ETV Bharat / state

ರಾಗಿಣಿ ವಿಚಾರಣೆಗೆ ಶಿವಾಜಿನಗರ ಮಹಿಳಾ ಇನ್ಸ್​ಪೆಕ್ಟರ್ ಕಾತ್ಯಾಯಿನಿ ಎಂಟ್ರಿ - ನಟಿ ಸಂಜನಾ ಗಲ್ರಾನಿ ತನಿಖೆ

ಸದ್ಯ ನಟಿ ಸಂಜನಾ ಗಲ್ರಾನಿ ತನಿಖೆಯನ್ನ ಮಹಿಳಾಧಿಕಾರಿ ಅಂಜುಮಾಲಾ ಹಾಗೂ ಪೂರ್ಣಿ‌ಮಾ ಸಿಸಿಬಿಯಲ್ಲಿ ನಡೆಸುತ್ತಿರುವ ಕಾರಣ ನಟಿ ರಾಗಿಣಿ ವಿಚಾರಣೆ ಹೊಣೆಯನ್ನು ಮಹಿಳಾ ತನಿಖಾಧಿಕಾರಿ ಕಾತ್ಯಾಯಿನಿ ಅವರಿಗೆ ವಹಿಸಲಾಗಿದೆ.

Inspector Katyayini
ಇನ್ಸ್ಪೆಕ್ಟರ್ ಕಾತ್ಯಯಿನಿ
author img

By

Published : Sep 8, 2020, 3:12 PM IST

ಬೆಂಗಳೂರು: ಒಂದೆಡೆ ಸಿಸಿಬಿ‌ ಕಚೇರಿಯಲ್ಲಿ ಸಂಜನಾ ಗಲ್ರಾನಿ ತನಿಖೆ ನಡೆಯುತ್ತಿರುವ ಕಾರಣ ಸದ್ಯ ನಟಿ ‌ರಾಗಿಣಿಯ ತನಿಖೆಯನ್ನ ಶಿವಾಜಿನಗರ ಮಹಿಳಾ ಇನ್ಸ್​ಪೆಕ್ಟರ್​ ಕಾತ್ಯಾಯಿನಿ ವಿಚಾರಣೆ ನಡೆಸುತ್ತಿದ್ದಾರೆ.

ನಟಿ ರಾಗಿಣಿಯವರನ್ನ ವಶಕ್ಕೆ ಪಡೆದ ದಿನದಿಂದ ಸಿಸಿಬಿ ಇನ್ಸ್​ಪೆಕ್ಟರ್​ ಅಂಜುಮಾಲಾ ಹಾಗೂ ಪೂರ್ಣಿಮಾ ತನಿಖೆ ನಡೆಸುತ್ತಿದ್ದರು. ಆದರೆ ಸದ್ಯ ನಟಿ ಸಂಜನಾ ಗಲ್ರಾನಿ ತನಿಖೆಯನ್ನ ಮಹಿಳಾಧಿಕಾರಿ ಅಂಜುಮಾಲಾ ಹಾಗೂ ಪೂರ್ಣಿ‌ಮಾ ಸಿಸಿಬಿಯಲ್ಲಿ ನಡೆಸುತ್ತಿರುವ ಕಾರಣ ಸದ್ಯ ಮಹಿಳಾ ತನಿಖಾಧಿಕಾರಿಯಾಗಿ ಇನ್ಸ್​ಪೆಕ್ಟರ್​ ಕಾತ್ಯಾಯಿನಿ ಅವರು ರಾಗಿಣಿ ತನಿಖೆ ನಡೆಸಲು ಎಂಟ್ರಿ ಕೊಟ್ಟಿದ್ದಾರೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣ ಸಂಬಂಧ ನಟಿ ರಾಗಿಣಿ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದು, ಬೆಳಗ್ಗೆಯಿಂದ ರಿಲ್ಯಾಕ್ಸ್ ಆಗಿದ್ದ ರಾಗಿಣಿಗೆ ಮತ್ತೆ ಶಾಕ್ ಆಗಿದೆ. ‌ಮಧ್ಯಾಹ್ನನದವರೆಗೆ ವಿಚಾರಣೆ ಇಲ್ಲ ಅಂದುಕೊಂಡಿದ್ದ ರಾಗಿಣಿಯ ವಿಚಾರಣೆ ಮಹಿಳಾ ಅಧಿಕಾರಿ ಕಾತ್ಯಾಯಿನಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ ಇದ್ದು, ಈಗಾಗಲೇ ಸಂಪೂರ್ಣ ರಿಪೋರ್ಟ್ ಪಡೆದಿರುವ ಅಧಿಕಾರಿ ಸದ್ಯ ರಾಗಿಣಿಯನ್ನ ತನಿಖೆ ನಡೆಸುತ್ತಿದ್ದಾರೆ‌. ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಬಹಳಷ್ಟು ಮಹಿಳಾ ಆರೋಪಿಗಳ ತನಿಖೆ ನಡೆಸುವಲ್ಲಿ ಕಾತ್ಯಾಯಿನಿ ಹೆಗ್ಗಳಿಕೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.