ETV Bharat / state

ವಿವಿಧ ಕಾಮಗಾರಿಗಳನ್ನು ಸರ್ಕಾರ ತಡೆದಿರುವುದು ಸರಿಯಲ್ಲ: ದಿನೇಶ್​ ಗುಂಡೂರಾವ್​​

ಕೆಪಿಸಿಸಿ ಕಚೇರಿಯಲ್ಲಿ ಕೈ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆದಿದ್ದು, ಸಿಎಂ ಬಿಎಸ್​​ವೈ ನಗರಾಭಿವೃದ್ಧಿಗಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ತಡೆದಿರುವುದು ಸರಿಯಲ್ಲ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇಶ್ ವಾಗ್ದಾಳಿ
author img

By

Published : Aug 5, 2019, 2:07 PM IST

Updated : Aug 5, 2019, 3:04 PM IST

ಬೆಂಗಳೂರು: ಮಹಾನಗರದಲ್ಲಿ ಅನುಮೋದನೆ ಪಡೆದು ನಡೆಯುತ್ತಿರುವ ಕೆಲಸಗಳನ್ನ ತಡೆಹಿಡಿಯಬಾರದು. ಬೆಂಗಳೂರಿನ ಹಿತದೃಷ್ಠಿಯಿಂದ ಇದು ಉತ್ತಮವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕೈ ನಾಯಕರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನವ ಬೆಂಗಳೂರು ಯೋಜನೆ ಅಡಿ 8,000 ಕೋಟಿ ರೂ. ಮೊತ್ತದ ಯೋಜನೆಯನ್ನು ಸರ್ಕಾರ ತಡೆಹಿಡಿದಿದೆ. ಹಿಂದಿನ ಮೈತ್ರಿ ಸರ್ಕಾರ ಘೋಷಿಸಿದ್ದ ಯೋಜನೆಗಳನ್ನು ತಡೆಹಿಡಿಯುವ ಜೊತೆಗೆ ಬಿಬಿಎಂಪಿ ಬಜೆಟ್ ಕೂಡ ತಡೆಹಿಡಿಯಲಾಗಿದೆ. ಇದು ಸರಿಯಲ್ಲ ಎಂದರು.

ಬೆಂಗಳೂರು ನಗರೋತ್ಥಾನ ಯೋಜನೆಯನ್ನು ಹಿಂದೆ ಸಿದ್ದರಾಮಯ್ಯ ಅನುಷ್ಠಾನಕ್ಕೆ ತಂದಿದ್ದರು. ಕಸದ ಸಮಸ್ಯೆ, ಕುಡಿಯುವ ನೀರು, ರಸ್ತೆ, ಟೆಂಡರ್ ಶ್ಯೂರ್ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಮತ್ತೆ 11,500 ಕೋಟಿಗೆ ಅನುಮೋದನೆ ನೀಡಲಾಗಿತ್ತು. ಕಾಮಗಾರಿಗಳು ವೇಗವಾಗಿ ನಡೆದಿದ್ದವು. ಆದರೆ ಯಡಿಯೂರಪ್ಪ ಬರುತ್ತಿದ್ದಂತೆ ತಡೆ ನೀಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ದಿನೇಶ್ ವಾಗ್ದಾಳಿ ನಡೆಸಿದರು.

ವಿವಿಧ ಕಾಮಗಾರಿಗಳನ್ನು ಸರ್ಕಾರ ತಡೆದಿರುವುದು ಸರಿಯಲ್ಲ

ಸಾಕಷ್ಟು ಹಣ ಖರ್ಚು:

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, 8,500 ಕೋಟಿ ರೂ. ಮೊತ್ತದ ಕೆಲಸಗಳು ಪ್ರಾರಂಭವಾಗಿವೆ. ರಸ್ತೆ, ಫ್ಲೈ ಓವರ್, ಚರಂಡಿ ಎಲ್ಲಾ ಕಾಮಗಾರಿಗಳು ಸೇರಿವೆ. 150 ಕೋಟಿಗಿಂತ ಹೆಚ್ಚು ಹಣ ಎಲ್ಲಾ 28 ಕ್ಷೇತ್ರಗಳಿಗೆ ಹಂಚಿಕೆಯಾಗಿದೆ. ಹೀಗಾಗಿ ನವ ಬೆಂಗಳೂರು ಯೋಜನೆಗೆ ತಡೆ ಬೇಡ. ಗುಣಮಟ್ಟ ಪರಿಶೀಲನೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕಾಮಗಾರಿಗಳನ್ನ ತಡೆಹಿಡಿಯುವುದು ಸರಿಯಲ್ಲ. ನ್ಯೂನತೆ, ಕಳಪೆ ಕಾಮಗಾರಿ ಇದ್ದರೆ ಕ್ರಮ ತೆಗೆದುಕೊಳ್ಳಲಿ. ಅದು ಬಿಟ್ಟು ಕಾಮಗಾರಿಗೆ ತಡೆ ನೀಡುವುದು ಸರಿಯಲ್ಲ ಎಂದರು.

ಆಸ್ತಿ ಅಡವಿಟ್ಟು ಹೋಗಿದ್ದರು:

ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಜೆಪಿಯವರು ಆಸ್ತಿ ಅಡವಿಟ್ಟು ಹೋಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಾವು ಬಿಡಿಸಿದ್ದೆವು. 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದ್ದೇವೆ. ಮಳೆ ನೀರಿನಿಂದ ರಸ್ತೆ ಗುಂಡಿ ಬೀಳುತ್ತಿದ್ದವು. ಈಗ ವೈಟ್ ಟಾಪಿಂಗ್ ಮಾಡುತ್ತಿದ್ದೇವೆ. ಇದರಿಂದ 30 ವರ್ಷ ರಸ್ತೆ ಗುಣಮಟ್ಟದಿಂದ ಕೂಡಿರುತ್ತದೆ. ಹೊರಭಾಗದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಉತ್ತಮ ಕೆಲಸಗಳು ಈಗ ನಡೆಯುತ್ತಿವೆ. ಇದನ್ನ ಸ್ಟಾಪ್ ಮಾಡಿದರೆ ಕಾಮಗಾರಿ ನಿಲ್ಲುತ್ತದೆ. ಬೆಂಗಳೂರಿನ ಅಂದವೂ ಕೆಡುತ್ತದೆ. ಆರೇಳು ತಿಂಗಳಲ್ಲಿ ನಗರ ಅಧ್ವಾನವಾಗುತ್ತದೆ. ಹೀಗಾಗಿ ಕಾಮಗಾರಿಗಳನ್ನ ತಡೆಹಿಡಿಯುವುದು ಸರಿಯಲ್ಲ ಎಂದರು.

ಕೇಂದ್ರದ ಕ್ರಮ ಖಂಡನೀಯ:

ಜಮ್ಮು-ಕಾಶ್ಮೀರದಿಂದ 370 ಹಾಗೂ 35 ಎ ಸಂವಿಧಾನದ ವಿಧಿ ಹಿಂಪಡೆದ ಕೇಂದ್ರದ ಕ್ರಮ ಖಂಡಿಸಿ ಮಾತನಾಡಿದ ದಿನೇಶ್, 370 ತೆಗೆಯುವುದು ಒಂದು ಸೂಕ್ಷ್ಮ ವಿಚಾರ. ಇನ್ನೂ ಪ್ರಯತ್ನಗಳು ನಡೆದಿರಬಹುದು. ಒಂದು ವೇಳೆ ಅಂತಹ ಕೆಲಸಕ್ಕೆ ಕೈಹಾಕಿದರೆ ಅದು ದುಸ್ಸಾಹಸ. ಈಗಾಗಲೇ 30 ಸಾವಿರ ಸೈನಿಕರನ್ನ ನಿಯೋಜಿಸಿದ್ದಾರೆ. ಅಲ್ಲಿ ವಿಶೇಷ ಅಧಿಕಾರ ತೆಗೆದಿದ್ದಾರೆ. ಫೋನ್ ಸಂಪರ್ಕ ಕಡಿತ ಮಾಡಿದ್ದಾರೆ. ಅಲ್ಲಿ ಎಮರ್ಜೆನ್ಸಿ ಕ್ರಿಯೇಟ್ ಮಾಡಿದ್ದಾರೆ. ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂತಹ ದುಸ್ಸಾಹಸ ಮಾಡುವುದು ಕೇಂದ್ರಕ್ಕೆ ಒಳ್ಳೆಯದಲ್ಲ. ನಮ್ಮ ರಾಷ್ಟ್ರೀಯ ನಾಯಕರು ಇದರ ಬಗ್ಗೆ ಗಮನಹರಿಸ್ತಾರೆ ಎಂದರು.

Intro:newsBody:ನವಬೆಂಗಳೂರು ಸೇರಿದಂತೆ ವಿವಿಧ ಯೋಜನೆಗಳನ್ನು ಸರ್ಕಾರ ತಡೆದಿರುವುದು ಸರಿಯಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: ಮಹಾನಗರದಲ್ಲಿ ಅನುಮೋದನೆ ಪಡೆದು ನಡೆಯುತ್ತಿರುವ ಕೆಲಸಗಳನ್ನ ತಡೆಹಿಡಿಯಬಾರದು. ಬೆಂಗಳೂರು ಹಿತದೃಷ್ಠಿಯಿಂದ ಇದು ಉತ್ತಮವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೈ ನಾಯಕರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನವಬೆಂಗಳೂರು ಯೋಜನೆ ಅಡಿ 8000 ಕೋಟಿ ರೂ ಮೊತ್ತದ ಯೋಜನೆಯನ್ನು ಸರ್ಕಾರ ತಡೆಹಿಡಿದಿದೆ. ಹಿಂದಿನ ಮೈತ್ರಿ ಸರ್ಕಾರ ಘೋಷಿಸಿದ್ದ ಯೋಜನೆಗಳನ್ನು ತಡೆಹಿಡಿಯುವ ಜೊತೆಗೆ ಬಿಬಿಎಂಪಿ ಬಜೆಟ್ ಕೂಡ ತಡೆಹಿಡಿಯಲಾಗಿದೆ. ನಿಂತ ಕ್ರಮ ಕೈಗೊಂಡಿ ರುವುದು ಸರಿಯಲ್ಲ ಎಂದರು.
ಅಭಿವೃದ್ಧಿ ಕೆಲಸಗಳು ತಡೆ ಹಿಡಿಯಲಾದ ಪ್ರದೇಶಗಳು ನಮ್ಮನ್ನ ಬಿಟ್ಟುಹೋಗಿರುವ ಶಾಸಕರ ಕ್ಷೇತ್ರದಲ್ಲಿ ಕೂಡ ಇವೆ. ನಮ್ಮ ಅವಧಿಯಲ್ಲಿ ನಾವು ಇಂತ ಕೆಲಸ ಮಾಡಿರಲಿಲ್ಲ. ಹೀಗಾಗಿ ಸಿಎಂ ಇದರ ಬಗ್ಗೆ ಸಮಸ್ಯೆ ತಂದೊಡ್ಡಬಾರದು. ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಇಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ತಡೆ ಹಿಡಿದಿರುವ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು. ಅನುಮೋದನೆ ಆದ ನಂತರ ತಡೆಹಿಡಿಯುವುದು ಸರಿಯಲ್ಲ. ಸಿಎಂ ಬಿಎಸ್ ವೈ ತಮ್ಮ ಚಿಂತನೆಯನ್ನ ಕೈಬಿಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ನಗರೋತ್ಥಾನ ಯೋಜನೆಯನ್ನು ಹಿಂದೆ ಸಿದ್ದರಾಮಯ್ಯ ಅನುಷ್ಠಾನಕ್ಕೆ ತಂದಿದ್ದರು. ಕಸದ ಸಮಸ್ಯೆ ,ಕುಡಿಯುವ ನೀರು,ರಸ್ತೆ, ಟೆಂಡರ್ ಶ್ಯೂರ್ ಕಾಮಗಾರಿಗೆ ಚಾಲನೆ ನೀಡಿದ್ದರು. ಹಿಂದೆ 8 ಸಾವಿರ ಕೋಟಿ ಸಹ ನೀಡಿದ್ದರು. ಇದೀಗ ಮತ್ತೆ 11,500 ಕೋಟಿ ಅನುಮೋದನೆ ನೀಡಿತ್ತು. ಕಾಮಗಾರಿಗಳು ವೇಗವಾಗಿ ನಡೆದಿದ್ದವು. ಆದರೆ ಯಡಿಯೂರಪ್ಪ ಬರುತ್ತಿದ್ದಂತೆ ತಡೆ ನೀಡಿದ್ದಾರೆ ಬಿಜೆಪಿ ಸರ್ಕಾರದ ವಿರುದ್ಧ ದಿನೇಶ್ ವಾಗ್ದಾಳಿ ನಡೆಸಿದರು.
ಸಾಕಷ್ಟು ಹಣ ಖರ್ಚು
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, 8500 ಕೋಟಿ ರೂ ಮೊತ್ತದ ಕೆಲಸಗಳು ಪ್ರಾರಂಭವಾಗಿವೆ. ರಸ್ತೆ, ಫ್ಲೈಓವರ್, ಚರಂಡಿ ಎಲ್ಲಾ ಕಾಮಗಾರಿ ಸೇರಿವೆ. 150 ಕೋಟಿ ಗಿಂತ ಹೆಚ್ಚು ಹಣ ಕ್ಷೇತ್ರಗಳಿಗೆ ಹೋಗಿದೆ. ಎಲ್ಲಾ 28 ಕ್ಷೇತ್ರಗಳಿಗೆ ಹಂಚಿಕೆಯಾಗಿದೆ. ಹೀಗಾಗಿ ನವ ಬೆಂಗಳೂರು ಯೋಜನೆಗೆ ತಡೆ ಬೇಡ. ಗುಣಮಟ್ಟ ಪರಿಶೀಲನೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕಾಮಗಾರಿಗಳನ್ನ ತಡೆಹಿಡಿಯುವುದು ಸರಿಯಲ್ಲ. ಬಿಜೆಪಿಯ ನಂತರ ನಾವು ಹೆಚ್ಚಿನ ಅನುದಾನ ನೀಡಿದ್ದೆವು. ನಮ್ಮ ಅಧಿಕಾರದ ಅವಧಿಯಲ್ಲಿ ನೀಡಿದ್ದೆವು. ನ್ಯೂನತೆ, ಕಳಪೆ ಕಾಮಗಾರಿ ಇದ್ದರೆ ಕ್ರಮ ತೆಗೆದುಕೊಳ್ಳಲಿ. ಅದು ಬಿಟ್ಟು ಕಾಮಗಾರಿಗೆ ತಡೆ ನೀಡುವುದು ಸರಿಯಲ್ಲ ಎಂದರು.
ಆಸ್ತಿ ಅಡವಿಟ್ಟು ಹೋಗಿದ್ದರು
ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಜೆಪಿಯವರು ಆಸ್ತಿ ಅಡವಿಟ್ಟು ಹೋಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಾವು ಬಿಡಿಸಿದ್ದೆವು. ಕೆರೆಗಳಿಗೆ ಹರಿಯುತ್ತಿದ್ದ ಕೊಚ್ಚೆಯನ್ನ ತಡೆಹಿಡಿದಿದ್ದೇವೆ. ಕೊಳಚೆ ನೀರನ್ನ ಶುದ್ಧೀಕರಿಸಿ ಬಿಡುತ್ತಿದ್ದೇವೆ. 110 ಹಳ್ಳಿಗೆ ಕುಡಿಯುವ ನೀರು ಒದಗಿಸಿದ್ದೇವೆ. ಮಳೆ ನೀರಿನಿಂದ ರಸ್ತೆ ಗುಂಡಿ ಬೀಳುತ್ತಿದ್ದವು. ಈಗ ವೈಟ್ ಟಾಪಿಂಗ್ ಮಾಡುತ್ತಿದ್ದೇವೆ. ಇದರಿಂದ 30 ವರ್ಷ ರಸ್ತೆ ಗುಣಮಟ್ಟದಿಂದ ಕೂಡಿರುತ್ತದೆ. ವಾರ್ಡ್ ಗಳಿಗೂ ನಾವು ಹಣ ಬಿಡುಗಡೆ ಮಾಡಿದ್ದೇವೆ. ಹೊರಭಾಗದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಉತ್ತಮ ಕೆಲಸಗಳು ಈಗ ನಡೆಯುತ್ತಿವೆ. ಇದನ್ನ ಸ್ಟಾಪ್ ಮಾಡಿದರೆ ಕಾಮಗಾರಿ ನಿಲ್ಲುತ್ತದೆ. ಬೆಂಗಳೂರಿನ ಅಂದವೂ ಕೆಡುತ್ತದೆ. ಆರೇಳು ತಿಂಗಳು ನಗರ ಅದ್ವಾನವಾಗುತ್ತದೆ. ಹೀಗಾಗಿ ಕಾಮಗಾರಿಗಳನ್ನ ತಡೆಹಿಡಿಯುವುದು ಸರಿಯಲ್ಲ. ಅನುದಾನವನ್ನ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಇಂದಿರಾ ಕ್ಯಾಂಟೀನ್ ಮುಚ್ಚುವುದು ಸರಿಯಲ್ಲ
ಇಂದಿರಾ ಕ್ಯಾಂಟೀನ್ ಮುಚ್ಚುವ ಚಿಂತನೆ ವಿಚಾರ ಮಾತನಾಡಿದ ದಿನೇಶ್ ಗುಂಡೂರಾವ್, ಅದು ಸರ್ಕಾರ ಚರ್ಚೆ ಮಾಡಿದೆಯೋ ಇಲ್ವೋ ಗೊತ್ತಿಲ್ಲ. ಕೆಲವು ಬಿಜೆಪಿಯವರು ಈ ರೀತಿ ಹೇಳಿರಬಹುದು. ಆದರೆ ಸಿಎಂ ಅಂತ ಕೆಲಸಕ್ಕೆ ಕೈಹಾಕಲ್ಲ. ಒಂದು ವೇಳೆ ಅಂತ ಕೆಲಸ ಮಾಡಿದರೆ ನಮ್ಮ ವಿರೋಧವಿದೆ. ನಾವು ತೀರ್ವವಾಗಿ ಸರ್ಕಾರವನ್ನ ಖಂಡಿಸುತ್ತೇವೆ ಎಂದರು.
ಕೇಂದ್ರದ ಕ್ರಮ ಖಂಡನೀಯ
ಜಮ್ಮು-ಕಾಶ್ಮೀರದಿಂದ 370 ಹಾಗೂ 35 ಎ ಸಂವಿಧಾನದ ವಿಧಿ ಹಿಂಪಡೆದ ಕೇಂದ್ರದ ಕ್ರಮ ಖಂಡಿಸಿ ಮಾತನಾಡಿದ ದಿನೇಶ್, 370 ತೆಗೆಯುವುದು ಒಂದು ಸೂಕ್ಷ್ಮ ವಿಚಾರ. ಇನ್ನೂ ಪ್ರಯತ್ನಗಳು ನಡೆದಿರಬಹುದು. ಒಂದು ವೇಳೆ ಅಂತ ಕೆಲಸಕ್ಕೆ ಕೈಹಾಕಿದರೆ ಅದು ದುಸ್ಸಾಹಸ. ಈಗಾಗಲೇ 30 ಸಾವಿರ ಸೈನಿಕರನ್ನ ನಿಯೋಜಿಸಿದ್ದಾರೆ. ಅಲ್ಲಿ ವಿಶೇಷ ಅಧಿಕಾರ ತೆಗೆದಿದ್ದಾರೆ, ಫೋನ್ ಸಂಪರ್ಕ ಕಡಿತ ಮಾಡಿದ್ದಾರೆ. ಅಲ್ಲಿ ಎಮರ್ಜೆನ್ಸಿ ರೀತಿ ಕ್ರಿಯೇಟ್ ಮಾಡಿದ್ದಾರೆ. ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂತ ದುಸ್ಸಾಹಸ ಮಾಡುವುದು ಕೇಂದ್ರಕ್ಕೆ ಒಳ್ಳೆಯದಲ್ಲ. ನಮ್ಮ ರಾಷ್ಟ್ರೀಯ ನಾಯಕರು ಇದರ ಬಗ್ಗೆ ಗಮನಹರಿಸ್ತಾರೆ ಎಂದರು.
ಮಾಜಿ ಸಚಿವ ಕೃಷ್ಣ ಭೈರೇಗೌಡ, ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಸೌಮ್ಯ ರೆಡ್ಡಿ, ಬೈರತಿ ಸುರೇಶ್ ರಿಜ್ವಾನ್ ಅರ್ಷದ್ ಮತ್ತಿತರು ಉಪಸ್ಥಿತರಿದ್ದರು.Conclusion:news
Last Updated : Aug 5, 2019, 3:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.