ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ಮಹಾ ಸ್ಫೋಟವಾಗಿದ್ದು, ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಮೈಕ್ರೋ ಕಂಟೇನ್ಮೆಂಟ್ ಝೋನ್ ಗುರುತಿಸಲಾಗಿದೆ.
154ಕ್ಕೆ ಏರಿದ ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆ:
ಪಾಲಿಕೆಯ ಎಂಟು ವಲಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಮೈಕ್ರೋ ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆ 154ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 49, ಮಹದೇವಪುರ 48, ದಕ್ಷಿಣ 15, ಪಶ್ಚಿಮ 16, ಪೂರ್ವ 12, ಯಲಹಂಕ 10, ದಾಸರಹಳ್ಳಿ 3, ಆರ್‌ಆರ್ ನಗರದಲ್ಲಿ 1 ಮೈಕ್ರೋ ಕಂಟೇನ್ಮೆಂಟ್ಗಳನ್ನು ಗುರುತಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಭಾಗವಾರು ಕೋವಿಡ್ ಸೋಂಕಿತರು:
ಬೊಮ್ಮನಹಳ್ಳಿ ವಲಯದಲ್ಲಿ 412 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮಹದೇವಪುರದಲ್ಲಿ 717 ಕೇಸ್, ಬೆಂಗಳೂರು ಪೂರ್ವದಲ್ಲಿ 744 , ಬೆಂಗಳೂರು ದಕ್ಷಿಣದಲ್ಲಿ 483, ಯಲಹಂಕದಲ್ಲಿ 232, ಬೆಂಗಳೂರು ಪಶ್ಚಿಮದಲ್ಲಿ 325, ಆರ್.ಆರ್.ನಗರದಲ್ಲಿ 197, ದಾಸರಹಳ್ಳಿ ವಲಯದಲ್ಲಿ 37 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ದೇಶದಲ್ಲಿ ಕೊರೊನಾದ ಆತಂಕಕಾರಿ ಬೆಳವಣಿಗೆ.. ಒಂದೇ ದಿನಕ್ಕೆ ಅರ್ಧ ಲಕ್ಷಕ್ಕೂ ಹೆಚ್ಚು ಕೇಸ್ ದಾಖಲು!
ಇನ್ನೂ ಬುಧವಾರ ನಗರದಲ್ಲಿ 3 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ.