ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಗೆ ರಾಜ್ಯ ಸರ್ಕಾರ ಈ ಬಾರಿಯೂ ಅನುದಾನ ಇಟ್ಟಿಲ್ಲ. ಸರ್ಕಾರದ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಕಳೆದ ವರ್ಷ ಪಾಲಿಕೆಯೇ ಇಂದಿರಾ ಕ್ಯಾಂಟೀನ್ ಯೋಜನೆಗೆ ಹಣ ನೀಡಿತ್ತು. ಈ ಬಾರಿಯೂ ಇದೇ ಸ್ಥಿತಿ ಎದುರಾಗಿದೆ.
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಲ್ಲಿ ಒಬ್ಬರಾದ ಚೆಫ್ ಟಾಕ್ನ ಗೋವಿಂದ ಪೂಜಾರಿ ಮಾತನಾಡಿ, ಸಂಸ್ಥೆಗೆ 10 ತಿಂಗಳಿನಿಂದ 22 ಕೋಟಿ ರೂ. ಹಣ ಬರಬೇಕಿದೆ. ಅಲ್ಲದೇ ಕಳೆದ ವರ್ಷದ ಪೌರಕಾರ್ಮಿಕರ ನಾಲ್ಕು ಕೋಟಿ ರೂ. ಬಿಲ್ ಬಾಕಿ ಇದೆ. 15 ದಿನದಲ್ಲಿ ಬಿಲ್ ಕೊಡಿ ,ಇಲ್ಲದಿದ್ದರೆ ಬಾಗಿಲು ಮುಚ್ಚಬೇಕಾಗುತ್ತದೆ. 800-900 ಜನ ಕೆಲಸಕ್ಕೆ ಇದ್ದು, ವೇತನ ಕೊಡಲು ಸಾಧ್ಯವಾಗ್ತಿಲ್ಲ. ಹಲವರು ಕೆಲಸ ಬಿಟ್ಟು ಹೋಗ್ತಿದ್ದಾರೆ ಎಂದರು.
ಇದನ್ನೂ ಓದಿ:ಯಡಿಯೂರಪ್ಪ ಸಿಎಂ ಆಗಲು ಪಂಚಮಸಾಲಿ ಕೊಡುಗೆ ಅಪಾರ; ಶಾಸಕ ಯತ್ನಾಳ್
ಈ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ರನ್ನು ಕೇಳಿದ್ರೆ, ಪಾಲಿಕೆ 3 ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದರೂ, ಖರ್ಚು 6 ಸಾವಿರ ಕೋಟಿ ಇದೆ. ರಾಜ್ಯ ಸರ್ಕಾರ ಘೋಷಿಸಿರುವ ಕಾರ್ಯಕ್ರಮ ಇದಾಗಿದ್ದು, ಇದೀಗ ಅನುದಾನ ಇಲ್ಲದಿದ್ದರೂ, ಬಡವರ ಹಿತದೃಷ್ಟಿಯಿಂದ ಪಾಲಿಕೆಯೇ ಹಣ ನೀಡಲಿದೆ ಎಂದರು.