ETV Bharat / state

ಇಂದು ರಿಜ್ವಾನ್ ಅರ್ಷದ್ ಪರ ಶಿವಾಜಿನಗರದಲ್ಲಿ ಸಿದ್ದರಾಮಯ್ಯ ಪ್ರಚಾರ..

author img

By

Published : Dec 1, 2019, 8:08 AM IST

ಐಎಂಎ ಹಗರಣದಲ್ಲಿ ರಿಜ್ವಾನ್ ಅರ್ಷದ್‌ ಹೆಸರು ಕೂಡ ಕೇಳಿ ಬಂದಿರುವ ಹಿನ್ನೆಲೆ ಅವರ ಜೊತೆ ವೇದಿಕೆ ಅಥವಾ ಪ್ರಚಾರ ಕಾರ್ಯಕ್ರಮವನ್ನು ಹಂಚಿಕೊಳ್ಳಲು ಹಲವು ನಾಯಕರು ಹಿಂಜರಿಯುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಈವರೆಗೂ ಯಾವ ರಾಜಕಾರಣಿಯೂ ರಿಜ್ವಾನ್ ಜತೆ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ.

bng
ಶಿವಾಜಿನಗರದಲ್ಲಿ ಸಿದ್ದರಾಮಯ್ಯ ಇಂದು ಪ್ರಚಾರ ಮಾಡಲಿದ್ದಾರೆ.

ಬೆಂಗಳೂರು: ಉಪಚುನಾವಣೆ ಬಹಿರಂಗ ಪ್ರಚಾರ ಅಂತ್ಯವಾಗಲು ಮೂರುದಿನ ಬಾಕಿ ಇರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಶಿವಾಜಿನಗರದಲ್ಲಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ಎರಡು ವಾರಗಳಿಂದ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದರೂ ಕೂಡ ಶಿವಾಜಿನಗರ ಕಡೆ ಮುಖಮಾಡದ ಸಿದ್ದರಾಮಯ್ಯ, ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪರ ಇಂದು ಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭ ಇವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರಂತೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ ಕೆಆರ್‌ಪುರಂ, ಸಂಜೆ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.‌ ಕೆಆರ್‌ಪುರದಲ್ಲಿ ಬೆಳಗ್ಗೆ 11 ಗಂಟೆಗೆ ಹೊರಮಾವು, 12ಕ್ಕೆ ಕಲ್ಕೆರೆ, 1ಕ್ಕೆ ಚನ್ನಸಂದ್ರ, 2ಕ್ಕೆ ರಾಮಮೂರ್ತಿನಗರ, 3 ಗಂಟೆಗೆ ಅಂಬೇಡ್ಕರ್‌ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇದಾದ ಬಳಿಕ ಸಂಜೆ 5 ಗಂಟೆ ನಂತರ ಶಿವಾಜಿನಗರದಲ್ಲಿ ಪ್ರಚಾರಕಾರ್ಯ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.

ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವೇಳೆ ರಿಜ್ವಾನ್ ಅರ್ಷದ್ ಜೊತೆ ಹಲವು ರಾಜ್ಯ ನಾಯಕರು ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ರಾಜ್ಯಸಭೆ ಸದಸ್ಯ ಬಿ ಕೆ ಹರಿಪ್ರಸಾದ್ ಸೇರಿ ಯಾವೊಬ್ಬ ನಾಯಕರು ಇವರ ಜೊತೆ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಆದರೆ, ಮೊನ್ನೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಒಂದೆರಡು ಕಡೆ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಇತರೆ ನಾಯಕರು ಕಾಣಿಸಿಕೊಂಡಿದ್ದು ಬಿಟ್ಟರೆ ರಾಜ್ಯ ನಾಯಕರು ಯಾರೂ ಕಾಣಿಸಿಕೊಂಡಿಲ್ಲ.

ಐಎಂಎ ಹಗರಣದಲ್ಲಿ ರಿಜ್ವಾನ್ ಹೆಸರು ಕೂಡ ಕೇಳಿ ಬಂದಿರುವ ಹಿನ್ನೆಲೆ ಅವರ ಜೊತೆ ವೇದಿಕೆ ಅಥವಾ ಪ್ರಚಾರ ಕಾರ್ಯಕ್ರಮವನ್ನು ಹಂಚಿಕೊಳ್ಳಲು ಹಲವು ನಾಯಕರು ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

Intro:newsBody:ಕೊನೆಗೂ ಶಿವಾಜಿನಗರದತ್ತ ಮುಖ ಮಾಡಲಿದ್ದಾರೆ ಸಿದ್ದರಾಮಯ್ಯ

ಬೆಂಗಳೂರು: ಚುನಾವಣೆ ಬಹಿರಂಗ ಪ್ರಚಾರ ಅಂತ್ಯ ವಾಗಲು ಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಶಿವಾಜಿನಗರದಲ್ಲಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.
ಎರಡು ವಾರಗಳಿಂದ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದರು ಶಿವಾಜಿನಗರದ ಮುಖಮಾಡದ ಸಿದ್ದರಾಮಯ್ಯ ನಾಳೆ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪರ ಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭ ಇವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಇದೆ.
ಕಾರ್ಯಕ್ರಮ ವಿವರ
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ ಕೆ.ಆರ್.ಪುರಂ, ಸಂಜೆ ಶಿವಾಜಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.‌
ಕೆ.ಆರ್.ಪುರದಲ್ಲಿ ಬೆಳಗ್ಗೆ 11 ಕ್ಕೆ ಹೊರಮಾವು, 12ಕ್ಕೆ ಕಲ್ಕೆರೆ, 1 ಕ್ಕೆ ಚನ್ನಸಂದ್ರ, 2 ಕ್ಕೆ ರಾಮಮೂರ್ತಿ ನಗರ 3ಕ್ಕೆ ಅಂಬೇಡ್ಕರ್ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಇದಾದ ಬಳಿಕ ಸಂಜೆ 5 ಗಂಟೆ ನಂತರ ಶಿವಾಜಿನಗರದಲ್ಲಿ ಪ್ರಚಾರಕಾರ್ಯ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಶಿವಾಜಿನಗರದ ಯಾವ ಯಾವ ಕಡೆ ಪ್ರಚಾರ ನಡೆಸಲಿದ್ದಾರೆ ಎಂಬ ಮಾಹಿತಿ ಇದುವರೆಗೂ ಲಭಿಸಿಲ್ಲ. ಕನಿಷ್ಠ 2ರಿಂದ 3ಗಂಟೆ ಶಿವಾಜಿ ನಗರದ ವಿವಿಧ ಭಾಗಗಳಲ್ಲಿ ಪ್ರಚಾರ ಕಾರ್ಯ ನಡೆಸುವ ಸಾಧ್ಯತೆ ಇದೆ.
ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವೇಳೆ ರಿಜ್ವಾನ್ ಅರ್ಷದ್ ಜೊತೆ ಹಲವು ರಾಜ್ಯ ನಾಯಕರು ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ರಾಜ್ಯಸಭೆ ಸದಸ್ಯ ಬಿಕೆ ಹರಿಪ್ರಸಾದ್ ಸೇರಿದಂತೆ ಯಾವೊಬ್ಬ ನಾಯಕರು ಇವರ ಜೊತೆ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಒಂದೆರಡು ಕಡೆ ಮಾಜಿ ಸಚಿವ ಜಮೀರ್ ಅಹಮದ್ ಹಾಗೂ ಇತರೆ ನಾಯಕರು ಕಾಣಿಸಿಕೊಂಡಿದ್ದು ಬಿಟ್ಟರೆ ರಾಜ್ಯ ನಾಯಕರು ಯಾರು ಕಾಣಿಸಿಕೊಂಡಿಲ್ಲ. ಐಎಂಎ ಹಗರಣದಲ್ಲಿ ರಿಜ್ವಾನ್ ಹೆಸರು ಕೂಡ ಕೇಳಿ ಬಂದಿರುವ ಹಿನ್ನೆಲೆ ಅವರ ಜೊತೆ ವೇದಿಕೆ ಅಥವಾ ಪ್ರಚಾರ ಕಾರ್ಯಕ್ರಮವನ್ನು ಹಂಚಿಕೊಳ್ಳಲು ಹಲವು ನಾಯಕರು ಹಿಂಜರಿಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಒಂದಿಷ್ಟು ದಿನ ಅಂತರ ಕಾಪಾಡಿಕೊಂಡಿದ್ದು ಈಗ ಸಾಕಷ್ಟು ಚರ್ಚೆ ನಡೆದ ಹಿನ್ನೆಲೆ ಪ್ರಚಾರಕ್ಕೆ ಆಗಮಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.