ETV Bharat / state

6 ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಿದ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಆರು ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಿದೆ

Infosys Science Foundation  Infosys Science Foundation announced awards  awards in six categories  ಪ್ರಶಸ್ತಿ ಘೋಷಿಸಿದ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌  ಆರು ವಿಭಾಗಗಳಲ್ಲಿ ಪ್ರಶಸ್ತಿ
ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌
author img

By

Published : Nov 17, 2022, 10:44 AM IST

ಬೆಂಗಳೂರು: ‘ಇನ್ಫೊಸಿಸ್ ಪ್ರಶಸ್ತಿ 2022’ಕ್ಕೆ ಆಯ್ಕೆಯಾಗಿರುವ ಹೆಸರುಗಳನ್ನು ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ (ಐಎಸ್‌ಎಫ್‌) ಪ್ರಕಟಿಸಿದೆ. ಎಂಜಿನಿಯರಿಂಗ್ ಮತ್ತು ಗಣಕ ವಿಜ್ಞಾನ, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಆರು ವಿಭಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಭಾರತಕ್ಕೆ ಅನುಕೂಲವಾಗುವಂತೆ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳನ್ನು ಪ್ರತಿಷ್ಠಾನವು ಗುರುತಿಸಿ ಪುರಸ್ಕೃತರನ್ನು ಪ್ರಶಂಸಿಸಿದೆ.

ಪ್ರತಿ ವಿಭಾಗದಡಿಯಲ್ಲಿ ನೀಡುವ ಪ್ರಶಸ್ತಿಯು ಚಿನ್ನದ ಪದಕ, ಸ್ಮರಣಿಕೆ ಹಾಗೂ 1 ಲಕ್ಷ ಡಾಲರ್ (ಅಥವಾ ಅದಕ್ಕೆ ಸಮನಾದ ಭಾರತದ ರೂಪಾಯಿ) ನಗದು ಒಳಗೊಂಡಿರುತ್ತದೆ.

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ 2022 ಸುಮನ್ ಚಕ್ರವರ್ತಿ ಅವರಿಗೆ ಸಂದಿದೆ. ಚಕ್ರವರ್ತಿ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಆಗಿದ್ದಾರೆ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದಾರೆ. ದ್ರವ ವಿಜ್ಞಾನ ಹಾಗೂ ಎಲೆಕ್ಟ್ರೊಮೆಕ್ಯಾನಿಕ್ಸ್‌ ಕ್ಷೇತ್ರಗಳಲ್ಲಿ ತಮ್ಮ ಸಂಶೋಧನೆಗಳ ಮೂಲಕ ಆರೋಗ್ಯಸೇವೆಗಳು ಸೀಮಿತ ಸಂಪನ್ಮೂಲ ಇರುವ ಸಂದರ್ಭಗಳಲ್ಲಿಯೂ ಲಭ್ಯವಾಗುವಲ್ಲಿ ನೆರವಾಗಿದ್ದಾರೆ. ರೋಗ ಪತ್ತೆಗೆ ಕಡಿಮೆ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಆವಿಷ್ಕರಿಸುವ ಕೆಲಸ ಮಾಡಿದ್ದಾರೆ.

ಮಾನವಿಕ: ಮಾನವಿಕ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿ 2022 ಸುಧೀರ್ ಕೃಷ್ಣಸ್ವಾಮಿಯವರಿಗೆ ನೀಡಲಾಗಿದೆ. ಅವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಆಗಿದ್ದಾರೆ. ಭಾರತದ ಸಂವಿಧಾನದ ಬಗ್ಗೆ ಅವರು ಹೊಂದಿರುವ ಒಳನೋಟ, ಸುಪ್ರೀಂ ಕೋರ್ಟ್‌ 1973ರಲ್ಲಿ ರೂಪಿಸಿದ ‘ಸಂವಿಧಾನದ ಮೂಲ ಸ್ವರೂಪ’ದ ತಾತ್ವಿಕತೆ ಬಗ್ಗೆ ಅವರು ಮಾಡಿರುವ ಬರವಣಿಗೆಗಳ ಕಾರಣಕ್ಕೆ ಪ್ರಶಸ್ತಿ ನೀಡಲಾಗಿದೆ. ಸಂವಿಧಾನದ ಮೂಲ ಸ್ವರೂಪದ ಕುರಿತ ತಾತ್ವಿಕತೆಯು ಸಂವಿಧಾನಕ್ಕೆ ತಿದ್ದುಪಡಿ ತರಲು ಮಾಡಿದ ಹಲವು ಯತ್ನಗಳಿಗೆ ಕಡಿವಾಣ ಹಾಕಿದೆ. ದೇಶದ ರಾಜಕೀಯ ಸಂದರ್ಭದಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗದ ಎದುರು ಸಂವಿಧಾನದ ಸ್ಥಿರತೆಯನ್ನು ಇದು ಕಾಪಾಡಿದೆ.

ಜೀವ ವಿಜ್ಞಾನ: ಜೀವ ವಿಜ್ಞಾನ ವಿಭಾಗದಲ್ಲಿ ಇನ್ಫೋಸಿಸ್ ಪ್ರಶಸ್ತಿ 2022 ವಿದಿತಾ ವೈದ್ಯರಿಗೆ ಸಂದಿದೆ. ಅವರು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ ಸಂಸ್ಥೆಯಲ್ಲಿ ನ್ಯೂರೊಬಯಾಲಜಿ ಪ್ರೊಫೆಸರ್ ಆಗಿದ್ದಾರೆ. ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವ ಮೆದುಳಿನ ಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದು ಮುಖ್ಯವಾಗುತ್ತಿದೆ.

ಗಣಿತ ವಿಜ್ಞಾನ: ಗಣಿತ ವಿಜ್ಞಾನ ವಿಭಾಗದಲ್ಲಿ ಇನ್ಫೋಸಿಸ್ ಪ್ರಶಸ್ತಿ 2022 ಮಹೇಶ್ ಕಾಕಡೆ ಅವರಿಗೆ ನೀಡಲಾಗಿದೆ. ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗಣಿತದ ಪ್ರೊಫೆಸರ್ ಆಗಿದ್ದಾರೆ. ಬೀಜಗಣಿತ ಸಂಖ್ಯಾಸೂತ್ರಕ್ಕೆ ಅವರು ನೀಡಿದ ಗಮನಾರ್ಹ ಕೊಡುಗೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇದು ಗೂಢಲಿಪಿಶಾಸ್ತ್ರದಲ್ಲಿ ಬಳಕೆ ಆಗುತ್ತದೆ.

ಭೌತ ವಿಜ್ಞಾನ: ಭೌತ ವಿಜ್ಞಾನದಲ್ಲಿ ಇನ್ಫೋ ಸಿಸ್ ಪ್ರಶಸ್ತಿ 2022 ಪುಣೆಯ ನ್ಯಾಷನಲ್ ಸೆಂಟರ್ ಫಾರ್ ರೇಡಿಯೊ ಆಸ್ಟ್ರಾನಮಿಯ ಪ್ರೊಫೆಸರ್ ನಿಸ್ಸಿಂ ಕಾನೇಕರ್‌ರಿಗೆ ಸಂದಿದೆ. ನಕ್ಷತ್ರಗಳು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಸೃಷ್ಟಿಯಾದ ಕಾಲಘಟ್ಟದ ಗ್ಯಾಲಕ್ಸಿಗಳ ಕುರಿತ ಅವರ ಅಧ್ಯಯನಕ್ಕಾಗಿ ಈ ಗೌರವ ಸಂದಿದೆ. ಪ್ರೊ. ಕಾನೇಕರ್ ಅವರ ಕೆಲಸಗಳ ಕಾರಣದಿಂದಾಗಿ ಭಾರತದ ರೇಡಿಯೊ ಆಸ್ಟ್ರಾನಮಿ ಸಾಮರ್ಥ್ಯವು ವಿಶ್ವದ ಭೂಪಟದಲ್ಲಿ ಸ್ಥಾನ ಪಡೆದಿದೆ.

ಸಮಾಜ ವಿಜ್ಞಾನ: ಯೇಲ್ ವಿಶ್ವವಿದ್ಯಾಲಯದ ಆರ್ಥಿಕ ಬೆಳವಣಿಗೆ ಕೇಂದ್ರದ ನಿರ್ದೇಶಕಿ ಹಾಗೂ ಅಲ್ಲಿನ ಎರಡನೆಯ ಹೆನ್ರಿ ಜೆ. ಹೇಂಜ್‌ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ರೋಹಿಣಿ ಪಾಂಡೆರಿಗೆ ಸಮಾಜ ವಿಜ್ಞಾನ ವಿಭಾಗದ ಇನ್ಫೋಸಿಸ್ ಪ್ರಶಸ್ತಿ 2022 ನೀಡಲಾಗಿದೆ. ಆಡಳಿತ ಮತ್ತು ಉತ್ತರದಾಯಿತ್ವ, ಮಹಿಳೆಯರ ಸಬಲೀಕರಣ, ಬಡವರ ಬದುಕಿನಲ್ಲಿ ಸಾಲದ ಮಹತ್ವ, ಪರಿಸರದಂತಹ ಮಹತ್ವದ ವಿಷಯಗಳ ಕುರಿತು ಅವರು ನಡೆಸಿದ ಗಮನಾರ್ಹ ಸಂಶೋಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ಕೊಡಮಾಡಲಾಗಿದೆ. ಅವರು ಹಲವು ವಿಧಾನಗಳನ್ನು ಅನುಸರಿಸಿ ನಡೆಸಿರುವ ಸಂಶೋಧನೆಗಳು ಭಾರತ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಅನೇಕ ಅರ್ಥ ವ್ಯವಸ್ಥೆಗಳಲ್ಲಿ ನೀತಿಗಳನ್ನು ರೂಪಿಸುವಲ್ಲಿ ಭರವಸೆಗಳನ್ನು ಹುಟ್ಟುಹಾಕಿದೆ. ಹವಾಮಾನ ಬಿಕ್ಕಟ್ಟಿನ ಪರಿಣಾಮಗಳು, ಸಾಮಾಜಿಕ ನ್ಯಾಯ, ನ್ಯಾಯಯುತ ಸಮಾಜ ಎಂದರೇನು ಎಂಬ ಬಗ್ಗೆ ಚರ್ಚೆಗಳು ಹೆಚ್ಚು ತುರ್ತು ಎಂಬಂತೆ ಆಗುತ್ತಿರುವ ಹೊತ್ತಿನಲ್ಲಿ ಪ್ರೊ. ಪಾಂಡೆ ಅವರ ಕೆಲಸಗಳು ಬಹುದೊಡ್ಡ ಪರಿಣಾಮ ಬೀರುತ್ತವೆ.

ಇನ್ಫೋಸಿಸ್ ಪ್ರಶಸ್ತಿ 2022ಕ್ಕೆ ಒಟ್ಟು 218 ನಾಮನಿರ್ದೇಶನಗಳು ಬಂದಿದ್ದವು. ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದಿರುವ ವಿದ್ವಾಂಸರು ಹಾಗೂ ತಜ್ಞರಿದ್ದ ತೀರ್ಪುಗಾರರ ತಂಡವು ಪ್ರಶಸ್ತಿ ವಿಜೇತರನ್ನು ಅಂತಿಮಗೊಳಿಸಿದೆ. ಕಳೆದ ಹದಿಮೂರು ವರ್ಷಗಳಿಂದ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಕೆಲವು ಅತ್ಯುತ್ತಮ ಹಾಗೂ ಸೃಜನಶೀಲ ವೈಜ್ಞಾನಿಕ ಸಂಶೋಧನೆಗಳಿಂದ ಹೊರಹೊಮ್ಮಿದ ಸಾಧನೆಗಳನ್ನು ಗುರುತಿಸುತ್ತಿದೆ.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿಗಳ ಉಪಸ್ಥಿತಿ: ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್, ನಾರಾಯಣ ಮೂರ್ತಿ, ಶ್ರೀನಾಥ್ ಬಾಟ್ನಿ, ಕೆ. ದಿನೇಶ್, ಮೋಹನದಾಸ್ ಪೈ, ಸಲೀಲ್‌ ಪರೇಖ್ ಮತ್ತು ಎಸ್​ಡಿ ಶಿಬುಲಾಲ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಫೌಂಡೇಷನ್‌ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಪ್ರಶಸ್ತಿಗಳಿಗೆ ವಿದ್ವಾಂಸರನ್ನು ಗುರುತಿಸಿ ಅವರನ್ನು ಪುರಸ್ಕರಿಸುವ ಮೂಲಕ ಇನ್ಫೊಸಿಸ್ ಪ್ರಶಸ್ತಿಯು ಭಾರತದಲ್ಲಿ ಶ್ರೇಷ್ಠ ಸಂಶೋಧನೆಗಳಿಗೆ ಉತ್ತೇಜನ ನೀಡುತ್ತಿದೆ. ಪ್ರಶಸ್ತಿ ಪುರಸ್ಕೃತರು ಮಾನವ ಕುಲದ ಜ್ಞಾನಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು.

ಇನ್ಫೋಸಿಸ್ ಸಂಸ್ಥಾಪಕ ಹಾಗೂ ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿ ನಾರಾಯಣ ಮೂರ್ತಿ ಮಾತನಾಡಿ, ವಿಜ್ಞಾನ ಮತ್ತು ಸಂಶೋಧನೆಯ ಮೇಲೆ ಸರ್ಕಾರ ಹಾಗೂ ಖಾಸಗಿ ವಲಯ ಹೆಚ್ಚು ಹೂಡಿಕೆ ಮಾಡಬೇಕಾದ ತುರ್ತು ಇದೆ. ನಮ್ಮ ದೇಶವನ್ನು ಹಾಗೂ ಇಡೀ ಮನುಕುಲವನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ಮುಂದಿನ ದಿನಗಳಲ್ಲಿ ಇರುವ ಅತ್ಯುತ್ತಮ ದಾರಿ ಇದು. ನಮ್ಮೆದುರು ಇರುವ ಬೃಹತ್ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿನ ಮುಂಚೂಣಿ ಯೋಧರು ನಮ್ಮ ಸಂಶೋಧಕರು. ಹೀಗಾಗಿಯೇ ನಾವು ಅವರನ್ನು ಪ್ರೋತ್ಸಾಹಿಸಬೇಕು. ದೇಶ ಮತ್ತು ಜಗತ್ತನ್ನು ಕಾಡುತ್ತಿರುವ ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸಲು ತಮಗಿರುವ ಬಯಕೆಯ ಕಾರಣದಿಂದಾಗಿ, ಇನ್ಫೊಸಿಸ್ ಪ್ರಶಸ್ತಿ ಪುರಸ್ಕೃತರು ಪ್ರಯೋಜನಕಾರಿ ಕೆಲಸಗಳನ್ನು ಮಾಡಿದ್ದಾರೆ ಎಂದು ಕೊಂಡಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.