ಬೆಂಗಳೂರು: ಹೊಸ ಸಚಿವನಾಗಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಯುವಜನತೆಗೆ ಹೊಸ ಕೆಲಸಗಳನ್ನ ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಐಟಿ-ಬಿಟಿ ಗಳಲ್ಲಿ ಕೆಲಸ ಮಾಡಲು ಹೆಚ್ಚು ಅವಕಾಶಗಳಿವೆ. ಸ್ಕಿಲ್ ಡೆವಲಪ್ಮೆಂಟ್ ಬಗ್ಗೆ ಹಚ್ಚು ಒತ್ತು ನೀಡಲಾಗ್ತಿದೆ. ಕೊರೊನಾ ನಂತರ ಭಾರತದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಕೆಲಸಕ್ಕೆ ಹೆಚ್ಚು ಅವಕಾಶ ದೊರೆತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸೆಂಟ್ರಲ್ ಕಾಲೇಜ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕು ದಿನದ ಜನಾಶಿರ್ವಾದ ಯಾತ್ರೆ ಇದಾಗಿದೆ. ಹುಬ್ಬಳ್ಳಿ ಧಾರವಾಡದಿಂದ ಆರಂಭವಾಗಿದೆ. 800 ಕಿ.ಮೀ ಯಾತ್ರೆ ಮಗಿದಿದೆ. ಆರು ಜಿಲ್ಲೆಗಳಲ್ಲಿ ಯಾತ್ರೆ ಮಾಡಿದ್ದೇನೆ. ನಿನ್ನೆ ರಾತ್ರಿ ಬೆಂಗಳೂರು ಬಂದು ತಲುಪಿದೆ. ಜುಲೈ 4 ರಂದು ಹೊಸ ಅಧ್ಯಾಯ ಆರಂಭವಾಯ್ತು. ಕೇಂದ್ರ ರಾಜ್ಯಖಾತೆ ಸಚಿವರಾಗಿ ಪ್ರಧಾನಿ ಮೋದಿ ಅವರು ಅವಕಾಶ ನೀಡಿದ್ರು. ಒಂದು ಅವಕಾಶ ಸಿಕ್ಕಿದೆ, ಹೊಸ ಭಾರತ ನಿರ್ಮಾಣ ಮಾಡಲು ಅವಕಾಶ ಸಿಕ್ಕಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ರಾಷ್ಟ್ರಾದ್ಯಂತ ಹೊಸ ಅವಕಾಶಗಳು ದೊರೆಯುತ್ತಿವೆ. ಪ್ರಧಾನಮಂತ್ರಿ ಸ್ಕಿಲ್ ಡೆವಲಪ್ಮೆಂಟ್ ಯೋಜನೆ ಜಾರಿಗೆ ತರಲಾಗಿದೆ.14 ಸಾವಿರ ಐಟಿಐ ಸೆಂಟರ್‌ಗಳು ಇವೆ. ಕಳೆದ ಒಂದು ವರ್ಷದಿಂದ ಹೊಸ ಎಜುಕೇಶನ್ ಪಾಲಿಸಿ ತರಲು ಚಿಂತನೆ ಮಾಡಲಾಗುತ್ತಿದೆ. ಸದ್ಯ ಮಕ್ಕಳು ಒಂದು ನಿರ್ಧಾರ ಮಾಡಬೇಕಿದೆ. ಪಿಯುಸಿ ನಂತರ ಮುಂದುವರೆಯಬೇಕಿತ್ತು. ಅಥವಾ ಶಿಕ್ಷಣದಿಂದ ಹಿಂದೆ ಸರಿಯಬೇಕಿತ್ತು. ಆದರೀಗ ಶಿಕ್ಷಣಕ್ಕೆ ಹೆಚ್ಚು ಅವಕಾಶಗಳು ಸಿಗಲಿವೆ ಎಂದು ಅಭಿಪ್ರಾಯಪಟ್ಟರು.
ವರ್ಚುಯಲ್ ಐಡಿ ಪಾರ್ಕ್ಗೆ ಗಮನ:
ಟೈಯರ್ 2 ಸಿಟಿಯಲ್ಲಿ ಐಟಿ ಪಾರ್ಕ್ ಗೆ ಆದ್ಯತೆ ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ಗೆ 50 ಎಕರೆ ಭೂಮಿ ನೀಡಲಾಯಿತು ಅವರು ಕಟ್ಟಡ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸಿದ್ದಾರೆ. ಆದರೆ, ಕಂಪನಿಗಳೇ ಐಟಿ ಪಾರ್ಕ್ ಕಟ್ಟಡಕ್ಕೆ ಬರುತ್ತಿಲ್ಲ. ಕೊರೊನಾ ಅಲೆಯ ಕಾರಣದಿಂದ ವರ್ಕ್ ಫ್ರಂ ಹೋಂ ಹೆಚ್ಚಾಗಿದೆ. ಹಾಗಾಗಿ ನಾವು ವರ್ಚುಯಲ್ ಐಡಿ ಪಾರ್ಕ್ ಆರಂಭಿಸುವ ಕುರಿತು ಗಮನ ಹರಿಸಲಿದ್ದೇವೆ ಎಂದರು.
5 ಸಾವಿರ ಹಳ್ಳಿಗಳಿಗೆ ಒಎಪ್ಸಿ ಸೌಲಭ್ಯ ಕಲ್ಪಿಸುವ ಪೈಲೆಟ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿದೆ. ಡಿಜಿಟಲ್ ಇಂಡಿಯಾ ಭಾಗವಾಗಿ ಅಂತರ್ಜಾಲ ಸೌಲಭ್ಯ ಕಲ್ಪಿಸಲು, ಉನ್ನತೀಕರಿಸಲು ಆಧ್ಯತೆ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ, ಸಚಿವ ಆರ್ ಅಶೋಕ್, ಸಂಸದ ಪಿ.ಸಿ ಮೋಹನ್, ವಿಭಾಗ ಅಧ್ಯಕ್ಷರಾದ ಎನ್.ಆರ್ ರಮೇಶ್, ಬೆಂಗಳೂರು ಕೇಂದ್ರ ಅಧ್ಯಕ್ಷ ನಾರಾಯಣ್ ಉಪಸ್ಥಿತರಿದ್ದರು.