ETV Bharat / state

ಕಲಾಪದಲ್ಲಿ ಕಾಲಹರಣ ಮಾಡಲು ಕೈ-ತೆನೆ ಪ್ಲಾನ್... ಪ್ರತಿಪಕ್ಷಕ್ಕೆ ಕದನದ ಆಹ್ವಾನ

ಇಡೀ ದಿನ ಚರ್ಚೆಯಲ್ಲೇ ಕಲಾಪ ಮುಗಿಸಲು ದೋಸ್ತಿ ನಾಯಕರು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ. ಇದಕ್ಕಾಗಿ ಎಲ್ಲಾ ಸದಸ್ಯರಿಂದ ಹೆಚ್ಚೆಚ್ಚು ಮಾತನಾಡುವಂತೆ ಸೂಚನೆ ನೀಡಲಾಗಿದೆ. ಬಿಜೆಪಿಯ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವಂತೆ ತಿಳಿಸಲಾಗಿದೆ ಎನ್ನಲಾಗ್ತಿದೆ.

ಕಲಾಪ
author img

By

Published : Jul 22, 2019, 12:01 PM IST

ಬೆಂಗಳೂರು: ಸಿ ಎಂ ವಿಶ್ವಾಸಮತಯಾನೆ ಮಾಡಿ ಕೊನೆಗೆ ವಿದಾಯ ಭಾಷಣ ಮಾಡಲಿದ್ದಾರೆ ಎಂಬಂತಹ ವಿಷಯಗಳು ರಾಜ್ಯದಲ್ಲಿ ಚರ್ಚೆಯಾಗುತ್ತಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮತಕ್ಕೆ ಹೋಗೋಣ ಎಂದಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಕೂಡ ಇಂದೇ ಮತಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ ದೋಸ್ತಿಗಳ ನಡೆ ನಿಗೂಢವಾಗಿದ್ದು, ಇಂದು ವಿಶ್ವಾಸಮತಕ್ಕೆ ಹೋಗದೇ ಇನ್ನೊಂದು ದಿನ ದೂಡುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಏನಾಗಲಿದೆ ಎನ್ನುವುದನ್ನು ನೋಡಿ, ಚರ್ಚಿಸಿ ನಾಳೆ ವಿಧಾನಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ದೋಸ್ತಿಗಳು ಒಳಗೊಳಗೆ ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಚರ್ಚೆಯ ಬಳಿಕ ಸಿಎಂ ವಿಶ್ವಾಸಮತಯಾಚಿಸ್ತಾರಾ? ಇಂದು ವಿಶ್ವಾಸಮತ ಯಾಚನೆ ಮಾಡ್ತಾರೆ ಎಂದಿರುವ ಸಿದ್ದರಾಮಯ್ಯ ಮಾತು ನಿಜವಾಗುವುದಾ? ಎನ್ನುವುದನ್ನು ಕಾದು ನೋಡಬೇಕಿದೆ.

ಇಡೀ ದಿನ ಚರ್ಚೆಯಲ್ಲೇ ಕಲಾಪ ಮುಗಿಸಲು ದೋಸ್ತಿಗಳ ಪ್ಲಾನ್​ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ. ಇದಕ್ಕಾಗಿ ಎಲ್ಲಾ ಸದಸ್ಯರಿಂದ ಹೆಚ್ಚೆಚ್ಚು ಮಾತನಾಡುವಂತೆ ಸೂಚನೆ ನೀಡಲಾಗಿದ್ದು, ಬಿಜೆಪಿಯ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವಂತೆ ಸೂಚನೆ ನೀಡಲಾಗಿದ್ದು. ರಾಜ್ಯದ ಜನರ ಮುಂದೆ ಬಿಜೆಪಿ ಬಣ್ಣ ಬಯಲು ಮಾಡುವ ಕಾರ್ಯ ಮುಂದುವರಿಸಲು ಸೂಚಿಸಲಾಗಿದೆ.

ಹೀಗಾಗಿ ಕೈ-ತೆನೆ ಸದಸ್ಯರು ಸದ್ದುಗದ್ದಲವೆಬ್ಬಿಸಲು ತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಇದೆ. ಪ್ರತಿಪಕ್ಷ ಸದಸ್ಯರನ್ನ ಉತ್ತೇಜಿಸಿ ಗದ್ದಲವೆಬ್ಬಿಸುವ ಯೋಜನೆ ರೂಪಿಸಲಾಗಿದೆ. ಇಡೀ ದಿನ ಶಾಸಕರ ಆಪರೇಷನ್ ಬಗ್ಗೆಯೇ ಪ್ರಸ್ತಾಪ ಮಾಡಲು ಕೂಡ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ. ಹೀಗಾಗಿ ಇಂದು ಇದನ್ನು ಬಿಟ್ಟು ಬೇರೆ ವಿಚಾರಗಳ ಪ್ರಸ್ತಾಪ ಆಗುವುದಿಲ್ಲ ಎಂಬಂತಾಗಿದೆ.

Intro:NEWSBody:ಬೆಂಗಳೂರು: ವಿಧಾನಸಭೆಯಲ್ಲಿ ಇಂದು ವಿಶ್ವಾಸಮತಯಾಚನೆ ಚರ್ಚೆ ನಡೆದು, ಮತಕ್ಕೆ ಹಾಕಲಾಗುವುದಾ ಎನ್ನುವ ವಿಚಾರದ ಮೇಲೆ ದೊಡ್ಡ ಚರ್ಚೆ ಆರಂಭವಾಗಿದೆ.
ಸಿಎಂ ಕುಮಾರಸ್ವಾಮಿ ವಿದಾಯ ಭಾಷಣ ಮಾಡಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮತಕ್ಕೆ ಹೋಗೋಣ ಎಂದಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಕೂಡ ಇಂದೇ ಮತಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ ದೋಸ್ತಿಗಳ ನಡೆ ನಿಗೂಢವಾಗಿದ್ದು, ಇಂದು ವಿಶ್ವಾಸಮತಕ್ಕೆ ಹೋಗದೇ ಇನ್ನೊಂದು ದಿನ ದೂಡುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ ಇದ್ದು, ಅದರ ತೀರ್ಪು ಬಂದ ನಂತರ ಅದು ಏನಾಗಲಿದೆ ಎನ್ನುವುದನ್ನು ನೋಡಿ, ಚರ್ಚಿಸಿ ನಾಳೆ ವಿಧಾನಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ದೋಸ್ತಿಗಳು ಒಳಗೊಳಗೆ ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ.
ಇಂದಿನ ಚರ್ಚೆಯ ಬಳಿಕ ಸಿಎಂ ವಿಶ್ವಾಸಮತಯಾಚಿಸ್ತಾರಾ? ಇಂದು ವಿಶ್ವಾಸಮತ ಯಾಚನೆ ಮಾಡ್ತಾರೆ ಎಂದಿರುವ ಸಿದ್ದರಾಮಯ್ಯ ಮಾತು ನಿಜವಾಗುವುದಾ? ಎನ್ನುವುದನ್ನು ಕಾದು ನೋಡಬೇಕಿದೆ. ಇಡೀ ದಿನ ಚರ್ಚೆಯಲ್ಲೇ ಕಲಾಪ ಮುಗಿಸಲು ದೋಸ್ತಿಗಳ ಫ್ಲಾನ್ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ.
ಇದಕ್ಕಾಗಿ ಎಲ್ಲಾ ಸದಸ್ಯರಿಂದ ಹೆಚ್ಚೆಚ್ಚು ಮಾತನಾಡುವಂತೆ ಸೂಚನೆ ನೀಡಲಾಗಿದ್ದು, ಬಿಜೆಪಿಯ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವಂತೆ ಸೂಚನೆ ನೀಡಲಾಗಿದೆ. ರಾಜ್ಯದ ಜನರ ಮುಂದೆ ಬಿಜೆಪಿ ಬಣ್ಣ ಬಯಲು ಮಾಡುವ ಕಾರ್ಯ ಮುಂದುವರಿಸಲು ಸೂಚಿಸಲಾಗಿದೆ. ಹೀಗಾಗಿ ಕೈ-ತೆನೆ ಸದಸ್ಯರು ಸದ್ದುಗದ್ದಲ ವೆಬ್ಬಿಸಲು ತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಇದೆ. ಪ್ರತಿಪಕ್ಷ ಸದಸ್ಯರನ್ನ ಉತ್ತೇಜಿಸಿ ಗದ್ದಲವೆಬ್ಬಿಸುವ ಯೋಜನೆ ರೂಪಿಸಲಾಗಿದೆ. ಇಡೀ ದಿನ ಶಾಸಕರ ಆಪರೇಷನ್ ಬಗ್ಗೆಯೇ ಪ್ರಸ್ತಾಪ ಮಾಡಲು ಕೂಡ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ. ಹೀಗಾಗಿ ಇಂದು ಇದನ್ನು ಬಿಟ್ಟು ಬೇರೆ ವಿಚಾರಗಳ ಪ್ರಸ್ತಾಪ ಆಗುವುದಿಲ್ಲ ಎಂಬ ಮಾಹಿತಿ ಇದೆ.
Conclusion:NEWS
ETV Bharat Logo

Copyright © 2024 Ushodaya Enterprises Pvt. Ltd., All Rights Reserved.