ETV Bharat / state

ಆಧುನಿಕ ಅನುಭವ ಮಂಟಪ, ಶರಣ ಸ್ಮಾರಕಗಳ ಅಭಿವೃದ್ಧಿ ಕುರಿತು ಸಲಹೆ ನೀಡಿದ್ದೇನೆ: ಖಂಡ್ರೆ - ಕೆಪಿಸಿಸಿ ಕಾರ್ಯಾಧ್ಯಕ್ಷ

ಸರ್ಕಾರ ನಿಯಮಾನುಸಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಈಗ ಆರಂಭಿಸಿದರೂ ಅದು ಮುಗಿಯಲು ಕನಿಷ್ಠ 8-10 ತಿಂಗಳಾದರೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೂತನ ಕಾಯಿದೆಯ ರೀತ್ಯ “ಕನ್ಸೆಂಟ್ ಅವಾರ್ಡ್’ನಂತೆ ಭೂಮಿ ಪಡೆಯಬೇಕಾಗುತ್ತದೆ. ಹೀಗಾಗಿ ಎಲ್ಲ ಭೂ ಮಾಲೀಕರನ್ನೂ ಕರೆದು ಸಭೆ ನಡೆಸಿ, ಅವರ ಮನವೊಲಿಸಿ ಮಾರುಕಟ್ಟೆ ಮೌಲ್ಯಕ್ಕೆ ಭೂಮಿಯನ್ನು ತ್ವರಿತವಾಗಿ ಖರೀದಿಸುವಂತೆ ಸಲಹೆ ನೀಡಿದ್ದಾಗಿ ಖಂಡ್ರೆ ತಿಳಿಸಿದ್ದಾರೆ.

ಸರ್ಕಾರಕ್ಕೆ ಈಶ್ವರ್ ಖಂಡ್ರೆ ಸಲಹೆ
ಸರ್ಕಾರಕ್ಕೆ ಈಶ್ವರ್ ಖಂಡ್ರೆ ಸಲಹೆ
author img

By

Published : Jul 12, 2021, 9:10 PM IST

ಬೆಂಗಳೂರು: ಬಸವಕಲ್ಯಾಣದ ಆಧುನಿಕ ಅನುಭವ ಮಂಟಪಕ್ಕೆ ಸಂಬಂಧಿಸಿದಂತೆ ಮತ್ತು ಸುತ್ತಮುತ್ತಲ ಶರಣ ಸ್ಮಾರಕಗಳ ಅಭಿವೃದ್ಧಿ ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ಬಸವಕಲ್ಯಾಣದ ಆಧುನಿಕ ಅನುಭವ ಮಂಟಪ ನಿರ್ಮಾಣ ಸಂಬಂಧ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಪಾಲ್ಗೊಂಡ ವೇಳೆ ಈ ವಿಚಾರ ತಿಳಿಸಿದ್ದೇನೆ. ನೂತನವಾದ ಆಧುನಿಕ ಅನುಭವ ಮಂಟಪ ತ್ವರಿತವಾಗಿ ನಿರ್ಮಾಣವಾಗಬೇಕಾದರೆ ಅದಕ್ಕೆ 100 ಎಕರೆ ಜಮೀನು ಬೇಕಾಗುತ್ತದೆ. ಆದರೆ ಸರ್ಕಾರದ ಬಳಿ ಇರುವುದು 20 ಎಕರೆ ಮತ್ತು ದಾನವಾಗಿ ಬಂದಿರುವುದು 11 ಎಕರೆ. ಇನ್ನೂ 69 ಎಕರೆ ಭೂ ಸ್ವಾಧೀನ ತುರ್ತಾಗಿ ಆಗಬೇಕಾಗಿರುತ್ತದೆ.

ಆದರೆ, ಸರ್ಕಾರ ನಿಯಮಾನುಸಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಈಗ ಆರಂಭಿಸಿದರೂ ಅದು ಮುಗಿಯಲು ಕನಿಷ್ಠ 8-10 ತಿಂಗಳಾದರೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೂತನ ಕಾಯಿದೆಯ ರೀತಿ “ಕನ್ಸೆಂಟ್ ಅವಾರ್ಡ್’ನಂತೆ ಭೂಮಿ ಪಡೆಯಬೇಕಾಗುತ್ತದೆ. ಹೀಗಾಗಿ ಎಲ್ಲ ಭೂ ಮಾಲೀಕರನ್ನೂ ಕರೆದು ಸಭೆ ನಡೆಸಿ, ಅವರ ಮನವೊಲಿಸಿ ಮಾರುಕಟ್ಟೆ ಮೌಲ್ಯಕ್ಕೆ ಭೂಮಿಯನ್ನು ತ್ವರಿತವಾಗಿ ಖರೀದಿಸುವಂತೆ ಸಲಹೆ ನೀಡಿದ್ದೇನೆ ಎಂದಿದ್ದಾರೆ.

ಆಧುನಿಕ ಅನುಭವ ಮಂಟಪ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಕರೆದಿರುವ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ವಾಸ್ತವವಾಗಿ ಭೂಸ್ವಾಧೀನ ಆಗದೆ ಡಿಪಿಆರ್ ಅಂದರೆ ವಿಸ್ತೃತ ಯೋಜನಾ ವರದಿ ಅನುಮೋದನೆ ಅಪೂರ್ಣವಾಗುತ್ತದೆ. ಹೀಗಾಗಿ ಯಾವುದೇ ಅಡೆತಡೆ, ವಿಳಂಬ ಇಲ್ಲದೆ ಆಧುನಿಕ ಅನುಭವ ಮಂಟಪ ಸಾಕಾರವಾಗಲು ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ತಕ್ಷಣವೇ ಡಿಪಿಆರ್ ಅನುಮೋದನೆಗೆ ತಜ್ಞರ/ಪರಿಣತರ ಸಮಿತಿಯನ್ನು ರಚಿಸಲು ಸಲಹೆ ನೀಡಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಲವು ಪವಿತ್ರ ತಾಣ : ಬಸವಕಲ್ಯಾಣವಷ್ಟೇ ಅಲ್ಲದೆ ಬೀದರ್ ಜಿಲ್ಲೆಯ ಹಲವು ಕಡೆಗಳಲ್ಲಿ ಅಣ್ಣ ಬಸವಣ್ಣನವರು ಮತ್ತು ಹಲವು ಶಿವಶರಣರ ಪವಿತ್ರ ತಾಣಗಳಿದ್ದು, ಇವುಗಳ ಅಭಿವೃದ್ಧಿಯೂ ಆಗಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರನ್ನೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ನಾಮಾಂಕನ ಮಾಡಿ ಎಲ್ಲ ಸಭೆಗೂ ಆಹ್ವಾನಿಸುವಂತೆ ಮನವಿ ಮಾಡಿರುತ್ತೇನೆ.

ಬಸವಕಲ್ಯಾಣ ಜಗತ್ತಿಗೇ ಸಂಸತ್ತಿನ ಪರಿಕಲ್ಪನೆ ಕಟ್ಟಿಕೊಟ್ಟ ಪವಿತ್ರ ತಾಣವಾಗಿದ್ದು, ಬಸವಕಲ್ಯಾಣವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಪ್ರವಾಸಿತಾಣದಂತೆ ಅಭಿವೃದ್ಧಿಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿ, ಜಿಲ್ಲೆಯ ಪವಿತ್ರ ಶರಣ ತಾಣಗಳ ಅಭಿವೃದ್ಧಿಗೂ ಸಲಹೆ ಮಾಡಿರುತ್ತೇನೆ.

ಇದನ್ನೂ ಓದಿ : 7ನೇ ಕ್ಲಾಸ್‌ ಫೇಲ್‌ ಆದ್ರೂ ಸ್ಪಾನಿಷ್‌, ಇಂಗ್ಲಿಷ್‌, ಕನ್ನಡ ಸರಾಗ; ಮೈಸೂರು ಅರಸರ ಸಂಬಂಧಿಯೂ ಅಂತೆ! ಕೊನೆಗೂ ಸಿಕ್ಕ ಮ್ಯಾಟ್ರಿಮೋನಿ ವಂಚಕ!

ನನ್ನ ಎಲ್ಲ ಸಲಹೆಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರ ಜೊತೆಗೆ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರಣ ಹಿರೇಮಠ ಮತ್ತು ಶಿವಕುಮಾರ್ ಇವರಿಬ್ಬರೂ ಕೋವಿಡ್​​ನಿಂದ ಮೃತಪಟ್ಟಿದ್ದು, ಇವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನಾನು ಮನವಿ ಮಾಡಿದ್ದು, ಮುಖ್ಯಮಂತ್ರಿ ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ನೀಡಲು ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.