ETV Bharat / state

ರೈತರ ಖಾತೆಗೆ ಬೆಳೆಹಾನಿ ಇನ್‌ಪುಟ್ ಸಬ್ಸಿಡಿ ಜಮೆ: 5 ಜಿಲ್ಲೆಗಳಲ್ಲಿ ಹಣ ಸಂದಾಯ ವಿಳಂಬ - Input subsidy to farmers account for crop loss

ಕಳೆದ ವರ್ಷದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳು ರಾಜ್ಯ ಭೀಕರ ಅತಿವೃಷ್ಟಿಗೆ ಸಾಕ್ಷಿಯಾಯಿತು. ಮಳೆಯ ಆರ್ಭಟಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಸಂಭವಿಸಿತ್ತು. ಅತಿವೃಷ್ಟಿ, ಪ್ರವಾಹದಿಂದಾಗಿ ಒಟ್ಟು 19.68 ಲಕ್ಷ ಹೆಕ್ಟೇರ್ ಬೆಳೆ ಹಾನಿ ಉಂಟಾಗಿತ್ತು. ಈ ಬೆಳೆಹಾನಿ ಪರಿಹಾರವಾಗಿ ಸರ್ಕಾರ ರೈತರ ಖಾತೆಗೆ ನೇರವಾಗಿ ಇನ್‌ಪುಟ್ ಸಬ್ಸಿಡಿಯನ್ನು ಪಾವತಿಸುತ್ತದೆ. ಈ ಸಂಬಂಧ ರಾಜ್ಯ ಸರ್ಕಾರ 709.67 ಕೋಟಿ ರೂ.‌ ಇನ್‌ಪುಟ್ ಸಬ್ಸಿಡಿಯನ್ನು ರೈತರ ಖಾತೆಗೆ ಜಮೆ ಮಾಡಿದೆ.

input-subsidy-to-farmers-account-for-crop-loss
ಬೆಳೆಹಾನಿಗಾಗಿ ರೈತರ ಖಾತೆಗೆ ಇನ್‌ಪುಟ್ ಸಬ್ಸಿಡಿ ಜಮೆ
author img

By

Published : Jan 25, 2021, 10:07 PM IST

ಬೆಂಗಳೂರು: ಕಳೆದ ಬಾರಿ‌ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿಗೆ ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿ ಉಂಟಾಗಿತ್ತು. ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ಇನ್‌ಪುಟ್ ಸಬ್ಸಿಡಿ ನೀಡುತ್ತದೆ. ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಬೆಳೆಹಾನಿಗೆ ರೈತರಿಗೆ ನೀಡಿದ ಇನ್‌ಪುಟ್ ಸಬ್ಸಿಡಿಯ ಪ್ರಗತಿ ಹೇಗಿದೆ ಎಂಬ ವರದಿ ಇಲ್ಲಿದೆ.

ಕಳೆದ ವರ್ಷ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳು ರಾಜ್ಯ ಭೀಕರ ಅತಿವೃಷ್ಟಿಗೆ ಸಾಕ್ಷಿಯಾಯಿತು. ಮಳೆಯ ಆರ್ಭಟಕ್ಕೆ ಲಕ್ಷಾಂತರ ಮೌಲ್ಯದ ಬೆಳೆ ಹಾನಿ ಸಂಭವಿಸಿತ್ತು. ಅತಿವೃಷ್ಟಿ, ಪ್ರವಾಹದಿಂದಾಗಿ ಒಟ್ಟು 19.68 ಲಕ್ಷ ಹೆಕ್ಟೇರ್ ಬೆಳೆ ಹಾನಿ ಉಂಟಾಗಿತ್ತು. ಈ ಬೆಳೆಹಾನಿ ಪರಿಹಾರವಾಗಿ ಸರ್ಕಾರ ರೈತರ ಖಾತೆಗೆ ನೇರವಾಗಿ ಇನ್‌ಪುಟ್ ಸಬ್ಸಿಡಿಯನ್ನು ಪಾವತಿಸುತ್ತದೆ. ಈ ಸಂಬಂಧ ರಾಜ್ಯ ಸರ್ಕಾರ 709.67 ಕೋಟಿ ರೂ.‌ ಇನ್‌ಪುಟ್ ಸಬ್ಸಿಡಿಯನ್ನು ರೈತರ ಖಾತೆಗೆ ಜಮೆ ಮಾಡಿದೆ.

ಇನ್‌ಪುಟ್ ಸಬ್ಸಿಡಿ ಸಂಬಂಧ ಪರಿಹಾರ ತಂತ್ರಾಂಶದಲ್ಲಿ ಈಗಾಗಲೇ 12.14 ಲಕ್ಷ ಹೆಕ್ಟೇರ್‌ಗಳಿಗೆ ಸಂಬಂಧಿಸಿದಂತೆ 12.02 ಲಕ್ಷ ರೈತರನ್ನು ನೋಂದಾಯಿಸಲಾಗಿದೆ. ಇವರಲ್ಲಿ ಸುಮಾರು 9.22 ಲಕ್ಷ ರೈತರಿಗೆ ರೂ. 709.67 ಕೋಟಿ ರೂ.ಗಳನ್ನು ಪಾವತಿಸಲಾಗಿದೆ.

ಐದು ಜಿಲ್ಲೆಗಳಲ್ಲಿ ನಿಧಾನ ಪ್ರಗತಿ: ಇನ್‌ಪುಟ್ ಸಬ್ಸಿಡಿ ಪಾವತಿಯಲ್ಲಿ ಐದು ಜಿಲ್ಲೆಗಳಲ್ಲಿ ನಿಧಾನ ಪ್ರಗತಿ ಕಂಡಿದೆ. ಹಾವೇರಿ, ಚಿತ್ರದುರ್ಗ, ಕಲಬುರ್ಗಿ, ಬೀದರ್ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ತಂತ್ರಾಂಶದಲ್ಲಿ ನಮೂದಿಸುವ ಕಾರ್ಯ ನಿಧಾನಗತಿಯಲ್ಲಿದೆ.

ಈ ಹಿನ್ನೆಲೆ ಐದು ಜಿಲ್ಲೆಗಳಲ್ಲಿ ಇನ್‌ಪುಟ್ ಸಬ್ಸಿಡಿ ಪಾವತಿ ವಿಳಂಬವಾಗಿದೆ. ಹಾವೇರಿಯಲ್ಲಿ 32,911.92 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ್ದು, ಪರಿಹಾರ ತಂತ್ರಾಂಶದಲ್ಲಿ ಒಟ್ಟು 10,713 ರೈತರು ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಕೇವಲ 323 ರೈತರಿಗೆ ಇನ್‌ಪುಟ್ ಸಬ್ಸಿಡಿ ಪಾವತಿ ಮಾಡಿದ್ದಾರೆ. ಇನ್ನು ಚಿತ್ರದುರ್ಗದಲ್ಲಿ ಒಟ್ಟು 56988.15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರ ತಂತ್ರಾಂಶದಲ್ಲಿ 13,238 ರೈತರು ತಮ್ಮ ಹೆಸರನ್ನು ನಮೂದಿಸಿದ್ದಾರೆ. ಈ ಪೈಕಿ 10,435 ರೈತರ ಖಾತೆಗೆ ಇನ್ಪುಟ್ ಸಬ್ಸಿಡಿ ಪಾವತಿ ಮಾಡಲಾಗಿದೆ.

ಓದಿ: ಆರೋಗ್ಯ ಸೇತು ಆ್ಯಪ್​ನಲ್ಲಿ ಬಳಕೆದಾರರ ಮಾಹಿತಿ ಹಂಚಿಕೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಕಲಬುರ್ಗಿಯಲ್ಲಿ 466073.57 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿತ್ತು. 220233 ರೈತರು ಪರಿಹಾರ ತಂತ್ರಾಂಶದಲ್ಲಿ ಹೆಸರು ನಮೂದಿಸಿದ್ದಾರೆ. 152332 ರೈತರ ಖಾತೆಗೆ ಸಬ್ಸಿಡಿ ಹಣ ಜಮೆಯಾಗಿದೆ. ಬೀದರ್ ನಲ್ಲಿ 270349 ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಸಂಭವಿಸಿತ್ತು. 147712 ರೈತರು ಪರಿಹಾರ ತಂತ್ರಾಂಶದಲ್ಲಿ ಹೆಸರು ನಮೂದಿಸಿದ್ದಾರೆ. ಈ ಪೈಕಿ 88721 ರೈತರ ಖಾತೆಗೆ ಹಣ ಸಂದಾಯವಾಗಿದೆ. ಬಾಗಲಕೋಟೆಯಲ್ಲಿ 112475 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿತ್ತು. 69112 ರೈತರು ಪರಿಹಾರ ತಂತ್ರಾಂಶದಲ್ಲಿ ಹೆಸರು ನಮೂದಿಸಿದ್ದು, ಈ ಪೈಕಿ 67,387 ರೈತರ ಖಾತೆಗೆ ಹಣ ಪಾವತಿ ಮಾಡಲಾಗಿದೆ. ಈ ಐದು ಜಿಲ್ಲೆಗಳಲ್ಲಿ 50%ಗೂ ಹೆಚ್ಚು ಬೆಳೆಹಾನಿಗೊಳಗಾದ ಪ್ರದೇಶವನ್ನು ತಂತ್ರಾಂಶದಲ್ಲಿ ನಮೂದಿಸಬೇಕಾಗಿದೆ. ಆದರೆ, ತಂತ್ರಾಂಶ ನಮೂದು ಪ್ರಕ್ರಿಯೆಯೇ ವಿಳಂಬವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.