ಬೆಂಗಳೂರು : ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಎಸ್ಐಟಿ ತಂಡ ವಿಚಾರಣೆ ನಡೆಸುತ್ತಿದ್ದಾರೆ.
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಎಸಿ ನಾಗರಾಜ್ ಕೂಡ ಅರೆಸ್ಟ್ ಆಗಿದ್ದು, ಇವರು ತನಿಖೆಯಲ್ಲಿ ನೀಡಿದ ಮಾಹಿತಿ ಮೇರೆಗೆ ಬೆಂಗಳೂರು ನಗರ ಡಿ ಸಿ ವಿಜಯ್ ಶಂಕರ್ ಅವರನ್ನ ಇಂದು ಮುಂಜಾನೆ ವಿಚಾರಣೆಗೆ ಕರೆದೊಯ್ದಿದು ತನಿಖೆ ಮುಂದುವರೆಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಐಎಂಎ ಕೋಟಿ ಕೋಟಿ ಹಗರಣದಲ್ಲಿ ವಿಜಯ್ ಶಂಕರ್ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ. ಹಾಗೆ ಬಿಲ್ಡರ್ ಕೃಷ್ಣಮೂರ್ತಿಯನ್ನು ಕೂಡ ಎಸ್ ಐ ಟಿ ತಂಡ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.