ಬೆಂಗಳೂರು: ಅಂಧರ ಕ್ರಿಕೆಟ್ ವಿಶ್ವ ಚಾಂಪಿಯನ್ ಟೀಂ ಇಂಡಿಯಾವು ಸೀಮಿತ ಓವರ್ಗಳ ಸರಣಿಯಲ್ಲಿ ಭಾಗವಹಿಸಲು ಜಮೈಕಾಗೆ ಪ್ರವಾಸ ಕೈಗೊಳ್ಳಲಿದೆ.
ವಿಶ್ವ ಚಾಂಪಿಯನ್ನರು ಜುಲೈ 18ರಂದು ಬೆಂಗಳೂರಿನಿಂದ ಜಮೈಕಾಗೆ ಪ್ರವಾಸ ಮಾಡಲಿದ್ದಾರೆ. ಸರಣಿಯಲ್ಲಿ ಭಾರತ ತಂಡವು ಜಮೈಕಾ ವಿರುದ್ಧ 3 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನ ಆಡಲಿದೆ. ಜುಲೈ 20ರಂದು ನಡೆಯುವ ಮೊದಲ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಸರಣಿಗೆ ಆರಂಭವಾಗಲಿದೆ.
ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಅಜಯ್ ರೆಡ್ಡಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಟೀಂ ಇಂಡಿಯಾವು ಸೀಮಿತ ಓವರ್ಗಳ ಸರಣಿಯಲ್ಲಿ ಭಾಗವಹಿಸಲು ಜಮೈಕಾಗೆ ಪ್ರವಾಸ ಕೈಗೊಳ್ಳುತ್ತಿದೆ.