ETV Bharat / state

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ಧ: ಬಿಎಸ್​ವೈ - ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಬಿಎಸ್​ವೈ

ಲೆಹರ್ ಸಿಂಗ್ ಸೇರಿ ಮೂವರು ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲ್ಲೋದು ಶತಸಿದ್ಧ. ಮೂರನೇ ಅಭ್ಯರ್ಥಿ ಗೆಲುವಿಗೆ ಎರಡನೇ ಪ್ರಾಶಸ್ತ್ಯದ ಮತಗಳೇ ಸಾಕು. ಅದನ್ನು ಹೊರತುಪಡಿಸಿ ನಮಗೆ ಯಾವುದೇ ಮತಗಳು ಬೇಕಾಗಿಲ್ಲ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

BSY
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
author img

By

Published : Jun 6, 2022, 6:53 PM IST

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ಧ. ಯಾವುದೇ ರೀತಿಯ ಹೇಳಿಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಲೆಹರ್ ಸಿಂಗ್ ಸೇರಿ ಮೂವರು ನೂರಕ್ಕೆ ನೂರರಷ್ಟು ಗೆಲ್ಲೋದು ಶತಸಿದ್ಧ. ಮೂರನೇ ಅಭ್ಯರ್ಥಿ ಗೆಲುವಿಗೆ ಎರಡನೇ ಪ್ರಾಶಸ್ತ್ಯತದ ಮತಗಳೇ ಸಾಕು. ಅದನ್ನು ಹೊರತುಪಡಿಸಿ ನಮಗೆ ಯಾವುದೇ ಮತಗಳು ಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ

ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಆತ್ಮಸಾಕ್ಷಿಯ ಮತಗಳು ಬರ್ತಾವೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರ ಹೇಳಿಕೆಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ. ಚುನಾವಣೆ ಫಲಿತಾಂಶ ಬಂದಾಗ ನೀವೇ ನೋಡ್ತೀರಲ್ಲ ಎಂದರು.

ಬೆಳಗಾವಿಗೆ ಹೊರಟ ಯಡಿಯೂರಪ್ಪ: ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆ ಪ್ರಚಾರಕ್ಕಾಗಿ ಬೆಳಗಾವಿಗೆ ಯಡಿಯೂರಪ್ಪ ತೆರಳಿದರು. ಪದವೀಧರ ಕ್ಷೇತ್ರ ಚುನಾವಣೆ ಇದೆ. ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರಚಾರಕ್ಕೆ ಹೋಗ್ತಿದ್ದೇನೆ. ಕಾಂಗ್ರೆಸ್​ನಿಂದ ಆರ್​ಎಸ್​​ಎಸ್ ಚಡ್ಡಿ ಸುಡುವ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಬಿಎಸ್​ವೈ ತೆರಳಿದರು.

ಇದನ್ನೂ ಓದಿ: ಪಾಪದ ಅಭ್ಯರ್ಥಿಗಳನ್ನು ಬಂಧಿಸುವುದು ಬಿಟ್ಟು ಅಕ್ರಮದ ಮುಖ್ಯ ಆರೋಪಿಯನ್ನ ಬಂಧಿಸಲಿ : ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.