ETV Bharat / state

ಕೋವಿಡ್ ಸಮಸ್ಯೆ ನಿಯಂತ್ರಣ: ಸರ್ಕಾರಕ್ಕೆ ಸಲಹೆ ನೀಡಿದ ಈಶ್ವರ್ ಖಂಡ್ರೆ - covid 19

ರಾಜ್ಯದಲ್ಲಿ ಕೋವಿಡ್ ಸಮಸ್ಯೆ ನಿಯಂತ್ರಣಕ್ಕೆ ಬರುವವರೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ವಿಲೀನಗೊಳಿಸಿ ಒಂದೇ ಇಲಾಖೆ ನೇತೃತ್ವದ ಅಡಿ ಆಡಳಿತ ನೀಡುವುದು ಉತ್ತಮ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದಾರೆ.

ishwar-khandre
ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ
author img

By

Published : Jul 7, 2020, 1:41 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಮಸ್ಯೆ ನಿಯಂತ್ರಣಕ್ಕೆ ಬರುವವರೆಗೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವಿಲೀನಗೊಳಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಈ ಮೇಲಿನ ಸಲಹೆ ಟ್ವೀಟ್ ಮೂಲಕ ಖಂಡ್ರೆ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕೋವಿಡ್ ನಿಯಂತ್ರಣದಲ್ಲಿ ದಿನಕ್ಕೊಂದು ಆದೇಶ, ಘಳಿಗೆಗೆ ಒಂದು ಸುತ್ತೋಲೆ, ಕ್ಷಣಕ್ಕೊಂದು ನಿರ್ಧಾರ ತೆಗೆದುಕೊಂಡು ನಿರ್ವಹಣೆಯಲ್ಲಿ ವಿಫಲವಾಗಿದೆ. ಇಲಾಖೆಗಳ ಸಮನ್ವಯದ ಕೊರತೆಯಿಂದ ಜನ ರಸ್ತೆಯಲ್ಲೇ ಪರದಾಡುವಂತಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಿವರಿಸಿದ್ದಾರೆ.

  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕೋವಿಡ್ ನಿಯಂತ್ರಣದಲ್ಲಿ ದಿನಕ್ಕೊಂದು ಆದೇಶ, ಘಳಿಗೆಗೆ ಒಂದು ಸತ್ತೋಲೆ, ಕ್ಷಣಕ್ಕೊಂದು ನಿರ್ಧಾರ ತೆಗೆದುಕೊಂಡು ನಿರ್ವಹಣೆಯಲ್ಲಿ ವಿಫಲವಾಗಿದೆ. ಇಲಾಖೆಗಳ ಸಮನ್ವಯದ ಕೊರತೆಯಿಂದ ಜನ ರಸ್ತೆಯಲ್ಲೇ ಪರದಾಡುವಂತಾಗಿದೆ.@CMofKarnataka

    — Eshwar Khandre (@eshwar_khandre) July 7, 2020 " class="align-text-top noRightClick twitterSection" data=" ">

ಕನಿಷ್ಠ ಕೋವಿಡ್ ಸಮಸ್ಯೆ ಮುಗಿಯುವವರೆಗೆ ಎರಡೂ ಇಲಾಖೆಯನ್ನ ವಿಲೀನಗೊಳಿಸಿ ಒಂದೇ ನೇತೃತ್ವದ ಅಡಿ ಆಡಳಿತ ನೀಡುವಂತೆ ಕಾಂಗ್ರೆಸ್ ಪಕ್ಷದಿಂದ ಒತ್ತಾಯಿಸುತ್ತೇನೆ ಎಂದಿರುವ ಅವರು ಈ ಟ್ವೀಟ್ ಅನ್ನು ಆರೋಗ್ಯ ಸಚಿವ ಬಿ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರಿಗೂ ಟ್ಯಾಗ್ ಮಾಡಿದ್ದಾರೆ.

  • ಕನಿಷ್ಠ ಕೋವಿಡ್ ಸಮಸ್ಯೆ ಮುಗಿಯುವ ವರೆಗೆ ಎರಡೂ ಇಲಾಖೆಯನ್ನ ವಿಲೀನಗೊಳಿಸಿ ಒಂದೇ ನೇತೃತ್ವದ ಅಡಿಯಲ್ಲಿ ಆಡಳಿತ ನೀಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಒತ್ತಾಯಿಸುತ್ತೇನೆ.@mla_sudhakar @sriramulubjp
    # FIGHTAGAINSTCOVID

ಜವಾಬ್ದಾರಿಯುತ ಪ್ರತಿಪಕ್ಷವಾಗಿ ತಾವು ನಿರಂತರವಾಗಿ ಸಲಹೆ ನೀಡುತ್ತಲೇ ಬಂದಿದ್ದು, ಅದನ್ನು ಸರ್ಕಾರ ಸಕಾರಾತ್ಮಕವಾಗಿ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್, ಇದೀಗ ಇನ್ನೊಂದು ಸಲಹೆ ನೀಡಿದ್ದು ಇದಕ್ಕೆ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.