ಬೆಂಗಳೂರು: ಇದುವರೆಗೂ ರಾಜಧಾನಿಯಲ್ಲಿ 50ಕ್ಕೂ ಹೆಚ್ಚು ಬ್ಲೇಡ್ ಕಂಪೆನಿ ಜನರಿಂದ ಹಣ ಪಡೆದು ವಂಚಿಸಿವೆ. ಆದರೆ ಐಎಂಎ ಕಂಪೆನಿ ಕಥೆ ಇದಕ್ಕಿಂತ ಭಿನ್ನವಾಗಿದ್ದು, ಐಎಂಒಗೆ 1500 ಕೋಟಿಗೂ ಅಧಿಕ ಹಣ ಹೂಡಿಕೆಯಾಗಿದೆ. ಇದೀಗ ಇದರಲ್ಲಿ ಸುಮಾರು 300 ಕೋಟಿ ರೂ. ಆಸ್ತಿಯನ್ನು ಎಸ್ಐಟಿ ಜಪ್ತಿ ಮಾಡಿಕೊಂಡಿದೆ.
ವಶಪಡಿಸಿಕೊಂಡ ಹಣದಲ್ಲಿ ಶೇ.60ರಷ್ಟು ಹಣ ಹೂಡಿಕೆದಾರರಿಗೆ ವಾಪಸ್ ಮಾಡುವ ಸಾಧ್ಯತೆ ಇದೆ. ಆರೋಪಿ ಮನ್ಸೂರ್ ಮನೆ, ಕಚೇರಿಗಳ ಮೇಲೆ ಎಸ್ಐಟಿ ದಾಳಿ ನಡೆಸಿದಾಗ ಸುಮಾರು 300 ಕೋಟಿ ರೂ ಆಸ್ತಿ ಜಪ್ತಿ ಮಾಡಿಕೊಂಡಿದೆ.
ಐಎಂಒ ಕಂಪೆನಿ ಮಾಲೀಕ ಆತ್ಮಹತ್ಯೆ ಮಾಡಿಕೊಳ್ಳುವ ಸೌಂಡ್ ಕ್ಲಿಪ್ ಹಾಕಿದ ನಂತರ 1509 ಕೋಟಿಗೂ ಅಧಿಕ ಹಣ ವಂಚನೆ ಬೆಳಕಿಗೆ ಬಂದಿತು. ಅಂದಿನಿಂದ ಇಲ್ಲಿಯವರೆಗೂ ಕಂಪೆನಿ ವಿರುದ್ಧ 42 ಸಾವಿರ ಪ್ರಕರಣ ದಾಖಲಾಗಿವೆ. ಎಸ್ಐಟಿ ಈಗಾಗಲೇ ಮನ್ಸೂರ್ ಖಾನ್ ಮನೆ, ಕಚೇರಿ ಮತ್ತೆ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ಮಾಹಿತಿ ಹಾಗೂ ಹಣ ವಶಕ್ಕೆ ಪಡೆದಿದೆ. ಈಗಾಗಲೇ ದೇಶ ಬಿಟ್ಟು ದುಬೈನಲ್ಲಿ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿ ವಿರುದ್ಧ ಕೆಪಿಐಡಿಯಡಿ ಕೇಸ್ ದಾಖಲಾಗಿದ್ದು, ಮನ್ಸೂರ್ ವಿರುದ್ಧ ಕರ್ನಾಟಕ ಹೂಡಿಕೆದಾರರ ಹಿತರಕ್ಷಣಾ ಕಾಯ್ದೆಯಡಿ (ಕೆಪಿಐಡಿ) ಕೇಸ್ ದಾಖಲಾಗಿದೆ. ಆ್ಯಂಬಿಡೆಂಟ್ ಮಾದರಿಯಲ್ಲಿ ಐಎಂಎ ಕಂಪೆನಿಗೆ ಸೇರಿದ 22 ಆಸ್ತಿಗಳನ್ನು ಗುರುತು ಮಾಡಲಾಗಿದ್ದು, ಇದರಂತೆ ಆಸ್ತಿ ಹರಾಜು ಹಾಕಿ ಅದರಿಂದ ಬರುವ ಹಣ ಹೂಡಿಕೆದಾರರಿಗೆ ಹಿಂತಿರುವ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.