ETV Bharat / state

ಲಾಕ್​ಡೌನ್ ಅವಧಿಯಲ್ಲಿ ಶಿಶುಮರಣ ಪ್ರಮಾಣ ಅಧಿಕ ಸಾಧ್ಯತೆ? - Increased mortality of newborns in Karnataka

ಅಪೌಷ್ಟಿಕತೆ ಹಾಗೂ ಆರೋಗ್ಯ ಸೇವೆಯಲ್ಲಿನ ಮೂಲಸೌರ್ಕಯಗಳ ಅಲಭ್ಯತೆ ಜೊತೆಗೆ ಶುದ್ಧ ನೀರು ಹಾಗೂ ನೈರ್ಮಲ್ಯದ ಕೊರತೆ, ಅವಧಿ ಪೂರ್ವ ಜನನ ಹಾಗೂ ಕಡಿಮೆ ತೂಕ ಎಳೆಯರ ಸಾವಿಗೆ ಕಾರಣಗಳಾಗುತ್ತಿವೆ.

Infant mortality in Karnataka
ಶಿಶುಮರಣ
author img

By

Published : Nov 28, 2020, 5:34 PM IST

ಬೆಂಗಳೂರು: ಕೋವಿಡ್ ವಕ್ಕರಿಸಿದ ಬಳಿಕ ರಾಜ್ಯದಲ್ಲಿ ಮತ್ತೆ ಶಿಶುಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಬಹುತೇಕ ಆಸ್ಪತ್ರೆಗಳು ಕೊರೊನಾಗೆ ಮೀಸಲಿಸಿದ್ದ ಕಾರಣ ನವಜಾತ ಶಿಶುಗಳು ಮರಣ ಪ್ರಮಾಣ ಹೆಚ್ಚಾಗುವ ಸಂಭವವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

1990ರಿಂದ 2019ರೊಳಗೆ ಶಿಶುಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ. 1990ರಲ್ಲಿ ಸಾವಿರಕ್ಕೆ 89 ಮಕ್ಕಳು ಸಾಯುತ್ತಿದ್ದವು. ಅದು ಕಳೆದ ವರ್ಷ 28ಕ್ಕೆ ಇಳಿದಿದೆ. ಆದರೆ, ವಿಶ್ವದ ವಿವಿಧ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿ ಶಿಶುಗಳ ಮರಣ ಪ್ರಮಾಣ ಅಧಿಕವಾಗಿರುವುದು ಕಳವಳಕಾರಿ ಸಂಗತಿ.

ಮಕ್ಕಳ ಸಾವಿನ ಕುರಿತು ಅಧ್ಯಯನ ನಡೆಸಿರುವ ವಿಶ್ವಸಂಸ್ಥೆಯು ವಿಶ್ವದಲ್ಲೇ ಅತಿ ಹೆಚ್ಚು ಶಿಶು ಮರಣಗಳು ಭಾರತದಲ್ಲಿ ಸಂಭವಿಸುತ್ತಿವೆ. ಪ್ರತಿ‌ ಎರಡು ನಿಮಿಷಕ್ಕೆ ಮೂರು ನವಜಾತ ಶಿಶುಗಳು ಸಾವಿಗೀಡಾಗುತ್ತಿವೆ. 2017ರಲ್ಲಿ 8.02 ಲಕ್ಷ ಮಕ್ಕಳು ಮರಣ ಹೊಂದಿದ ಪೈಕಿ 6.05 ಲಕ್ಷ ನವಜಾತ ಶಿಶುಗಳೇ ಆಗಿವೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 57ಕ್ಕೂ ಹೆಚ್ಚು ಮರಣ ಸಂಭವಿಸಿವೆ.

ಇದನ್ನೂ ಓದಿ...ಮಹಾದೇವ ಕೊಲೆ ಯತ್ನ ಪ್ರಕರಣವನ್ನು ಸಿಬಿಐಗೆ ವಹಿಸಿ: ಯಶವಂತರಾವ್ ಜಾಧವ್

ಹಸುಗೂಸು ಹುಟ್ಟಿದ ನಾಲ್ಕೈದು ವಾರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸಾವನ್ನಪ್ಪಿತ್ತಿರುವುದು ದುರಂತದ ಸಂಗತಿ. ಲಸಿಕೆ ಅಭಿಯಾನ, ನವಜಾತ ಶಿಶುಗಳಿಗಾಗಿ ಪ್ರತ್ಯೇಕ ವಿಭಾಗಗಳ ರಚನೆ, ಜಾಗೃತಿ ಆಂದೋಲನಗಳು ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳು ನಡೆದಿವೆ‌. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶಿಶುಮರಣ ಪ್ರಮಾಣ ತಗ್ಗಿದೆ. ಆದರೆ, ಲಾಕ್​​ಡೌನ್ ವೇಳೆ ಅದರ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿಗದಿತ ದಿನದಂದು ಗರ್ಭೀಣಿಯರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದಿರುವುದು, ಪೌಷ್ಠಿಕ ಆಹಾರ ಸೇವಿಸದಿರುವುದು, ಮಾಹಿತಿ ಕೊರತೆಯಿಂದ ಮರಣ ಪ್ರಮಾಣದ ಸಂಖ್ಯೆ ಹೆಚ್ಚಾಗಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ತೂಕ ಕಡಿಮೆ, ಅವಧಿಗಿಂತ ಕಡಿಮೆ, ಸೋಂಕಿನಿಂದ ನವಜಾತು ಶಿಶುವಿನ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಈ ಹಿಂದೆ ಹೆಣ್ಣು ಶಿಶು ಜನಿಸಿದರೆ ಎಲ್ಲೆಂದರಲ್ಲಿ ಪೋಷಕರು ಬಿಟ್ಟು ಹೋಗುತ್ತಿದ್ದರು. ಬಡತನ, ಕೌಟುಂಬಿಕ ಕಲಹ ಹೀಗೆ ವಿವಿಧ ಕಾರಣಗಳಿಗಾಗಿ ಮಗುವನ್ನು ಬಿಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಗೀತಾ ಶಿವಮೂರ್ತಿ ಮಾಹಿತಿ ನೀಡಿದರು.

ಇದನ್ನೂ ಓದಿ...ಕೇಂದ್ರದ ತನಿಖಾ ಸಂಸ್ಥೆಗಳನ್ನು ನಾಯಿಗಳಿಗೆ ಹೋಲಿಸಿ ರಾವತ್​ ವಿವಾದಾತ್ಮಕ ಟ್ವೀಟ್‌

ವರ್ಷದಿಂದ ವರ್ಷಕ್ಕೆ ಶಿಶುಮರಣ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನಷ್ಟು ಇಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗರ್ಭಿಣಿಯಾದಾಗ ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು. ಪೌಷ್ಟಿಕಾಂಶ ಆಹಾರಕ್ಕೆ ಒತ್ತು ನೀಡುವುದು, ನವಜಾತ ಶಿಶುಗಳಿಗಾಗಿ ವಿಭಾಗಗಳ ರಚನೆ, ಕಾಲ ಕಾಲಕ್ಕೆ ಜಾಗೃತಿ ಆಂದೋಲನ ನಡೆಸುತ್ತಿದ್ದೇವೆ ಎಂದು ಮಕ್ಕಳ ವಿಭಾಗದ ಮುಖ್ಯಸ್ಥ ಕೆ.ಮಲ್ಲೇಶ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.