ETV Bharat / state

ಕರ್ತವ್ಯದ ವೇಳೆ ಕುಸಿದು ಬಿದ್ದು ಇನ್ಸ್​​ಪೆಕ್ಟರ್ ಸಾವು - Etv Bharat Kannada

ಕರ್ತವ್ಯನಿರತ ಪೊಲೀಸ್​ ಇನ್ಸ್​ಪೆಕ್ಟರ್​ ಏಕಾಎಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Kn_bng_
ಕರ್ತವ್ಯದ ವೇಳೆ ಕುಸಿದು ಬಿದ್ದು ಇನ್ಸ್​​ಪೆಕ್ಟರ್ ಸಾವು
author img

By

Published : Dec 2, 2022, 9:01 PM IST

ಬೆಂಗಳೂರು: ವಿಧಾನಸೌಧ ಸೆಕ್ಯೂರಿಟಿ ಕರ್ತವ್ಯದಲ್ಲಿದ್ದ ಇನ್ಸ್​ಪೆಕ್ಟರ್ ಧನಂಜಯ್ ಕರ್ತವ್ಯದ್ದಲ್ಲಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇನ್ಸ್​ಪೆಕ್ಟರ್ ಧನಂಜಯ್ ಕಳೆದ ಒಂದು ವರ್ಷದಿಂದ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರು.
ಒಂದು ವಾರದ ಹಿಂದೆ ಡ್ಯೂಟಿಗೆ ಬಂದಿದ್ದ ಅವರು ಇಂದು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಇನ್ಸ್​ಪೆಕ್ಟರ್ ಧನಂಜಯ್ ಮೃತಪಟ್ಟಿದ್ದಾರೆ.

ಧನಂಜಯ್​ಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 2009ನೇ ಬ್ಯಾಚ್​ನ ಪಿಎಸ್​ಐ ಆಗಿದ್ದರು. ಹಲಸೂರು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇನ್ಸ್​ಪೆಕ್ಟರ್ ಆಗಿ ಮುಂಬಡ್ತಿ ಪಡೆದಿದ್ದ ಧನಂಜಯ್ ಸದ್ಯ ವಿಧಾನಸೌಧ ಸೆಕ್ಯೂರಿಟಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಲಘಟಗಿ ಶಾಲೆಯಲ್ಲಿ ಹೃದಯಾಘಾತದಿಂದ 4ನೇ ತರಗತಿ ಬಾಲಕ ಸಾವು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.