ETV Bharat / state

3ನೇ ಅಲೆ ಆತಂಕದ ಹಿನ್ನೆಲೆ.. ಶಾಸಕ ಟಿ. ವೆಂಕಟರಮಣಯ್ಯರ ಅನ್ನದಾಸೋಹಕ್ಕೆ ಅಪಸ್ವರ..

ಕೊರೊನಾ ಮೂರನೇ ಅಲೆ ಸಂಭವಿಸುವ ಸಾಧ್ಯತೆ ಇದೆ. ಅನ್ನ ದಾಸೋಹದಲ್ಲಿ ಮಕ್ಕಳು ಸಹ ಸಾಲಿನಲ್ಲಿ ನಿಂತು ಆಹಾರದ ಪೊಟ್ಟಣ ತೆಗೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಮಕ್ಕಳಿಗೆ ಕೊರೊನಾ ಬಂದರೆ ಯಾರು ಗತಿ, ಇಂತಹ ಸಂದಿಗ್ಧ ಸಮಯದಲ್ಲಿ ಶಾಸಕರಿಗೆ ಪ್ರಚಾರದ ಗೀಳು ಬೇಕಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ..

is venkataramanayya getting publicity by helping people
ಅನ್ನದಾಸೋಹ ಕಾರ್ಯಕ್ರಮ
author img

By

Published : Jun 27, 2021, 7:18 PM IST

ದೊಡ್ಡಬಳ್ಳಾಪುರ : ಲಾಕ್​ಡೌನ್ ಸಮಯದಲ್ಲಿ ಹಸಿದವರ ಹೊಟ್ಟೆ ತುಂಬಿಸಲು ಶಾಸಕ ಟಿ. ವೆಂಕಟರಮಣಯ್ಯ ನಗರದಲ್ಲಿ ಅನ್ನದಾಸೋಹ ಮಾಡುತ್ತಿದ್ದಾರೆ. ಆದರೆ, ಇದರ ಪ್ರಚಾರ ಪಡೆಯಲು ಶಾಸಕರು ರಾಜ್ಯಮಟ್ಟದ ನಾಯಕರನ್ನು ಕರೆಸುತ್ತಿದ್ದಾರೆನ್ನುವ ಆರೋಪವಿದೆ. ಕೊರೊನಾ 3ನೇ ಅಲೆಯ ಭೀತಿಗೆ ಕಾರಣಕರ್ತರಾಗುತ್ತಿದ್ದಾರೆನ್ನುವ ಅಸಮಾಧಾನ ಸೃಷ್ಟಿಯಾಗಿದೆ.

ಟಿ. ವೆಂಕಟರಮಣಯ್ಯರ ಅನ್ನದಾಸೋಹ - ವಕೀಲರ ಪ್ರತಿಕ್ರಿಯೆ

ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಕೊರೊನಾ ಸಮಯದಲ್ಲಿ ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಸಾವಿರಾರು ಬಡವರು ಕಷ್ಟಕ್ಕೆ ಸಿಲುಕಿದರು. ಅವರ ಹಸಿವು ನೀಗಿಸಲು ಉದ್ಯಮಿಗಳ ನೆರವಿನಿಂದ ಅನ್ನದಾಸೋಹ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ನಗರದ 40 ಕೇಂದ್ರಗಳಲ್ಲಿ ಅನ್ನದಾಸೋಹ ಮಾಡುತ್ತಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಶಾಸಕರು ಇದರ ಪ್ರಚಾರ ಪಡೆಯಲು ಮುಂದಾಗಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಅನ್ನದಾಸೋಹ ಕಾರ್ಯಕ್ರಮಕ್ಕೆ ಶಾಸಕ ಟಿ ವೆಂಕಟರಮಣಯ್ಯ ರಾಜ್ಯ ಮಟ್ಟದ ನಾಯಕರನ್ನು ಆಹ್ವಾನಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ರಾಮಲಿಂಗರೆಡ್ಡಿ, ಮಾಜಿ ಸಚಿವ ಕೃಷ್ಣಬೈರೇಗೌಡ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಮಾಜಿ ಸಚಿವ ಜಮೀರ್ ಅಹಮದ್ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯ ಮಟ್ಟದ ನಾಯಕರು ಭೇಟಿ ನೀಡುವ ಸಮಯದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದರು. ನಾಯಕರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಜನರು ಮುಗಿ ಬೀಳುತ್ತಿದ್ದರು. ಸಾಮಾಜಿಕ ಅಂತರ ಇಲ್ಲದೇ, ಮಾಸ್ಕ್ ಧರಿಸದೇ ನೂರಾರು ಜನರು ಒಂದೆಡೆ ಸೇರುತ್ತಿದ್ದರಿಂದ ಕೊರೊನಾ ಹರಡುವ ಭಯ ಜನರನ್ನು ಕಾಡುತ್ತಿದೆ.

ಇದನ್ನೂ ಓದಿ: ಊಟ ಹಾಕಿದ ತಾಯಿಯನ್ನೇ ಕಾಮಿಸಿದವರು : ಚೆಲುವರಾಯಸ್ವಾಮಿ ವಿರುದ್ಧ ಶಾಸಕ ಸುರೇಶ್ ಗೌಡ ವ್ಯಂಗ್ಯ

ಕೊರೊನಾ ಮೂರನೇ ಅಲೆ ಸಂಭವಿಸುವ ಸಾಧ್ಯತೆ ಇದೆ. ಅನ್ನ ದಾಸೋಹದಲ್ಲಿ ಮಕ್ಕಳು ಸಹ ಸಾಲಿನಲ್ಲಿ ನಿಂತು ಆಹಾರದ ಪೊಟ್ಟಣ ತೆಗೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಮಕ್ಕಳಿಗೆ ಕೊರೊನಾ ಬಂದರೆ ಯಾರು ಗತಿ, ಇಂತಹ ಸಂದಿಗ್ಧ ಸಮಯದಲ್ಲಿ ಶಾಸಕರಿಗೆ ಪ್ರಚಾರದ ಗೀಳು ಬೇಕಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.