ETV Bharat / state

ಗೂಂಡಾಗಿರಿಯಿಂದ ಕೆ.ಆರ್.ಪುರಂ ಮತದಾರರನ್ನು ಗೆಲ್ಲೋಕಾಗಲ್ಲ:  ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ - ಕೆ.ಆರ್.ಪುರಂ ಉಪಚುನಾವಣೆ ಸುದ್ದಿ

ಕಾಂಗ್ರೆಸ್​ ಪಕ್ಷಕ್ಕೆ ಕೆ.ಆರ್.ಪುರಂ ಮತದಾರರಿಗೆ ವಂಚಿಸಿ ಪಕ್ಷ ತೊರೆದಿರುವ ಶಾಸಕರಿಗೆ ಸ್ವಾಭಿಮಾನಿ ಮತದಾರರು ಪಾಠ ಕಲಿಸುತ್ತಾರೆ. ಹಣದಿಂದ ಮತದಾರರ ಮನಗೆಲ್ಲೋಕೆ ಆಗಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ವೈ.ನಾರಾಯಣಸ್ವಾಮಿ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ
author img

By

Published : Nov 21, 2019, 8:11 PM IST

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್​ನ ಭದ್ರಕೋಟೆ. ಗೂಂಡಾಗಿರಿಯಿಂದ ಮತದಾರರ ಮನಸ್ಸು ಗೆಲ್ಲೋಕೆ ಆಗಲ್ಲ ಎಂದು ಶಾಸಕ ನಂದೀಶ್ ರೆಡ್ಡಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಅಭ್ಯರ್ಥಿ ವೈ.ನಾರಾಯಣಸ್ವಾಮಿ.

ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ

ದೇವಸಂದ್ರ ವಾರ್ಡ್​ನಲ್ಲಿನ ಮಸೀದಿ ರೋಡ್​ನಲ್ಲಿ ಮನೆ ಮನೆಗೂ ತೆರಳಿ ಮತಯಾಚಿಸಿದ ಬಳಿಕ‌ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು,‌ ಮೊದಲಿನಿಂದಲೂ ಕೆ.ಆರ್.ಪುರ ಕ್ಷೇತ್ರದ ಜನರು ಕಾಂಗ್ರೆಸ್​ಗೆ ಬೆಂಬಲಿಸಿದ್ದಾರೆ. ಬೈರತಿ ಬಸವರಾಜ್ ಎರಡು ಬಾರಿ ಕಾಂಗ್ರೆಸ್ ಹೆಸರಿನಲ್ಲಿ ಮತ ಪಡೆದಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿಗೆ ಸೇರಿ, ಪಕ್ಷಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿದರು.

ಕಾಂಗ್ರೆಸ್​ನಲ್ಲಿ ಟೇಬಲ್ ಹಾಕುವುದಕ್ಕೆ ಜನ ಇಲ್ಲ ಎಂದು ಬಿಜೆಪಿ‌ ಶಾಸಕ ನಂದೀಶ್ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ‌ ನಾರಾಯಣಸ್ವಾಮಿ,‌ ಅವರ ಪರಿಸ್ಥಿತಿಯನ್ನು ಅವರೇ ಹೇಳಿಕೊಂಡಿದ್ದಾರೆ.‌ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಹಣ ಹಾಗೂ ದುರಹಂಕಾರದಿಂದ ಯಾರನ್ನು ಗೆಲ್ಲಲು ಸಾಧ್ಯವಿಲ್ಲ.‌ ಇನ್ನೂ 15 ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

Intro:Body:ಕಾಂಗ್ರೆಸ್ ಒಂದು ಟೇಬಲ್‌ ಅಲ್ಲ ನಾಲ್ಕು ಟೇಬಲ್ ಹಾಕುವಷ್ಟು ಜನರಿದ್ದಾರೆ: ನಂದೀಶ್ ರೆಡ್ಡಿಗೆ ತಿರುಗೇಟು ನೀಡಿ‌ದ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ

ಬೆಂಗಳೂರು:

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ.. ಕಾಂಗ್ರೆಸ್ ನಲ್ಲಿ ಒಂದು ಟೇಬಲ್ ಅಲ್ಲ ನಾಲ್ಕು ಟೇಬಲ್ ಹಾಕುವಷ್ಟು ಜನರಿದ್ದಾರೆ.‌ ಜನರು ಇಂದು ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದ್ದಾರೆ ಎಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೈ.ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವಸಂದ್ರ ವಾರ್ಡ್ ನಲ್ಲಿರುವ ಮಸೀದಿ ರೋಡ್ ಗೆ ತೆರಳಿ ಮನೆ ಮನೆಗೂ ಮತಯಾಚಿಸಿ ಬಳಿಕ‌ ಮಾಧ್ಯಮಗಾರರೊಂದಿಗೆ ಮಾತನಾಡಿದರು.‌ ಮೊದಲಿನಿಂದಲೂ ಕೆ.ಆರ್.ಪುರ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ... ಈ ಹಿಂದೆ ಕಾಂಗ್ರೆಸ್ ನವರಾಗಿದ್ದ ಬೈರತಿ ಬಸವರಾಜ್ ಎರಡು ಬಾರಿ ಕಾಂಗ್ರೆಸ್ ಹೆಸರಿನಲ್ಲಿ ಮತ ಪಡೆದಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿಗೆ ಸೇರುವ ಪಕ್ಷಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ..
ಕಾಂಗ್ರೆಸ್ ನಲ್ಲಿ ಟೇಬಲ್ ಹಾಕುವುದಕ್ಕೆ ಜನ ಇಲ್ಲ ಎಂದು ಬಿಜೆಪಿ‌ ಶಾಸಕ ನಂದೀಶ್ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ‌ ನಾರಾಯಣಸ್ವಾಮಿ,‌ ಅವರ ಅಭಿಪ್ರಾಯ ಅವರು ಹೇಳಿಕೊಂಡಿದ್ದಾರೆ.‌ ನಂದೀಶ್ ರೆಡ್ಡಿ ಅವರು ಎರಡು ಬಾರಿ ಬಿಜೆಪಿ ಸ್ಪರ್ಧಿಸಿ ಸೋತಿದ್ದಾರೆ. ಆಗ ಬಿಜೆಪಿಯಲ್ಲಿ ಟೇಬಲ್ ಹಾಕುವುದಕ್ಕೆ ಜನ ಇರಲಿಲ್ಲ.. ಇಂದು ಹಣ ಹಾಗೂ ಗೂಂಡಾಗಿರಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಎದುರಿಸುತ್ತಿದ್ದಾರೆ.‌ ಇನ್ನೂ 15 ದಿನಗಳಲ್ಲಿ ಜನರೇ ತಕ್ಕಶಾಸ್ತ್ರಿ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.