ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ 'ಗಗನಯಾನ' 2022ರಲ್ಲಿನಡೆಯಲಿದ್ದು, ವ್ಯೋಮಕ್ಕೆ ತೆರಳುವ ಭಾರತೀಯ ಗಗನಯಾತ್ರಿಗಳು ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ. ಇತ್ತ ಇಸ್ರೋ ವಿಜ್ಞಾನಿಗಳು ಗಗನಯಾತ್ರಿಗಳನ್ನು ಕಳುಹಿಸುವ ಮೊದಲು 'ವ್ಯೂಮಮಿತ್ರ' ಹೆಸರಿನ 'ಲೇಡಿ ರೊಬೋ' ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಾನವ ಸಹಿತ ಗಗನಯಾನ ಹಾಗೂ ಪರಿಶೋಧನೆಯ ಸವಾಲುಗಳು ಮತ್ತು ಭವಿಷ್ಯದ ಪ್ರವೃತ್ತಿ ಕುರಿತ ವಿಚಾರ ಸಂಕಿರಣದಲ್ಲಿ 'ವ್ಯೊಮಮಿತ್ರ' ಲೇಡಿ ರೊಬೋ ನೆರೆದವರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
''ವ್ಯೂಮಮಿತ್ರ ಎಂಬ ಎರಡು ಸಂಸ್ಕೃತ ಪದಗಳ ಸಂಯೋಜನೆಯ ನಾನು, 'ವ್ಯೂಮ' (ಸ್ಪೇಸ್) ಮತ್ತು 'ಮಿತ್ರಾ' (ಸ್ನೇಹಿತ)'' ಎಂದು ಹೇಳುವ ಮೂಲಕ ಲೇಡಿ ರೊಬೋ ಅಲ್ಲಿ ನೆರೆದವರನ್ನು ಆಶ್ಚರ್ಯ ಚಕಿತರಾಗುವಂತೆ ಮಾಡಿತು. ''ಎಲ್ಲರಿಗೂ ನಮಸ್ಕಾರ. ನಾನು ವ್ಯೂಮಮಿತ್ರ, ಮೂಲ ಮಾದರಿಯ ಅರ್ಧ ಹುಮನಾಯ್ಡ್, ಮೊದಲ ಮಾನವರಹಿತ ಗಗಯಾನಕ್ಕಾಗಿ ತಯಾರಿಸಲ್ಪಟ್ಟ ಯೋಜನೆಯ ಭಾಗ'' ಎಂದು ತನ್ನ ನಿರ್ಮಾಣದ ಉದ್ದೇಶವನ್ನು ಪರಿಚಯಿಸಿಕೊಂಡಿತು.
ಮಿಷನ್‌ನಲ್ಲಿನ ತನ್ನ ಪಾತ್ರದ ಬಗ್ಗೆ ವಿವರಿಸಿದ ರೊಬೋ. 'ನಾನು ಮಾಡ್ಯೂಲ್ ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡುತ್ತೇನೆ. ನಿಮ್ಮನ್ನು ಎಚ್ಚರಿಸಲು ಮತ್ತು ನಿರ್ವಹಿಸಲು ಜೀವ ಬೆಂಬಲವಾಗಿ ಕಾರ್ಯಾಚರಣೆಗಳನ್ನು ನಡೆಸುತ್ತೇನೆ. ನಾನು ಸ್ವಿಚ್ ನಂತಹ ಚಟುವಟಿಕೆಗಳನ್ನು ಮಾಡಬಲ್ಲೆ' ಎಂದು ಹೇಳಿಕೊಂಡಿತು.
ಗಗನಯಾತ್ರಿಗಳಿಗೆ ಸಹಚರನಾಗಿ ಕೆಲಸ ಮಾಡಬಲ್ಲೆ, ಗಗನಯಾತ್ರಿಗಳೊಂದಿಗೆ ಮಾತುಕತೆ ನಡೆಸಿ, ಅವರನ್ನು ಗುರುತಿಸಿಬಲ್ಲೆ ಮತ್ತು ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಬಲ್ಲೆ ಎಂದು ಹೇಳಿತು.
ಈ ಬಳಿಕ ಇಸ್ರೋ ಅಧ್ಯಕ್ಷ ಕೆ. ಶಿವನ್ ಅಧ್ಯಕ್ಷರೊಂದಿಗೆ ಮಾತನಾಡಿ, ಹುಮನಾಯ್ಡ್ ಲೇಡಿ ರೊಬೋ ಬಾಹ್ಯಾಕಾಶದಲ್ಲಿ ಮಾನವನ ಕಾರ್ಯಗಳನ್ನು ಅನುಕರಿಸಿ ಮತ್ತು ಅವರೊಂದಿಗೆ ಸಂವಹನ ನಡೆಸುತ್ತದೆ. ಅದು ಅಲ್ಲಿನ ಪರಿಸರ ನಿಯಂತ್ರಣಕ್ಕೂ ಹೊಂದಿಕೊಳ್ಳಲಿದೆ. ಬಾಹ್ಯಾಕಾಶದಲ್ಲೂ ನಿಖರವಾಗಿ ಮಾನವನ ಕಾರ್ಯಗಳನ್ನು ಅನುಕರಿಸುತ್ತದೆ. ಸಿಸ್ಟಮ್ ಸರಿಯಾಗಿದೆಯೇ ಎಂದು ಸಹ ಪರಿಶೀಲಿಸುತ್ತದೆ. ಮನುಷ್ಯನಂತೆ ಅನುಕರಿಸಲು ಇದೊಂದು ತುಂಬಾ ಉಪಯುಕ್ತವಾದ ಸಾಧನವಾಗಿದೆ ಎಂದು ಹೇಳಿದರು.