ಮಹದೇವಪುರ( ಬೆಂಗಳೂರು): ಭಾರತೀಯ ಸೇವಾ ಸಮಿತಿ ಸಂಘಟನೆ ವತಿಯಿಂದ ಚೀನಾ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ಚೀನಾ ವಸ್ತುಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು.
ಚೀನಾ ದಾಳಿಯಿಂದ ಹುತಾತ್ಮರಾದ ಯೋಧರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಹೋರಾಟಗಾರರು, ನಂತರ ಜಾಥಾ ನಡೆಸಿ ಜನರಿಗೆ ಚೀನಾ ವಿರುದ್ಧ ಅರಿವು ಮೂಡಿಸಿದರು.
ಕೆಆರ್ ಪುರ ತಾಲೂಕು ಕಚೇರಿವರೆಗೂ ಜಾಥಾ ನಡೆಸಿಕೊಂಡು ಬಂದ ಕಾರ್ಯಕರ್ತರು, ಬೆಂಗಳೂರು ಪೂರ್ವ ತಾಲೂಕು ತಹಶಿಲ್ದಾರ್ಗೆ ಮನವಿ ಸಲ್ಲಿಸಿದರು.