ETV Bharat / state

ಕೆಂಪೇಗೌಡ ಟು ಹೆಚ್​​​​ಎಎಲ್ ನಡುವೆ ಹೆಲಿಕ್ಯಾಪ್ಟರ್ ಸೇವೆ: ಟ್ರಾಫಿಕ್  ಕಿರಿಕಿರಿ ಇಲ್ಲದೇ 12 ನಿಮಿಷಗಳ ಪ್ರಯಾಣ

author img

By

Published : Oct 6, 2022, 9:14 PM IST

ಸೋಮ ದಿಂದ ಶುಕ್ರವಾರದ ವರೆಗೂ ದಿನಕ್ಕೆರಡು ಹೆಲಿಕ್ಯಾಪ್ಟರ್  ಸೇವೆ ಲಭ್ಯವಿದ್ದು,  ಮೊದಲ  ಹೆಲಿಕ್ಯಾಪ್ಟರ್  ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ  8:30ಕ್ಕೆ ಹೊರಟು ಬೆಳಗ್ಗೆ  9:00 ಕ್ಕೆ  ಹೆಚ್ ಎಎಲ್ ತಲುಪಲಿದೆ. ಎರಡನೇ ಹೆಲಿಕ್ಯಾಪ್ಟರ್  ಮಧ್ಯಾಹ್ನ  4:15 ಕ್ಕೆ ಹೊರಟು ಮಧ್ಯಾಹ್ನ  4:45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ಕೆಂಪೇಗೌಡ ಟು ಹೆಚ್ ಎಎಲ್ ನಡುವೆ ಹೆಲಿಕ್ಯಾಪ್ಟರ್ ಸೇವೆ: ಟ್ರಾಫಿಕ್  ಕಿರಿಕಿರಿ ಇಲ್ಲದೇ 12 ನಿಮಿಷಗಳ ಪ್ರಯಾಣ
international airport to hal service

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಚ್​​​ಎಎಲ್ ನಡುವೆ ಅಕ್ಟೋಬರ್ 10 ರಿಂದ ಚಾಪರ್ ಸೇವೆ ಪ್ರಾರಂಭವಾಗಲಿದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಇಲ್ಲದೇ ಕೇವಲ 12 ನಿಮಿಷಗಳ ಪ್ರಯಾಣ ಅಷ್ಟೇ.

ಬ್ಲೇಡ್ ಇಂಡಿಯಾ ಕಂಪನಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಚ್ ಎಎಲ್ ಏರ್ ಪೋರ್ಟ್ ನಡುವೆ ಹೆಲಿಕ್ಯಾಪ್ಟರ್ ಸೇವೆಯನ್ನು ಆಕ್ಟೋಬರ್ 10 ರಿಂದ ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದ ವರೆಗೂ ದಿನಕ್ಕೆ ಎರಡು ಹೆಲಿಕ್ಯಾಪ್ಟರ್ ಸೇವೆ ಲಭ್ಯವಿದ್ದು, ಮೊದಲ ಹೆಲಿಕ್ಯಾಪ್ಟರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:30ಕ್ಕೆ ಹೊರಟು ಬೆಳಗ್ಗೆ 9:00 ಕ್ಕೆ ಹೆಚ್ ಎಎಲ್ ತಲುಪಲಿದೆ. ಎರಡನೇ ಹೆಲಿಕ್ಯಾಪ್ಟರ್ ಮಧ್ಯಾಹ್ನ 4:15 ಕ್ಕೆ ಹೊರಟು ಮಧ್ಯಾಹ್ನ 4:45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ಕೆಂಪೇಗೌಡ ಟು ಹೆಚ್ ಎಎಲ್ ನಡುವೆ ಹೆಲಿಕ್ಯಾಪ್ಟರ್ ಸೇವೆ: ಟ್ರಾಫಿಕ್  ಕಿರಿಕಿರಿ ಇಲ್ಲದೇ 12 ನಿಮಿಷಗಳ ಪ್ರಯಾಣ
ಕೆಂಪೇಗೌಡ ಟು ಹೆಚ್ ಎಎಲ್ ನಡುವೆ ಹೆಲಿಕ್ಯಾಪ್ಟರ್ ಸೇವೆ: ಟ್ರಾಫಿಕ್ ಕಿರಿಕಿರಿ ಇಲ್ಲದೇ 12 ನಿಮಿಷಗಳ ಪ್ರಯಾಣ
ಕ್ಯಾಬ್ ನಲ್ಲಿ ಹೆಚ್ ಎಎಲ್ ನಿಂದ ಕೆಐಎಎಲ್ ತಲುಪಲು 1300 ರೂಪಾಯಿ ದರ ಇದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯೊಂದಿಗೆ ಎರಡು ಗಂಟೆಗಳ ಪ್ರಯಾಣ ಮಾಡಬೇಕು.
ಆದರೆ, ಹೆಲಿಕ್ಯಾಪ್ಟರ್ ನಲ್ಲಿ 12 ನಿಮಿಷಗಳ ಪ್ರಯಾಣ ಅಷ್ಟೇ, ವಿಮಾನಗಳ ಟಿಕೆಟ್ ಬುಕ್ ಮಾಡುವಂತೆ ಹೆಲಿಕ್ಯಾಪ್ಟರ್ ಪ್ರಯಾಣವನ್ನು ಬುಕ್ ಮಾಡಬಹುದು. ಒಂದು ಬದಿಯ ಹೆಲಿಕ್ಯಾಪ್ಟರ್ ಪ್ರಯಾಣಕ್ಕೆ ತೆರಿಗೆ ಹೊರತುಪಡಿಸಿ 3,250 ರೂಪಾಯಿ ದರ ಇದೆ. ಪ್ರಾಯೋಗಿಕವಾಗಿ ಹೆಚ್ ಎಎಲ್ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹೆಲಿಕ್ಯಾಪ್ಟರ್ ಸೇವೆ ಪ್ರಾರಂಭವಾಗಲಿದೆ.
ಇದರಿಂದ ಬೆಂಗಳೂರಿನ ಬ್ಯುಸಿನೆಸ್ ಕೇಂದ್ರಗಳಾದ ಕೊರಮಂಗಲ, ಇಂದಿರಾನಗರ ಮತ್ತು ಐಟಿ ಪಾರ್ಕ್ ಬ್ಯೂಸಿನೆಸ್ ಮ್ಯಾನ್ ಗಳಿಗೆ ವರವಾಗಲಿದೆ. ಈ ಬಗ್ಗೆ ಬ್ಲೆಡ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಮಿತ್ ದತ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನು ಓದಿ:ಪ್ರಾಣಿ ಪ್ರಿಯರಿಗೆ ಗುಡ್​ ನ್ಯೂಸ್​: ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದ ಆಕಾಶ್​ ಏರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.