ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ನಗರದ ಬ್ರಿಗೇಡ್ ರಸ್ತೆ ಬಳಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ ಚಪ್ಪಲಿ ಏಟು ತಿಂದವ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಅನುಚಿತವಾಗಿ ವರ್ತಿಸಿದ ಪುಂಡನಿಗೆ ಯುವತಿ ಚಪ್ಪಲಿ ಸೇವೆ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸುವಂತೆ ಅಶೋಕ್ ನಗರ ಪೊಲೀಸರಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಪುಂಡನಿಗೆ ಯುವತಿಯಿಂದ ಚಪ್ಪಲಿ ಏಟು... ಪೊಲೀಸರಿಗೂ ಪೋಕರಿಗಳಿಂದ ಕಿರಿಕ್!
ಈ ಹಿನ್ನೆಲೆ ಕಾರ್ಯಚರಣೆಗಿಳಿದ ಪೊಲೀಸರು ಚಪ್ಪಲಿಯೇಟು ತಿಂದ ಯುವಕ ಸೇರಿ ಇತರ ನಾಲ್ವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತ ಯುವಕ ತಮಿಳುನಾಡಿನ ಕೃಷ್ಣಗಿರಿಯವನು ಎಂದು ತಿಳಿದು ಬಂದಿದ್ದು, ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆಗೆಂದು ಬ್ರಿಗೇಡ್ ರಸ್ತೆಗೆ ತೆರಳಿದ್ದ ಎಂದು ತಿಳಿದು ಬಂದಿದೆ. ಸದ್ಯ ಹೊಸ ವರ್ಷಾಚರಣೆ ದಿನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದವರಿಗಾಗಿ ಬಲೆ ಬೀಸಿದ್ದಾರೆ.