜ್ಯ ಬಿಜೆಪಿ ಸರ್ಕಾರ ಡಿಸೆಂಬರ್ನಲ್ಲಿ ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿ ಸ್ಟಾರ್ಟ್ಅಪ್ಗಳು ಸ್ಥಾಪನೆಯಾಗಿ ಅಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಆ ಮೂಲಕ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಅನುಮೋದನೆ ನೀಡಲಾಗಿತ್ತು.
ಇನ್ನು 2027ರ ಹೊತ್ತಿಗೆ ರಾಜ್ಯದಲ್ಲಿ 25 ಸಾವಿರ ನವೋದ್ಯಮಗಳು ನೆಲೆಯೂರುವಂತೆ ಮಾಡುವ ಗುರಿಯುಳ್ಳ 2022-27ರ ನಡುವಿನ ಐದು ವರ್ಷಗಳ ಅವಧಿಯ ಹೊಸ ಸ್ಟಾರ್ಟಪ್ ನೀತಿಗೆ ಇದಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ 15 ಸಾವಿರ ಸ್ಟಾರ್ಟಪ್‌ಗಳಿವೆ. ಹೊಸ ನೀತಿಯಿಂದಾಗಿ ಇನ್ನೂ 10 ಸಾವಿರ ನವೋದ್ಯಮಗಳು ನಮ್ಮಲ್ಲಿ ಅಸ್ತಿತ್ವಕ್ಕೆ ಬರಲಿವೆ. ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ರೂಪಿಸಿರುವ ಈ ನೀತಿಯು ಕರ್ನಾಟಕವನ್ನು ದೇಶದ ಸ್ಟಾರ್ಟಪ್ ವಲಯದಲ್ಲಿ 'ಚಾಂಪಿಯನ್ ರಾಜ್ಯ'ವನ್ನಾಗಿ ಪ್ರತಿಷ್ಠಾಪಿಸುವ ಗುರಿ ಹೊಂದಿದೆ.
ಇದನ್ನೂ ಓದಿ: ಖಾಸಗಿ ಕಂಪನಿಗಳು ಸಾಂಖ್ಯಿಕ ದತ್ತಾಂಶ ಸಲ್ಲಿಸದಿರುವುದು ದೇಶದ ನೀತಿ ನಿರೂಪಣೆ ಮೇಲೆ ಪರಿಣಾಮ ಬೀರಲಿವೆ: ಹೈಕೋರ್ಟ್