ಬೆಂಗಳೂರು: ಅನ್ಯ ರಾಜ್ಯದಿಂದ ಲಾರಿಗಳ ಮೂಲಕ ಬರುವ ಹಾಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮಿಳುನಾಡಿಂದ ಮಹಾರಾಷ್ಟ್ರಕ್ಕೆ ಕರ್ನಾಟಕ ಮಾರ್ಗವಾಗಿ ಕಾರ್ಮಿಕರನ್ನು ಕಳುಹಿ ಸಿಕೊಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಒಳಗಿಂದ ಅವರು ಹೋಗಬೇಕಿದೆ. ಹೀಗಾಗಿ ಅವರ ಆರೋಗ್ಯ ತಪಾಸಣೆ ಮಾಡಬೇಕು. ಕೊರೊನಾ ಇರುವುದರಿಂದ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಹೀಗಾಗಿ ಅಧಿಕಾರಿಗಳು ಅಲ್ಲಿ ತಪಾಸಣೆ ಮಾಡುತ್ತಿದ್ದಾರೆ. ಅದಕ್ಕೆ ಜನ ಸಹ ಸಹಕಾರ ಕೊಡಬೇಕು ಎಂದರು.
ಕ್ವಾರಂಟೈನ್ ನಿಯಮ ಏನಿದೆಯೋ ಅದನ್ನ ಮಾಡಬೇಕು. ಲಾರಿಗಳಲ್ಲಿ ಬರೋದು ತಪ್ಪು. ಕಾನೂನು ಪ್ರಕಾರ ಬರಬೇಕು. ಇದು ನನ್ನ ಗಮನಕ್ಕೂ ಬಂದಿದೆ. ಅಧಿಕಾರಿಗಳ ಜತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಪಾದರಾಯನಪುರದಲ್ಲಿ ಕ್ವಾರೆಂಟೈನ್ನಲ್ಲಿ ಇರೋರು ಗೋಡೆ ಹಾರಿ ಪರಾರಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಈಗಾಗಲೇ ತನಿಖೆಗೂ ಸಹ ಸರ್ಕಾರ ಸೂಚಿಸಿದೆ. ಅವರನ್ನು ಹಿಡಿದು ಮತ್ತೆ ಕ್ವಾರಂಟೈನ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ ಎಂದರು.