ಬೆಂಗಳೂರು: ಕಳೆದ 70 ವರ್ಷಕ್ಕೂ ಹೆಚ್ಚು ಕಾಲ ಅಭಿವೃದ್ಧಿಯಲ್ಲಿ ಜಿಡ್ಡುಗಟ್ಟಿದ ಸ್ಥಿತಿಯಲ್ಲಿರುವ ಕೇರಳದಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ ಎಂದು ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ನಾರಾಯಣ ಹೇಳಿದ್ದಾರೆ.
ಸುವರ್ಣ ಕರ್ನಾಟಕ ಕೇರಳ ಸಮಾಜಂ ಸದಸ್ಯರ ಜೊತೆ ಸಂವಾದ ನಡೆಸಿದ್ದ ಡಿಸಿಎಂ, ಕೇರಳದಲ್ಲಿ ಬದಲಾವಣೆ ಆಗಲೇಬೇಕು. ಎಲ್‌ಡಿಎಫ್ ಹಾಗೂ ಯುಡಿಎಫ್ ನಡೆಸಿದ ದುರಾಡಳಿತ ಸಾಕು. ಇದಕ್ಕೆ ಸಮಸ್ತ ಕೇರಳಿಗರೆಲ್ಲ ಕೈ ಜೋಡಿಸಿ ಏಳು ದಶಕಗಳ ನಂತರ ಹೊಸ ರಾಜಕೀಯ ಶಕ್ತಿಯ ಉದಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಉತ್ತಮ ಸಾಕ್ಷರತೆ ಹೊಂದಿದ್ದರೂ ಅಭಿವೃದ್ಧಿಯಲ್ಲಿ ಕೇರಳ ಹಿಂದೆ ಬಿದ್ದಿರುವುದು ಯಾಕೆ ಎಂದು ಎಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಇದುವರಿಗೂ ಆಗಿರುವ ನಷ್ಟ ಸಾಕು. ಈ ಬಾರಿ ಬಿಜೆಪಿಗೆ ಅವಕಾಶ ನೀಡಬೇಕು. ಅಭಿವೃದ್ಧಿ ಎಂದರೆ ಬಿಜೆಪಿಯಷ್ಟೇ ಆಯ್ಕೆ ಮತ್ತು ಪರಿಹಾರ. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು. ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿ ಪರ ಇರುವ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಿದರು.
ಈ ವೇಳೆ ಕೇರಳ ಸಮಾಜದ ಸದಸ್ಯರು ಉಪ ಮುಖ್ಯಮಂತ್ರಿ ಅವರಿಗೆ ಕೇರಳ ಪ್ರವಾಸೋದ್ಯಮಕ್ಕೆ ದ್ಯೋತಕವಾದ ಅಲೆಪ್ಪಿ ಬೋಟ್‌ಹೌಸ್ ಸ್ಮರಣಿಕೆ ನೀಡಿ ಗೌರವಿಸಿದರು.