ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕೆ ಇಂದು ತೆರೆಬಿದ್ದಿದೆ. ಮೇಳದಲ್ಲಿ ಒಟ್ಟು ಮೂರು ದಿನ ಬಿ2ಬಿ ಅಡಿ 139 ಸಭೆ ನಡೆದಿದ್ದು, ಒಟ್ಟು 68 ಮಾರುಕಟ್ಟೆದಾರರು ಹಾಗೂ 59 ಉತ್ಪಾದಕರು ಭಾಗವಹಿಸಿದ್ದರು. 201.91 ಕೋಟಿ ವೆಚ್ಚದಲ್ಲಿ ಒಟ್ಟು 43 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.
201 ಕೋಟಿ ರೂ, 43 ಒಡಂಬಡಿಕೆ : ಬಿ2ಬಿ ಸಭೆಯ ಭಾಗವಾಗಿ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಿಗೆ 100 ಕ್ಕೂ ಅಧಿಕ ಮಾರುಕಟ್ಟೆದಾರರು ನೋಂದಾಯಿಸಿದ್ದರು. ಮೇಳದ ಮೊದಲನೇ ದಿನ 27 ಬಿ2ಬಿ ಸಭೆಗಳನ್ನು ಆಯೋಜಿಸಲಾಗಿತ್ತು. ಇಲ್ಲಿ ಒಟ್ಟು 35.39 ಕೋಟಿಗಳಷ್ಟು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೇಳದ ಎರಡನೇ ದಿನ 86 ಸಭೆಗಳು ಜರುಗಿದ್ದು, ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಸಂಬಂಧಿಸಿದ 140.60 ಕೋಟಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೂರನೇ ದಿನ 22 ಸಭೆಗಳು ನಡೆದಿದ್ದು, ಒಟ್ಟು 25.89 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಒಟ್ಟು ಮೂರು ದಿನ ಬಿ2ಬಿ ಅಡಿ 139 ಸಭೆ ನಡೆದಿದ್ದು, 68 ಮಾರುಕಟ್ಟೆದಾರರು 59 ಉತ್ಪಾದಕರು ಭಾಗವಹಿಸಿದ್ದರು. ಒಟ್ಟು 201.91 ಕೋಟಿ ವೆಚ್ಚದಲ್ಲಿ 43 ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಟಾಪ್ 5 ಒಡಂಬಡಿಕೆ ವಿವರ : ದಾವಣಗೆರೆ ಒಕ್ಕೂಟ ಮತ್ತು ಸ್ವಯಂಬು ಇಂಪೆಕ್ಸ್ ನಡುವೆ 15 ಕೋಟಿ, ಧರ್ಮಸ್ಥಳ ಟ್ರಸ್ಟ್ ಮತ್ತು ಸಹಜ ಸಮೃದ್ಧ ಸಾವಯವ ಉತ್ಪನ್ನ ಸಂಸ್ಥೆ ನಡುವೆ 15 ಕೋಟಿ, ಹಾಸನದ ಅವನಿ ಆರ್ಗ್ಯಾನಿಕ್ ಮತ್ತು ಹೈದರಾಬಾದ್ ನ ಲಿಂಕ್ ಆರ್ಗ್ಯಾನಿಕ್ ನಡುವೆ 10 ಕೋಟಿ, ಬೆಂಗಳೂರಿನ ಸನ್ ಅಗ್ರಿ ಡೆವೆಲಪ್ಮೆಂಟ್ ಮತ್ತು ಇಟಲಿಯ ವಿಎಂಪೈರ್ ಓವರ್‌ಸೀಸ್ ನಡುವೆ 7 ಕೋಟಿ, ವಿಜಯಪುರ ಒಕ್ಕೂಟ ಮತ್ತು ಬೆಂಗಳೂರಿನ ಅಮನಿ ಗ್ರೂಪ್ ನಡುವೆ 5 ಕೋಟಿ ಒಡಂಬಡಿಕೆ ನಡೆದಿದೆ.
ಗರಿಷ್ಟ ಮಾರುಕಟ್ಟೆ ದೊರಕಿದ ಉತ್ಪನ್ನಗಳ ವಿವರ : ಸಿರಿಧಾನ್ಯಗಳು ಮತ್ತು ಸಿರಿಧಾನ್ಯ ವರ್ಧಿತ ಉತ್ಪನ್ನಗಳು, ಸಾಂಬಾರ ಪದಾರ್ಥಗಳು, ಬೇಳೆ ಕಾಳುಗಳು, ಬೆಲ್ಲ ಮತ್ತು ಬೆಲ್ಲದ ಉತ್ಪನ್ನಗಳು, ಎಣ್ಣೆ ಮತ್ತು ಎಣ್ಣೆ ಕಾಳುಗಳು.
ಗರಿಷ್ಠ ವ್ಯಾಪಾರ ವಹಿವಾಟು ಗಳಿಸಿದ ಜಿಲ್ಲೆಗಳ ವಿವರ: ದಾವಣಗೆರೆ, ಬಾಗಲಕೋಟೆ, ಕೋಲಾರ, ತುಮಕೂರು, ವಿಜಯಪುರ.
ಗರಿಷ್ಠ ವ್ಯಾಪಾರ ವಹಿವಾಟು ಗಳಿಸಿದ ರೈತ ಸಂಸ್ಥೆಗಳ ವಿವರ : ದಾವಣಗೆರೆ ಮತ್ತು ಚಿತ್ರದುರ್ಗ ಒಕ್ಕೂಟ, ಎಸ್ ಕೆ ಡಿ ಆರ್ ಡಿ ಪಿ ಸಂಸ್ಥೆ ಧರ್ಮಸ್ಥಳ ಟ್ರಸ್ಟ್, ಅವನಿ ಆರ್ಗ್ಯಾನಿಕ್ ಹಾಸನ, ವಿಜಯಪುರ ಒಕ್ಕೂಟ, ಮಹಾಲಕ್ಷ್ಮಿ ಸದ್ಗುರು ಸದಾನಂದ.
ಗರಿಷ್ಠ ವಹಿವಾಟು ನಡೆಸಿದ ಮಾರುಕಟ್ಟೆದಾರರ ವಿವರ : ಪುಣೆಯ ಸ್ವಯಂಭು ಇಂಪೆಕ್ಸ್, ಬೆಂಗಳೂರಿನ ಸಹಜ ಸಮೃದ್ಧ ಆರ್ಗ್ಯಾನಿಕ್ ಪ್ರೊಡ್ಯೂಸರ್ ಕಂಪನಿ, ಬೆಂಗಳೂರಿನ ಇಂಗ್ರಿಡಿಯಂಟ್ ಬಜಾರ್.ಕಾಂ, ಹೈದರಾಬಾದಿನ ಲಿಂಕ್ ಆರ್ಗ್ಯಾನಿಕ್, ಇಟಲಿಯ ವಿ ಎಂಪೈರ್ ಓವರ್ಸೀಸ್.
ಇದನ್ನೂ ಓದಿ : ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ತೆರೆ: ₹170 ಕೋಟಿಯಷ್ಟು ಒಡಂಬಡಿಕೆ