ಬೆಂಗಳೂರು: ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಲಾಲ್ಬಾಗ್ ಆರಂಭಗೊಂಡಿದೆ. ಆದರೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿದೆ.
ಈ ಹಿಂದೆ ವಯಸ್ಕರಿಗೆ 25 ರೂ.ಪಾಯಿ ಇತ್ತು.ಇದೀಗ 30 ರೂ. ಮಾಡಿದೆ. ಮಕ್ಕಳಿಗೆ ಈ ಹಿಂದೆ ಉಚಿತ ಪ್ರವೇಶವಿತ್ತು. ಆದರೆ, ಇದೀಗ ಆರು ವರ್ಷದೊಳಿಗೆ ಮಕ್ಕಳಿಗಷ್ಟೇ ಫ್ರೀ ಎಂಟ್ರಿ ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 10 ರೂ. ದರ, ಇನ್ನು 12 ವರ್ಷ ಮೇಲ್ಪಟ್ಟವರಿಗೆ 30 ರೂಪಾಯಿ ಶುಲ್ಕ ನಿಗದಿಪಡಿಸಿದೆ.
ಓದಿ: ವಸತಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಪರಿಷತ್ ಸದಸ್ಯರಿಗೂ ಅಧಿಕಾರ: ಸಚಿವ ಸೋಮಣ್ಣ
ಇತ್ತ ಎಲ್ಲಾ ಬಗೆಯ ವಾಹನಗಳಿಗೂ ಶುಲ್ಕ ಏರಿಕೆ ಮಾಡಿದೆ.
ವಾಹನಗಳ ಶುಲ್ಕವೂ ಏರಿಕೆ:
- ದ್ವಿಚಕ್ರ ವಾಹನ- 30
- ಕಾರುಗಳು- 40
- ಟೆಂಪೋ ಟ್ರಾವೆಲರ್ - 70
- ಬಸ್ಗಳಿಗೆ- 110 ಮೂರು ಗಂಟೆಯ ನಂತರ ಶುಲ್ಕ ಏರಿಕೆ ಮಾಡಲಾಗುತ್ತೆ. ಇನ್ನು ವಿಶೇಷ ದಿನಗಳಲ್ಲಿ ಈ ದರ 5-10ರೂ ಏರಿಕೆ ಆಗಲಿದೆ.