ETV Bharat / state

ಐಎಂಎ ವಂಚನೆ ಪ್ರಕರಣ: ಎಫ್ಐಆರ್​​ನಲ್ಲಿ ಇದ್ದ ಹೆಸರು ಚಾರ್ಜ್​ಶೀಟ್​​ನಲ್ಲಿ ಕಣ್ಮರೆ!

ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪ್ರಕರಣದ ಪ್ರಾಥಮಿಕ ತನಿಖೆಯ ಚಾರ್ಜ್​ಶೀಟ್​​ಅನ್ನು ಸಿಬಿಐ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದು, ಈ ವೇಳೆ ಸಿಬಿಐ ಎಫ್ಐಆರ್​​ನಲ್ಲಿ ಇದ್ದ ಹೆಸರು ಚಾರ್ಜ್​ಶೀಟ್​​ನಲ್ಲಿ ಕಣ್ಮರೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಚಾರ್ಜ್ ಶೀಟ್ ನಲ್ಲಿ ಐವರು ಹೆಸರು ಕೈ ಬಿಟ್ಟ ಸಿಬಿಐ
author img

By

Published : Sep 30, 2019, 4:55 PM IST

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪ್ರಕರಣದ ಪ್ರಾಥಮಿಕ ತನಿಖೆಯ ಚಾರ್ಜ್​ಶೀಟ್​​ಅನ್ನು ಸಿಬಿಐ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದು, ಈ ವೇಳೆ ಸಿಬಿಐ ಎಫ್ಐಆರ್​​​​ನಲ್ಲಿ ಇದ್ದ ಹೆಸರು ಚಾರ್ಜ್​ಶೀಟ್​​ನಲ್ಲಿ ಕಣ್ಮರೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

26 ಮಂದಿ ವಿರುದ್ಧ ಸಿಬಿಐ ಎಫ್​​ಐಆರ್ ದಾಖಲು ಮಾಡಿತ್ತು. ಆದ್ರೆ ಚಾರ್ಜ್​ಶೀಟ್​​ನಲ್ಲಿ 20 ಆರೋಪಿಗಳ ಹೆಸರು ಮಾತ್ರ ಉಲ್ಲೇಖ ಮಾಡಿದ್ದು, ಬೆಂಗಳೂರು ನಗರ ಮಾಜಿ ಡಿಸಿ ವಿಜಯಶಂಕರ್, ಮಾಜಿ ಎಸಿಎಲ್​​ಸಿ ನಾಗರಾಜ್, ಬಿಡಿಎ ಎಂಜಿನಿಯರ್ ಪಿ.ಡಿ.ಕುಮಾರ್ ಮತ್ತು ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ಕೈ ಬಿಟ್ಟು ಇತ್ತೀಚಿಗಷ್ಟೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 5600 ಪುಟಗಳ ಬೃಹತ್ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ.

ima fraud
ಚಾರ್ಜ್​ಶೀಟ್​ನಲ್ಲಿ ಐವರು ಹೆಸರು ಕೈ ಬಿಟ್ಟ ಸಿಬಿಐ
ಹಾಗಾದ್ರೆ ಈ ನಾಲ್ವರು ಆರೋಪಿಗಳನ್ನ ಚಾರ್ಜ್​ಶೀಟ್​​ನಿಂದ ಕೈ ಬಿಟ್ಟಿದ್ದು ಏಕೆ? ಮಾಜಿ ಡಿಸಿ ವಿಜಯಶಂಕರ್ ಐಎಎಸ್‌ ಅಧಿಕಾರಿಯಾಗಿದ್ದಾರೆ. ಐಎಎಸ್ ಅಧಿಕಾರಿ ಮೇಲೆ ಚಾರ್ಜ್​ಶೀಟ್ ಮಾಡಲು ಸರ್ಕಾರದ ಅನುಮತಿ, ಹಾಗೆಯೇ ಯುಪಿಎಸ್​ಸಿ ಹಾಗೂ ರಾಷ್ಟ್ರಪತಿಗಳ ಅನುಮತಿ ಪಡೆದು ದೋಷಾರೋಪ ಪಟ್ಟಿ ಮಾಡಬೇಕು. ಸದ್ಯ ಮಾಜಿ ಡಿಸಿ ಮೇಲಿನ ಆರೋಪದ ಬಗ್ಗೆ ಅಧಿಕಾರಿಗಳು ವರದಿ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮಾಜಿ ಎಸಿಎಲ್​ಸಿ ನಾಗರಾಜ್, ಬಿಡಿಎ ಎಂಜಿನಿಯರ್ ಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ಉಲ್ಲೇಖ ಮಾಡಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು. ಸದ್ಯ ಇದ್ಯಾವುದನ್ನ ಉಲ್ಲೇಖ ಮಾಡದೆ ಇರುವುದು ಅನುಮಾನ ಮೂಡಿಸಿದೆ.

Intro:ಬಹುಕೋಟಿ ಐಎಂಎ ವಂಚನೆ ಪ್ರಕರಣ.
ಚಾರ್ಜ್ ಶೀಟ್ ನಲ್ಲಿ ಐವರು ಹೆಸರು ಕೈ ಬಿಟ್ಟ ಸಿಬಿಐ.

ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪ್ರಕರಣದ ಪ್ರಾಥಮಿಕ ತನಿಖೆಯ ಚಾರ್ಜ್ ಶೀಟ್ ಅನ್ನ ಸಿಬಿಐ ನ್ಯಾಯಲಕ್ಕೆ ಸಲ್ಲಿಕೆ ಮಾಡಿದ್ದು ಈ ವೇಳೆ ಸಿಬಿಐ ಎಫ್ಐಆರ್ ನಲ್ಲಿ ಇದ್ದ ಹೆಸರು ಚಾರ್ಜ್ ಶೀಟ್ ನಲ್ಲಿ ಕಣ್ಮರೆ ಯಾಗಿರುವ ವಿಚಾರ ಬೆಳಕಿಗೆ ಬಂದಿದೆ

೨೬ ಮಂದಿ ವಿರುದ್ಧ ಸಿಬಿಐ ಎಫ್ ಐ ಆರ್ ದಾಖಲು ಮಾಡಿತ್ತು.
ಆದ್ರೆ ಚಾರ್ಜ್ ಶೀಟ್ ನಲ್ಲಿ ೨೦ ಆರೋಪಿಗಳ ಹೆಸರು ಮಾತ್ರ ಉಲ್ಲೇಖ ಮಾಡಿದ್ದು ಬೆಂಗಳೂರು ನಗರ ಮಾಜಿ ಡಿಸಿ ವಿಜಯಶಂಕರ್, ಮಾಜಿ ಎಸಿ ಎಲ್ ಸಿ ನಾಗರಾಜ್, ಬಿಡಿಎ ಇಂಜಿನಿಯರ್ ಪಿ ಡಿ ಕುಮಾರ್ ಮತ್ತು ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ಕೈ ಬಿಟ್ಟು ಇತ್ತೀಚಿಗಷ್ಟೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ
5600 ಪುಟಗಳ ಬೃಹತ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಹಾಗಾದ್ರೆ ಈ ನಾಲ್ವರು ಆರೋಪಿಗಳನ್ನ ಚಾರ್ಜ್ ಶೀಟ್ ನಿಂದ ಕೈ ಬಿಟ್ಟಿದ್ದು ಏಕೆ.

ಮಾಜಿ ಡಿಸಿ ವಿಜಯಶಂಕರ್ ಐಎಎಸ್‌ ಅಧಿಕಾರಿಯಾಗಿದ್ದಾರೆ. ಐಎಎಸ್ ಅಧಿಕಾರಿ ಮೇಲೆ ಚಾರ್ಜ್ ಶೀಟ್ ಮಾಡಲು ಸರ್ಕಾರದ ಅನುಮತಿ ಹಾಗೆ .ಯುಪಿಎಸ್ಸಿ ಹಾಗೂ ರಾಷ್ಟ್ರಪತಿಗಳ ಅನುಮತಿ ಪಡೆದು ದೋಷಾರೋಪಣೆ ಪಟ್ಟಿ ಮಾಡಬೇಕು.

ಹಾಗೆ ಮಾಜಿ ಡಿಸಿ ವಿಜಯಶಂಕರ್ ಮೇಲೆ ಇರುವ ಆರೋಪದ ಬಗ್ಗೆಯುಪಿಎಸ್ಸಿಗೆ ಸಿಬಿಐ ಮಾಹಿತಿ ರವಾನೆಮಾಡಬೇಕು. ಸದ್ಯ ಮಾಜಿ ಡಿಸಿ ಮೇಲಿನ ಆರೋಪದ ಬಗ್ಗೆ ವರದಿ ಸಿದ್ದ ಪಡಿಸುತ್ತಿದ್ದಾರೆಎಂದು ತಿಳಿದುಬಂದಿದೆ.

ಇನ್ನೂ ಮಾಜಿ ಎಸಿ ಎಲ್ ಸಿ ನಾಗರಾಜ್ , ಬಿಡಿಎ ಇಂಜಿನಿಯರ್ ಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ಉಲ್ಲೇಖ ಮಾಡಲು ರಾಜ್ಯಸರಕಾರ ಅನುಮಪತಿ ಪಡೆಯಬೇಕು ಸದ್ಯ ಇದ್ಯಾವುದನ್ನ ಉಲ್ಲೇಖ ಮಾಡದೆ ಇರುವುದು ಬಹಳಅನುಮಾನಕ್ಕೆ ಎಡೆ‌ಮಾಡಿ‌ಕೊಟ್ಟಿದೆ.

Body:KN_BNG_04_IMA_7204498Conclusion:KN_BNG_04_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.