ETV Bharat / state

ನೋಟಾ ಆಟ: 2018 ಚುನಾವಣೆಯಲ್ಲಿನ ನೋಟಾ ಮೇಲೊಂದು ನೋಟ; ಸೋಲು ಗೆಲುವಿನಲ್ಲಿ ನೋಟಾ ಆಟ!

2018ರ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಮತದಾರರು ನೋಟಾ ಚಲಾವಣೆ ಮಾಡಿದ್ದರು ಮತ್ತು ಅದು ಅಭ್ಯರ್ಥಿಗಳ ಗೆಲುವಿನ ಮೇಲೆ ಯಾವೆಲ್ಲ ಪ್ರಭಾವ ಬೀರಿತ್ತು ಎಂಬುವುದರ ಕುರಿತಾದ ಮಾಹಿತಿ ಇಲ್ಲಿದೆ.

ನೋಟಾ ಮತದಾನ
ನೋಟಾ ಮತದಾನ
author img

By

Published : Apr 26, 2023, 7:27 AM IST

ಬೆಂಗಳೂರು: ನೋಟಾ (ಮೇಲ್ಕಂಡ ಯಾರೂ ಅಲ್ಲ). ಇದು ಚುನಾವಣೆಯಲ್ಲಿ ಮತದಾರರಿಗೆ ನೀಡಲಾಗಿರುವ ಯಾರಿಗೂ ಮತದಾನ ಮಾಡದೇ ಇರುವ ಅವಕಾಶ. ಕಣದಲ್ಲಿರುವ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಮತದಾರರಿಗೆ ಇರುವ ಸಾಧನ ಇದಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದ ಮತದಾರರು ನೋಟಾದತ್ತ ಹೆಚ್ಚಿನ ಪ್ರಾಶಸ್ತ್ಯ ನೀಡಿಲ್ಲವಾದರೂ, ಚಲಾಯಿಸಲಾದ ನೋಟಾ ಕೆಲ ಸ್ವಾರಸ್ಯಕರ ಲೆಕ್ಕಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.

ನೋಟಾ ಅಂದರೆ None Of The Above.‌ ಮತಯಂತ್ರದಲ್ಲಿ ಈ ನೋಟಾ ಆಯ್ಕೆಯನ್ನು ನೀಡಲಾಗಿದೆ. ಚುನಾವಣಾ ಅಖಾಡಲ್ಲಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಒಲವು ಇಲ್ಲದವರು ನೋಟಾ ಆಯ್ಕೆ ಮಾಡಿಕೊಳ್ಳಬಹುದು. ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಹೆಸರಿನ ಬಳಿಕ ಕೊನೆ ಸಾಲಿನಲ್ಲಿ ನೋಟಾ ಆಯ್ಕೆ ಇರುತ್ತದೆ. ಕಣದಲ್ಲಿರುವ ಯಾವ ಅಭ್ಯರ್ಥಿಯ ಬಗ್ಗೆ ಒಲವು ಇರದ ಮತದಾರರು ನೋಟಾ ಗುಂಡಿ ಒತ್ತಬಹುದು. ಇವಿಎಂನಲ್ಲಿ ಇರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರರಿಗೆ ನೀಡುವ ಅವಕಾಶವೇ ನೋಟಾ.

ರಾಜ್ಯದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ನೋಟಾ ಚಲಾವಣೆಯಾಗಿತ್ತು. ಈ ಬಾರಿಯೂ ನೋಟಾ ಚಲಾವಣೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳು ಕಣಕ್ಕಿಳಿಸಿರುವ ಅಭ್ಯರ್ಥಿಗಳನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ. 2018ರ ನೋಟಾ ಬಗೆಗಿನ ಕೆಲ ಸ್ವಾರಸ್ಯಕರ ಅಂಕಿಅಂಶ ಇಲ್ಲಿದೆ.

2018 ಚುನಾವಣೆಯಲ್ಲಿನ ನೋಟಾ ಮೇಲೊಂದು ನೋಟ: 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನೋಟಾ ಪರಿಚಯವಾಗಿತ್ತು. ಆ ಚುನಾವಣೆಯಲ್ಲಿ ಮತದಾರರು ಗಣನೀಯ ಪ್ರಮಾಣದಲ್ಲಿ ಅಲ್ಲವಾದರೂ ಗಮನ ಸೆಳೆಯುವ ನಿಟ್ಟಿನಲ್ಲಿ ನೋಟಾ ಚಲಾಯಿಸಿದ್ದರು. ಅದರಲ್ಲೂ ನಗರ ಪ್ರದೇಶಗಳಲ್ಲಿನ ಕ್ಷೇತ್ರಗಳಲ್ಲಿ ಹೆಚ್ಚಿನ ನೋಟಾ ಚಲಾಯಿಸಲಾಗಿತ್ತು. ಕಳೆದ ಬಾರಿಯ ರಾಜ್ಯ ಚುನಾವಣೆಯಲ್ಲಿ ಸುಮಾರು 3,22,381 ಮತದಾರರು ನೋಟಾ ಆಯ್ಕೆ ಮಾಡಿದ್ದರು. ಅಂದರೆ ಒಟ್ಟು ಮತದಾನದ 0.9% ನೋಟಾ ಚಲಾವಣೆ ಆಗಿತ್ತು.

ಇನ್ನು 2014ರ ಲೋಕಸಭೆ ಚುನಾವಣೆಯಲ್ಲೂ ನೋಟಾ ಚಲಾವಣೆಯಾಗಿತ್ತು. ಸುಮಾರು 2.57 ಲಕ್ಷ ಮತದಾರರು ನೋಟಾ ಚಲಾಯಿಸಿ ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದರು. ರಾಜ್ಯದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ‌ ಪ್ರಮಾಣದಲ್ಲಿ ನೋಟಾ ಚಲಾವಣೆ ಆಗಿಲ್ಲ.‌ ಆದರೆ ನೋಟಾವನ್ನು ಮತದಾರರು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ.

ಬಹುತೇಕ ಕಡೆ ನಾಲ್ಕನೇ ಸ್ಥಾನ ಗಳಿಸಿದ ನೋಟಾ: 2018ರ ರಾಜ್ಯ ಚುನಾವಣೆಯಲ್ಲಿ ನೋಟಾ ಫಲಿತಾಂಶದ ಮೇಲೆ ಪರಿಣಾಮ ಬೀರಿಲ್ಲವಾದರೂ, ಜಿದ್ದಾಜಿದ್ದಿನ ಪೈಪೋಟಿ ಇದ್ದ ಕಡೆ ನೋಟಾ ಗೆಲುವು ಸೋಲಿನಲ್ಲಿ ಸಣ್ಣ ಕೊಡುಗೆ ನೀಡಿತ್ತು. ಕಳೆದ ಚುನಾವಣೆಯಲ್ಲಿ ಒಟ್ಟು 108 ಕ್ಷೇತ್ರಗಳಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು. ಪ್ರತಿ ಕ್ಷೇತ್ರಗಳಲ್ಲಿ ಸರಾಸರಿ 10-15 ಅಭ್ಯರ್ಥಿಗಳು ಕಳೆದ ಬಾರಿ ಸ್ಪರ್ಧೆ ಮಾಡಿದ್ದರು. ಆದರೆ ಅದೆಷ್ಟೂ ಮೂರು ಅಭ್ಯರ್ಥಿಗಳ ಬಳಿಕ ಅತಿ ಹೆಚ್ಚು ಮತ ಚಲಾವಣೆ ಆಗಿರುವುದು NONE OF THE ABOVEಗೆ.

ಹೌದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 108 ಕ್ಷೇತ್ರಗಳಲ್ಲಿ ನೋಟಾ ಚಲಾವಣೆ ನಾಲ್ಕನೇ ಸ್ಥಾನಗಳಿಸಿತ್ತು. ಒಟ್ಟು 14 ಕ್ಷೇತ್ರಗಳಲ್ಲಿ ನೋಟಾ ಮೂರನೇ ಸ್ಥಾನ ಗಳಿಸಿತ್ತು. ಈ ಕ್ಷೇತ್ರಗಳಲ್ಲಿ ವಿಜೇತ ಅಭ್ಯರ್ಥಿ ಹಾಗೂ ಸೋತ ಅಭ್ಯರ್ಥಿ ಬಳಿಕ, ಅತಿ ಹೆಚ್ಚು ಚಲಾವಣೆಯಾಗಿರುವುದು ನೋಟಾ. ಕೆಲ ರಾಷ್ಟ್ರೀಯ ಪಕ್ಷ ಹಾಗೂ ಕೆಲ ನೋಂದಾಯಿತ ರಾಜಕೀಯ ಪಕ್ಷಗಳಿಗಿಂತ ನೋಟಾವೇ ಹೆಚ್ಚು ಚಲಾವಣೆ ಆಗಿದೆ. ರಾಷ್ಟ್ರೀಯ ಪಕ್ಷ ಬಿಎಸ್​ಪಿ ಪರ ಕಳೆದ ಚುನಾವಣೆಯಲ್ಲಿ ಒಟ್ಟು 1,08,592 ಮತ ಚಲಾವಣೆ ಆಗಿತ್ತು. ಇನ್ನು ಸಿಪಿಎಂ ಪರ ಒಟ್ಟು 81,191, ಎನ್​ಸಿಪಿ ಪರ 10,465 ಮತ ಚಲಾಯಿಸಲಾಗಿತ್ತು. ರಾಜ್ಯ ಪಕ್ಷ ಜೆಡಿಯು ಪರ 46,635 ಮತ ಹಾಕಲಾಗಿತ್ತು. ಉಳಿದಂತೆ ನೋಂದಾಯಿತ ಪಕ್ಷಗಳಾದ ಕರ್ನಾಟಕ ಪ್ರಜ್ನಾವಂತ ಜನತಾ ಪಕ್ಷದ ಪರ 74,229, ಸ್ವರಾಜ್ ಇಂಡಿಯಾ ಪಕ್ಷದ ಪರ ಒಟ್ಟು 79,400, ಭಾರತೀಯ ಪ್ರಜಾ ಪಕ್ಷ ಪರ 83,071 ಮತ ಚಲಾವಣೆ ಆಗಿದ್ದವು. ಆದರೆ ಈ ಎಲ್ಲಾ ಪಕ್ಷಗಳಿಗಿಂತ ನೋಟಾವೇ ಹೆಚ್ಚು ಚಲಾವಣೆಯಾಗಿರುವುದು ಗಮನಾರ್ಹವಾಗಿದೆ. ನೋಟಾ ಒಟ್ಟು 3,22,381 ಚಲಾವಣೆ ಆಗಿತ್ತು.

ಕಡಿಮೆ ಅಂತರದ ಸೋಲು ಗೆಲುವಲ್ಲಿ ನೋಟಾ ಆಟ: ಕಳೆದ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಗೆಲುವಿನ ಫಲಿತಾಂಶದಲ್ಲಿ ನೋಟಾ ಆಟ ಆಡಿರುವುದು ಸ್ಪಷ್ಟವಾಗಿತ್ತು. ಜಿದ್ದಾಜಿದ್ದಿನ ಪೈಪೋಟಿ ಇರುವ ಕೆಲ ಕ್ಷೇತ್ರಗಳಲ್ಲಿ ನೋಟಾ ಮತ ಅಭ್ಯರ್ಥಿಗಳ ಅದೃಷ್ಟಕ್ಕೆ ಪೂರಕವಾಗಿಯೂ, ಮಾರಕವಾಗಿಯೂ ಪರಿಣಮಿಸಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದು, 113 ಮ್ಯಾಜಿಕ್ ಫಿಗರ್ ತಲುಪುವಲ್ಲಿ ಕೇವಲ 9 ಸ್ಥಾನಗಳ ಕೊರತೆ ಅನುಭವಿಸಿತು. ಇದಕ್ಕೆ ಬಿಜೆಪಿ ಬಹುವಾಗಿ ನೋಟಾದತ್ತ ಬೊಟ್ಟು ಮಾಡಬಹುದು. ಯಾಕೆಂದರೆ 7 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಗೆಲುವು ಕಂಡಿತ್ತು. 7 ಕ್ಷೇತ್ರಗಳಲ್ಲಿ ಗೆಲುವಿನ ಅಂತರಗಿಂತ ನೋಟಾ ಮತವೇ ಹೆಚ್ಚಿಗೆ ಚಲಾವಣೆಯಾಗಿತ್ತು.

ಬಾದಾಮಿ ಕ್ಷೇತ್ರದಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯ ಶ್ರೀರಾಮುಲು ವಿರುದ್ಧ ಕೇವಲ 1,696 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು‌.‌ ಈ ಕ್ಷೇತ್ರದಲ್ಲಿ ಚಲಾವಣೆಯಾದ ನೋಟಾ ಮತಹಳು 2007. ಅದೇ ರೀತಿ ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಯನ್ನು ಕೇವಲ 1,868 ಮತಗಳ ಅಂತರದಲ್ಲಿ ಸೋಲಿಸಿತ್ತು. ಅಲ್ಲೂ 2007 ನೋಟಾ ಮತಗಳು ಚಲಾಯಿಸಲಾಗಿತ್ತು. ಇನ್ನು ಬಿಜೆಪಿ ಅಭ್ಯರ್ಥಿಗಳು ಹಿರೇಕೆರೂರಿನಲ್ಲಿ 555, ಕುಂದಗೋಳದಲ್ಲಿ 634 ಹಾಗೂ ಮಸ್ಕಿಯಲ್ಲಿ 213ರ ಅಲ್ಪ ಮತಗಳ ಅಂತರದಲ್ಲಿ ಸೋತಿತ್ತು. ಆದರೆ ಹಿರೇಕೆರೂರಿನಲ್ಲಿ 972 ನೋಟಾ ಮತ, ಕುಂದಗೋಳದಲ್ಲಿ 1,032 ನೋಟಾ ಹಾಗೂ ಮಸ್ಕಿಯಲ್ಲಿ 2,049 ನೋಟಾ ಮತ ಹಾಕಲಾಗಿತ್ತು.

ಕಾಂಗ್ರೆಸ್ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು 1,483 ಮತಗಳ ಅಂತರದಿಂದ ಸೋಲಿಸಿತ್ತು. ಈ ಕ್ಷೇತ್ರದಲ್ಲಿ ಚಲಾವಣೆಯಾದ ನೋಟಾ ಮತ 1421. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಎದುರು 1,989 ಅಲ್ಪ ಮತ ಅಂತರದಿಂದ ಗೆಲುವು ಸಾಧಿಸಿದ್ದರು. ಅಲ್ಲಿ 1015 ನೋಟಾ ಮತ ಚಲಾವಣೆಯಾಗಿವೆ. ಇತ್ತ ಅಥಣಿಯಲ್ಲಿ ಅಭ್ಯರ್ಥಿಗಳು 2,331 ಅಲ್ಪ ಮತ, ಬಳ್ಳಾರಿಯಲ್ಲಿ 2,679, ಹಾಗೂ ಯಮಕನಮರಡಿಯಲ್ಲಿ 2,850, ವಿಜಯನಗರದಲ್ಲಿ 2,775 ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಾಗಿತ್ತು. ಈ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಮತ ಅಂತರಗಿಂತ ನೋಟಾ ಮತ ಕಡಿಮೆ ಇದ್ದರೂ, ಫಲಿತಾಂಶದ ಮೇಲೆ ಅಲ್ಪ ಪರಿಣಾಮ ಬೀರಿದೆ.

ಇದನ್ನೂ ಓದಿ: ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 60 ಅಭ್ಯರ್ಥಿಗಳು ಸ್ಪರ್ಧೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.