ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ರೂವಾರಿ, ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಹಾಗೂ ನಾಲ್ವರನ್ನು ಮತ್ತೆ ಸಿಬಿಐ ಸೆ.20ವರೆಗೂ ತಮ್ಮ ವಶಕ್ಕೆ ಪಡೆದುಕೊಂಡಿದೆ.
ಮಧ್ಯಂತರ ಚಾರ್ಜ್ಶೀಟ್ ಸಲ್ಲಿಸಿ ತನಿಖೆ ಚುರುಕುಗೊಳಿಸಲು ಮಲ್ಟಿಡಿಸೆಪ್ಲೆನರಿ ಇನ್ವೆಸ್ಟಿಗೇಷನ್ ತಂಡ ರಚಿಸಿ ಸಿಬಿಐ ಐಎಂಎ ಸಂಸ್ಥೆ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಸೇರಿ 8 ಮಂದಿ ಆರೋಪಿಗಳನ್ನು ಬಾಡಿ ವಾರೆಂಟ್ ಪಡೆದು ನಾಲ್ಕು ದಿನಗಳ ಕಾಲ ವಿಚಾರಣೆಗೆ ಒಳಪಡಿಸಲು 21ನೇ ಅಪರ ಸಿಟಿ ಸಿವಿಲ್ ಕೋರ್ಟ್ ನಿಂದ ಅನುಮತಿ ಪಡೆದಿತ್ತು.
ಸೋಮವಾರ ಕಸ್ಟಡಿ ಅವಧಿ ಅಂತ್ಯವಾಗಿದ್ದರಿಂದ ವಿಚಾರಣೆಗೆ ಒಳಪಡಿಸಿದ್ದ 8 ಮಂದಿ ಆರೋಪಿಗಳ ಪೈಕಿ ಮನ್ಸೂರ್, ನಿಜಾಮುದ್ದೀನ್, ನಾಸೀರ್ ಹುಸೇನ್, ನವೀದ್ ಅಹಮ್ಮದ್ ಇವರನ್ನು ಸೆ.20ರವರೆಗೆ ಸಿಬಿಐ ಕಸ್ಟಡಿಯಲ್ಲಿ ಮುಂದುವರೆಸಲು ನ್ಯಾಯಾಲಯ ಸಮ್ಮತಿಸಿದೆ.