ಬೆಂಗಳೂರು: ನಗರದ 21 ವಾರ್ಡ್ಗಳನ್ನು ಹೊರತುಪಡಿಸಿ ಉಳಿದೆಡೆ ಲಾಕ್ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆ ವಾಹನಗಳು ರಸ್ತೆಗಿಳಿದಿದ್ದು, ಬೆಳ್ಳಂಬೆಳಗ್ಗೆ ಟ್ರಾಫಿಕ್ ಜೋರಾಗೇ ಇರುವ ದೃಶ್ಯ ಕಾಣಸಿಗುತ್ತಿದೆ.
ವಿವಿದ ಕಚೇರಿಗಳು, ಕೈಗಾರಿಗಳು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ಸಿಕ್ಕಿರುವ ಹಿನ್ನೆಲೆ ಜನರು ಮರಳಿ ಕೆಲಸಗಳಿಗೆ ಹೊರಟಿದ್ದಾರೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ನಗರದ ಬಹುತೇಕ ಸಿಗ್ನಲ್ ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಟ್ರಾಫಿಕ್ ಸಿಗ್ನಲ್ ಗಳು ಕೂಡಾ ಆರಂಭವಾಗಿದೆ. ಅದ್ರರಲ್ಲೂ ಪ್ರಮುಖವಾಗಿ ಮೆಜೆಸ್ಟಿಕ್, ರಿಚ್ಮಂಡ್ ಸರ್ಕಲ್, ಯಶವಂತಪುರ, ಶಾಂತಿನಗರ, ಜಯನಗರ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿದೆ.