ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನ್ಸೂರ್ ಖಾನ್ ಪರ ವಕೀಲರು ಸಿಟಿ ಸಿವಿಲ್ ಕೊರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಮನ್ಸೂರ್ ಖಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಕಮರ್ಷಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನ್ಸೂರ್ ಖಾನ್ ಐಎಂಎ ಜ್ಯುವೆಲರಿ ಹೊಂದಿದ್ದು, ಈತ ಹಲವಾರು ಗ್ರಾಹಕರಿಗೆ ಲಾಭದ ಆಸೆ ತೋರಿಸಿ ಕೋಟಿ ಕೋಟಿ ಹಣ ಲಪಾಟಯಿಸಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದ. ನಂತರ ಗ್ರಾಹಕರು ರೊಚ್ಚಿಗೆದ್ದು ಗಲಾಟೆ ಮಾಡಿ ನಗರದ ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು.
ಇನ್ನು ಪ್ರಕರಣ ಗಂಭೀರವಾದ ಹಿನ್ನೆಲೆ ಎಸ್ಐಟಿಗೆ ವರ್ಗಾವಣೆಯಾಗಿ ತನಿಖೆ ಚುರುಕಾದಾಗ ಮನ್ಸೂರ್ನೊಂದಿಗೆ ರಾಜಾಕಾರಣಿಗಳು, ಐಪಿಎಸ್ ಅಧಿಕಾರಿಗಳು ಭಾಗಿಯಾಗಿರುವ ವಿಚಾರ ತಿಳಿದು ಬಂತು. ದಿನೇ ದಿನೇ ಪ್ರಕರಣದ ಗಂಭೀರತೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡಿದೆ. ಆದ್ರೆ ಸದ್ಯ ಪ್ರಕರಣದ ಪ್ರಮುಖ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.